ಲಾಕ್ ಡೌನ್ ನಲ್ಲೂ ನಿಲ್ಲದ ಆರ್ ಟಿ ಓ ಅಧಿಕಾರಿಗಳ ಹಣ ವಸೂಲಿ

ಬಳ್ಳಾರಿ ಮೇ 31 : ಲಾಕ್ ಡೌನ್ ಸಂಕಷ್ಟದಲ್ಲೂ‌ ವಾಹನಗಳ ಚಾಲಕರು ಮತ್ತು‌ ಮಾಲೀಕರಿಂದ ವಿನಾ ಕಾರಣ ಹಣ ವಸೂಲಿ ಮಾಡುವುದನ್ನು ಇಲ್ಲಿನ ಆರ್ ಟಿ ಓ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಬಳ್ಳಾರಿ ಜಿಲ್ಲಾ ಆರು ಚಕ್ರ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮೋಹನ್ ಆರೋಪಿಸಿದ್ದಾರೆ.
ಅವರು ಈ‌ ಕುರಿತು ಪತ್ರಿಕಾ ಹೇಳಿಕೆ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ,  ಗುಲ್ಬರ್ಗ  ವಿಭಾಗದ ಸಾರಿಗೆ ಪ್ರಾದೇಶಿಕ ಅಧಿಕಾರಿಗಳಿಗೆ ಪತ್ರ ಬರೆದು     ಬಳ್ಳಾರಿ  ಆರ್ ಟಿ ಓ ಶೇಖರ್ ಮತ್ತು ಎಆರ್ ಟಿ ಓ  ಗಿರಿಯವರು  ಬಳ್ಳಾರಿ ಹೊರವಲಯದ ಹಲಕುಂದಿ ಬೈಪಾಸ್ ರಸ್ತೆಯಲ್ಲಿ ಸರಕು ಸಾಗಣೆ ಲಾರಿಗಳನ್ನು ತಡೆಗಟ್ಟಿ ಬಲವಂತವಾಗಿ ಚಾಲಕರಿಂದ ಬಹಿರಂಗವಾಗಿಯೇ   ಹಣ ವಸೂಲಿ  ಮಾಡುತ್ತಿದ್ದಾರೆ.
ಕೊರೋನ  ಲಾಕ್ಡೌನ್   ಸಂದರ್ಭದಲ್ಲಿ   ಲಾರಿ ಮಾಲೀಕರು ಬಾಡಿಗೆ ಇಲ್ಲದೆ ಖಾಸಗಿ ಹಣಕಾಸು ಕಂಪನಿಯಲ್ಲಿ  ಸಾಲದ ಕಂತುಗಳನ್ನು ಪಾವತಿಸದಿರುವುದರಿಂದ  ಸೀಜ್ ಮಾಡುತ್ತಿದ್ದಾರೆ. ಲಾರಿ ಮಾಲೀಕರಾಗಲಿ  ಚಾಲಕರಾಗಲಿ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯು  ಕೂಡ ಯಾವುದೆ  ಅನಧಿಕೃತ ಕಾನೂನು ಬಾಹಿರ  ಚಟುವಟಿಕೆ ಮಾಡದೆ   ಅಧಿಕೃತ ದಾಖಲೆ ಇರಿಸಿ ಕೊಂಡು ಲಾರಿಗಳನ್ನು ಚಲಾಯಿಸಿಕೊಂಡು   ಜೀವನ  ಸಾಗಿಸಿ ಕೊಂಡು  ಬದುಕುತ್ತಿದ್ದರೂ   ಬಳ್ಳಾರಿಯ ಆರ್ ಟಿ ಓ ಅಧಿಕಾರಿಗಳು ಅನಗತ್ಯವಾಗಿ  ದಾಖಲೆಗಳ ಪರಿಶೀಲನೆ ನೆಪದಲ್ಲಿ ಲಾರಿ ಚಾಲಕರಿಗೆ ಸಾವಿರಾರು ರೂಪಾಯಿಗಳನ್ನು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ. ಒಂದು ವೇಳೆ ಹಣ  ಕೊಡದಿದ್ದರೆ ದೂರು ದಾಖಲಿಸಿ ನಿಮ್ಮ ಲಾರಿಗಳನ್ನು ಸೀಜ್ ಮಾಡಿ ನಿಮ್ಮನ್ನು ಮತ್ತು ನಿಮ್ಮ ಲಾರಿ ಮಾಲೀಕರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಹಿಂಸೆ ನೀಡುತ್ತಾರೆ ಎಂದು ಸ್ಥಳೀಯ ಲಾರಿ ಮಾಲೀಕರು ನಮಗೆ  ದೂರು ನೀಡಿದ್ದಾರೆ.  ಇದನ್ನು ನಾವು ಮನಗಂಡು ನಿಮಗೆ ಈ ದೂರು‌ ನೀಡುತ್ತಿದೆ. ಈ ಅಧಿಕಾರಿಗಳ ಮೇಲೆ ನೀವು ಸೂಕ್ತವಾದ ರೀತಿಯಲ್ಲಿ ಕಾನೂನು ಕ್ರಮ ತೆಗೆದು ಕೊಂಡು   ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಲಿದೆ. ಇದಕ್ಕೆ ನಿರ್ಲಕ್ಷ್ಯ ಮತ್ತು ಬೇಜವಬ್ದಾರಿ ತೋರಿದರೆ  ಮುಂದಿನ ದಿನಗಳಲ್ಲಿ  ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆಯನ್ನು  ರಾಜ್ಯದಾದ್ಯಂತ ಹಮ್ಮಿ  ಕೊಳ್ಳಲಾಗುತ್ತದೆ  ಎಂದು ಮೋಹನ್ ಎಚ್ಚರಿಕೆ ನೀಡಿದ್ದಾರೆ.