ಲಾಕ್ ಡೌನ್ ಮಧ್ಯೆ ರಾಜರೋಷವಾಗಿ ಅಕ್ರಮ ಮದ್ಯ ಮಾರಾಟ

ಗಬ್ಬೂರು.ಮೇ.೦೨-ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಕಠಿಣವಾದ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರು ಹಗಲು ರಾತ್ರಿಯೆನ್ನದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಮುಚಿ ಕಂಡು ಕಾಣದಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸರಕಾರ ಕೊರೊನಾ ರೋಗ ನಿಯಂತ್ರಣಕ್ಕೆ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿದ್ದರು ಗಬ್ಬೂರು ಗ್ರಾಮದಲ್ಲಿ ಅಯ್ಯಮ್ಮ ಜಿಂದಪ್ಪ ಕಬ್ಬೇರ, ಬೂದೆಮ್ಮ ಕಬ್ಬೇರ, ಉದಯಕುಮಾರ್ ದಾಸರ, ಬೂದೆಪ್ಪ ಹೊನ್ನಕೇರಿ, ನರಸಪ್ಪ ಗುಡಿ ಯಾದವ, ಸಬ್ಜಲಿ, ಮಲ್ಲಮ್ಮ ಇಡಿಗಾ ಇವರು ತಮ್ಮ ಮನೆಗಳ ಹತ್ತಿರ ಅಕ್ರಮ ಮದ್ಯವನ್ನು ರಾಜರೋಷವಾಗಿ ಹಗಲು ರಾತ್ರಿಯೆನ್ನದೇ ಮಾರಾಟ ಮಾಡುತ್ತಿದ್ದಾರೆ ಗ್ರಾಮದ ಗಲ್ಲಿ ಗಲ್ಲಿಗಳಲ್ಲೂ ಮಕ್ಕಳಿಗೆ ಹಾಲು ದೊರೆಯುವುದಿಲ್ಲ ಆದರೆ ಮಧ್ಯರಾತ್ರಿಯಲ್ಲಿ ಅಕ್ರಮ ಮದ್ಯ ದೊರೆಯುತ್ತದೆ ನನ್ನ ಗಂಡ ರಾತ್ರಿ ವೇಳೆಯಲ್ಲಿ ಹೋಗಿ ಕುಡಿದು ಬಂದು ಜಗಳ ಮಾಡುತ್ತಾನೆ ಇದರಿಂದ ನನಗೆ ಜೀವನ ಬೇಸರವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆ ತಿಳಿಸಿದರು ಅಲ್ಲದೇ ಇನ್ನೂ ಮುಂದಾದರು ಈ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಂಡು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಾರೆಂಬ ಭರವಸೆ ಇದೆ ಎಂದು ಸಾರ್ವಜನಿಕರು ಆಶಾಭಾವನೆ ವ್ಯಕ್ತಪಡಿಸಿದರು.