ಲಾಕ್ ಡೌನ್ ತೆರವು, ತವರು ಸೇರಿದ 1 ಕೋಟಿ ವಲಸಿಗರು; ಸಿಂಗ್

ನವದೆಹಲಿ, ಸೆ.22- ದೇಶಗಳಲ್ಲಿ ಲಾಕ್ ಡೌನ್ ಸಮಯ ಸೇರಿದಂತೆ ‌ಮಾರ್ಚ್ -ಜೂನ್ ತಿಂಗಳ ನಡುವೆ 1 ಕೋಟಿ ವಲಸೆ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.

ಲಾಕ್‌ಡೌನ್ ಸಮಯದಲ್ಲಿ ಮಾರ್ಚ್ ನಿಂದ ಜೂನ್ ಅಂತ್ಯದವರೆಗೂ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಜನರು ತಮ್ಮ ಊರುಗಳಿಗೆ ತಲುಪಿದ್ದಾರೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ತಿಳಿಸಿದ್ದಾರೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಅವರು ಮಾರ್ಚ್ ನಿಂದ ಜೂನ್ ಅಂತ್ಯದ ವರೆಗೆ ಒಂದು ಕೋಟಿಗೂ ಹೆಚ್ಚು ಜನರು ತಮ್ಮ ತಮ್ಮ ಊರುಗಳನ್ನು ತಲುಪಿದ್ದಾರೆ.ಲಾಕ್ಡೌನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ಊರುಗಳು ಸೇರಿದವರು ಸೇರಿದಂತೆ ಒಟ್ಟಾರೆ 1ಕೋಟಿ 6 ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಿದ್ದಾರೆ‌ ಎಂದರು

ಕೊರೊನಾ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ಸಮಯದಲ್ಲಿ 81 ಸಾವಿರ 385 ಅಪಘಾತಗಳು ಸಂಭವಿಸಿವೆ. ಮಾರ್ಚ್‌ ಮತ್ತು ಜೂನ್ ತಿಂಗಳಲ್ಲಿ 29,415 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಮಾಹಿತಿಯನ್ನು ಆದರಿಸಿ ಈ ವಿಷಯ ತಿಳಿಸಿದ್ದಾರೆ.

ರಸ್ತೆ ಅಪಘಾತ ಮತ್ತು ಸಾವುನೋವಿಗೆ ಸಂಬಂಧಿಸಿದಂತೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವಾಲಯ ಯಾವುದೇ ಪ್ರತ್ಯೇಕ ಮಾಹಿತಿಯನ್ನು ಸಂಗ್ರಹಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಕಾಲಕಾಲಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ವಲಸೆ ಕಾರ್ಮಿಕರಿಗೆ ಆಶ್ರಯ, ಆಹಾರ, ನೀರು, ಸೇರಿದಂತೆ ಆರೋಗ್ಯ ಸೇವೆಯನ್ನು ಒದಗಿಸುವ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಅದರಂತೆ ರಾಜ್ಯ ಸರ್ಕಾರಗಳು ಸೂಚನೆಯನ್ನು ಎಂದು ತಿಳಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಕಾರ್ಮಿಕ ಸಚಿವಾಲಯವು ಕೂಡ ಹೆದ್ದಾರಿಗಳಲ್ಲಿ ಉಪಹಾರ ಕುಡಿಯುವ ನೀರು, ಔಷಧಿ ಬಟ್ಟೆ ಚಪ್ಪಲಿ ಸೇರಿದಂತೆ ಇನ್ನಿತರ ಅಗತ್ಯ ಮೂಲಸೌಕರ್ಯ ಮಾಡಬೇಕಿದೆ ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರು ದೇಶದ ವಿವಿಧ ಭಾಗಗಳಿಂದ‌‌ ತಮ್ಮ ಸ್ವ ಗ್ರಾಮಗಳಿಗೆ ತೆರಳಲು ಏಪ್ರಿಲ್ 29 ರಿಂದ ಮೇ 1ರ ತನಕ ವಿಶೇಷ ಶ್ರಮಿಕ ರೈಲುಗಳನ್ನು ಕೊಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.