ಲಾಕ್ ಡೌನ್ ವಿಸ್ತರಣೆಗೆ ಕನ್ನಡ ಭೂಮಿ ಆಗ್ರಹ

ಕಲಬುರಗಿ:ಮೇ.31: ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ರಾಜ್ಯದಲ್ಲಿ ಜಾರಿ ಇರುವ ಲಾಕ್ ಡೌನ್ ಜೂನ್ 30ರ ವರೆಗೆ ವಿಸ್ತರಿಸಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋಕಿನ ಪ್ರಕರಣಗಳು ಹೆಚ್ಚುತ್ತಿವೆ.ಸಾವುಗಳ ಸಂಖ್ಯೆ ಕಡಿಮೆಯಾಗಿಲ್ಲ.ಶೇಕಡವಾರು ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತಿದೆ.ಆದರೆ ಸಂಪೂರ್ಣ ತಗ್ಗಿಸಲು ಇನ್ನು ಒಂದು ತಿಂಗಳು ಲಾಕ್ ಡೌನ್ ವಿಸ್ತರಣೆ ಮಾಡಬೇಕು. ಎಂದರು.

ಕಲಬುರಗಿ,ಬೀದರ ಸೇರಿದಂತೆ ಕೆಲವು ಕಡೆ ಸೋಂಕು ನಿಯಂತ್ರಣದಲ್ಲಿದೆ.ಲಾಕ್ ಡೌನ್ ತೆರವುಗೊಳಿಸಿದರೆ ಮತ್ತೆ ಜನರ ಓಡಾಟ ಹೆಚ್ಚಾಗಿ ವೇಗದಲ್ಲಿ ಸೋಂಕು ಹರಡುತ್ತದೆ.ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ.ಲಾಕ್ ಡೌನ್ ಇರುವುದರಿಂದ ಜನರು ಮನೆಬಿಟ್ಟು ಹೊರಗೆ ಬರುತ್ತಿಲ್ಲ.ಗುಂಪು ಸೇರುವುದು, ಬೇಕಾಬಿಟ್ಟಿ ಓಡಾಟಕ್ಕೆ ಬ್ರೆಕ್ ಬಿದ್ದಿರುವುದರಿಂದ ಸೋಂಕು ಕಡಿಮೆಯಾಗಿದೆ.ಅಂತರ್ ರಾಜ್ಯ ಹಾಗೂ ಜಿಲ್ಲಾ ಗಡಿಗಳಲ್ಲಿ ಇನ್ನು ಬಿಗಿ ಭದ್ರತೆ ಮಾಡಬೇಕು.ಕದ್ದು ಮುಚ್ಚಿ ಮದುವೆ ಸಮಾರಂಭಗಳು ನಡೆಯುತ್ತಿವೆ ಅವುಗಳಿಗೆ ಕೂಡಲೇ ಕಡಿವಾಣ ಹಾಕಬೇಕು.ಲಾಕ್ ಡೌನ್ ಮುಂದುವರೆಸುವುದರಿಂದ ಬಡವರಿಗೆ ತೊಂದರೆಯಾಗದಂತೆ ಹೆಚ್ಚು ಪರಿಹಾರ ನೀಡಬೇಕು ಎಂದರು. ಮುಖ್ಯಮಂತ್ರಿಗಳು ಯಾವುದೇ ಒತ್ತಡಗಳಿಗೆ ಮಣಿಯದೆ ಜೂನ್ 30ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.