ಲಾಕ್ ಡೌನ್ ಮಧ್ಯೆ ಅಂಗಡಿ ಓಪನ್ ಮಾಡಿದವರಿಗೆ ದಂಡ

ಹಗರಿಬೊಮ್ಮನಹಳ್ಳಿ.ಏ.೩೦ ಕರ್ನಾಟಕದಲ್ಲಿ ಕೊರೋನ ಎಂಬ ಹೆಮ್ಮಾರಿ ಎರಡನೇ ಅಲೆ ರೂಪಾಂತರ ಪಡೆದು ಮನುಷ್ಯರ ಜೊತೆ ಚೆಲ್ಲಾಟವಾಡುತ್ತಿರುವಾಗ ಸಾವು ನೋವಿನ ಸಂಖ್ಯೆ ಹೆಚ್ಚಾಗಿ ಸರ್ಕಾರ 15 ದಿನಗಳ ಮಟ್ಟಿಗೆ ಲಾಕ್ ಡೌನ್ ಆದೇಶ ಹೊರಡಿಸಿದೆ. ದಿನಬಳಕೆಯ ಸಾಮಗ್ರಿಗಳನ್ನು ಹೊರತುಪಡಿಸಿ ತರಕಾರಿ ಹಣ್ಙು ವ್ಯಾಪಾರ ಮಾಡಲಿಕ್ಕೆ ಸಮಯ ನಿಗದಿಯಾಗಿದ್ದು 10 ಗಂಟೆಯ ನಂತರ ಯಾವುದೇ ವ್ಯಾಪಾರ ವ್ಯವಹಾರ ನಡೆಸುವಂತಿಲ್ಲ ಎಂದು ಆದೇಶವಿದ್ದರೂ ಕೆಲವು ಅಂಗಡಿಯ ಮಾಲೀಕರು ಅಂಗಡಿ ಓಪನ್ ಮಾಡಿ ವ್ಯವಹಾರ ಮಾಡುತ್ತಿರುವರ ಮೇಲೆ ಪುರಸಭೆ ಅಧಿಕಾರಿಗಳು ದಂಡ ಹಾಕುವ ಮೂಲಕ ಎಚ್ಚರಿಸಿದರು. ಇಲ್ಲಿ ಬಜಾರದ ಅಂಗಡಿ ಮಾಲಿಕನಿಗೆ ಐದುನೂರು ದಂಡ ಹಾಕುವ ಮೂಲಕ ಪುರಸಭೆ ಸಿಬ್ಬಂದಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಹಾಯಕರಾದ ನಾಗರತ್ನ, ಚಂದ್ರು, ಮಾರೆಪ್ಪ, ಮಾರುತಿ, ಇತರರು ಇದ್ದರು.