ಲಾಕ್ ಡೌನ್ ನಿಯಮ ಪಾಲಿಸದವರಿಗೆ ಬಿತ್ತು ದಂಡ

ಜಗಳೂರು.ಮೇ.೫; ಅವಧಿ ಮುಗಿದರೂ ಸುಖಾಸುಮ್ಮನೆ ಓಡಾಡುತ್ತಿರುವ ಸಾರ್ವಜನಿಕರು ಬೈಕ್ ಸವಾರರಿಗೆ ಬಿಸಿ ಮುಟ್ಟಿಸುವಲ್ಲಿ ಪಿ.ಎಸ್.ಐ ಸಂತೋಷ್ ಬಾಬೂಜಿ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ ಬಣಕರ್ ನಿರತರಾಗಿದ್ದಾರೆ.ಪಟ್ಟಣದಲ್ಲಿ ಬೆಳಿಗ್ಗೆ 6 ರಿಂದಲೇ 10 ಗಂಟೆಯವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಸೇರಿದಂತೆ ಹಾಗೂ ವಾಹನ ಸವಾರರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು 10 ಗಂಟೆಯ ನಂತರ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿಸಿ ಪ್ರಮುಖ ರಸ್ತೆಗಳಿಗೆ ಅಡ್ಡ ಹಾಕಿ ದಂಡವನ್ನು ಹಾಕುವ ಮುಖಾಂತರ ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದರು.ಇದಾಗಿಯು ಕೂಡ ಸುಖಾಸುಮ್ಮನೆ ಓಡಾಡುತ್ತಿರುವ ಬೈಕ್ ಸವಾರರನ್ನು ವಿಚಾರಣೆ ನಡೆಸಿದರು. ಮಾಸ್ಕ್  ಹಾಕಿಕೊಳ್ಳದೆ ಓಡಾಡುತ್ತಿರುವ ವ್ಯಕ್ತಿಗಳಿಗೆ ದಂಡ ವಿಧಿಸಿ ಪೊಲೀಸರು ಬಿಸಿ ಮುಟ್ಟಿಸಿದರು ಅಷ್ಟೇ ಅಲ್ಲದೆ ಪ್ರಮುಖ ಬೀದಿಗಳಲ್ಲಿ ಗಸ್ತು ತಿರುಗುವುದರ ಮೂಲಕ ಮೂಲಕ  ಲಾಕ್ಡೌನ್ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಲಾಯಿತು.ಒಟ್ಟಿನಲ್ಲಿ ಜಗಳೂರು ಪಟ್ಟಣದಲ್ಲಿ ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಂಡುಬಂತು ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ ಬಣಕಾರ್ ಸಾಥ್ ನೀಡಿದರು