ಲಾಕ್ ಡೌನ್ ನಲ್ಲಿ ವಿಮಾನ ರದ್ದು: 1030 ಕೋಟಿ ರೀಫಂಡ್ ಪಾವತಿ

ನವದೆಹಲಿ, ಮಾ.24- ಲಾಕ್‌ ಡೌನ್ ಸಮಯದಲ್ಲಿ ವಿಮಾನ ಸಂಚಾರ ರದ್ದುಗೊಂಡ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ 1030 ಕೋಟಿ ರೂಪಾಯಿ ಹಣವನ್ನು ಮರು ಪಾವತಿ ಮಾಡುವುದಾಗಿ ಪ್ರಕಟಿಸಿದೆ.

ಲಾಕ್ ಸಮಯದಲ್ಲಿ ವಿಮಾನ ಸಂಚಾರಕ್ಕಾಗಿ ಟಿಕೆಟ್ ಬುಕ್ ಮಾಡಿದ್ದ ಟಿಕೆಟ್ ಮೊತ್ತದಲ್ಲಿ ವಿಮಾನ ಯಾನ ಸಚಿವಾಲಯ ಶೇ.99.5 ರಷ್ಟು ಹಣ ಪಾವತಿ ಮಾಡಲಾಗುವುದು ಎಂದು ವಿಮಾನ ಯಾನ ಸಚಿವಾಲಯ ತಿಳಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಸಂಪೂರ್ಣ ಮೊತ್ತ ವನ್ನು ಸಂಪೂರ್ಣ ಪಾವತಿ ಮಾಡಿದೆ.

ಈ ಕುರಿತು ಎಂದಿಗೂ ವಿಮಾನಯಾನ ಸಂಸ್ಥೆಯ ವಕ್ತಾರರು ಪ್ರತಿಕ್ರಿಯೆ ನೀಡಿ 1030 ಕೋಟಿ ಟಿಕೆಟ್ ಕಾಯ್ದಿರಿಸಿದ ಟಿಕೆಟ್ ಮೇಲಿನ ಮೊತ್ತವನ್ನು ಪಾವತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.ಯಾರೆಲ್ಲಾ ಟಿಕೆಟ್ ಕಾಯ್ದಿರಿಸಿದ್ದರೂ ಅಂತಹ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾವುದು ಎಂದು ತಿಳಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ವಿಮಾನ ಟಿಕೆಟ್ ಕಾಯ್ದಿರಿಸಿದ್ದು ವಿಮಾನ ಸಂಚಾರ ಮಾಡದ ಹಿನ್ನೆಲೆಯಲ್ಲಿ ಹಣ ಮರು ಪಾವತಿ ಮಾಡುವಂತೆ ಅನೇಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

2020ರ ಮಾರ್ಚ್ ಅಂತ್ಯದಿಂದ ಮೇ ತಿಂಗಳ ನಡುವೆ ಟಿಕೆಟ್ ಬುಕ್ ಆಗಿದ್ದ ಪ್ರಯಾಣಿಕರ ಸಂಪೂರ್ಣ ಟಿಕೆಟ್ ಮೊತ್ತವನ್ನು ಪಾವತಿ‌ಮಾಡಲು ಸಿದ್ದರಿರುವುದಾಗಿ ತಿಳಿಸಿದೆ.