ಲಾಕ್ ಡೌನ್ ನಲ್ಲಿ ಅರಳಿದ ಪ್ರೀತಿ….

ಕನ್ನಡದಲ್ಲಿ ಸದ್ಯದ ಮಟ್ಟಿಗೆ ವಿನೂತನ ಪ್ರಯತ್ನ ಎನ್ನವಂತೆ ಹೊಸ ಚಿತ್ರ ಸದ್ದುಗದ್ದಲವಿಲ್ಲದೆ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಹೊಸತನ ಅಂದರೆ ಏನು? ಚಿತ್ರರಂಗದಲ್ಲಿ ಹೊಸ‌ತನ‌ದ ಪದ ಪದೇ ಪದೇ ಬಳಕೆಯಾಗುತ್ತಿರುವ ಕಾಲಘಟ್ಟದಲ್ಲಿ ನಿಜಕ್ಕೂ ಒಂದಷ್ಟು‌ ಕುತೂಹಲ ಮೂಡಿಸುವ ಪ್ರಯತ್ನ ಅದುವೇ ” ಲವ್ ಇನ್ ದಿ ಟೈಮ್ ಆಫ್ ಕೋವಿಡ್”.ಲಾಕ್ ಡೌನ್ ಸಮಯದಲ್ಲಿ ಅರಳಿದ ಪ್ರೀತಿಯನ್ನು ರೋಮಾಂಟಿಕ್ ಮತ್ತು ಹಾಸ್ಯದ ಜೊತೆ‌ ಕಟ್ಟಿಕೊಡಲು ಮುಂದಾಗಿದ್ದಾರೆ‌ ನಿರ್ದೇಶಕ ಜಯಂತ್ ಸೀಗೆ.

ಚಿತ್ರದಲ್ಲಿರುವ ನಾಯಕ ನಾಯಕಿ ಒಬ್ಬರನ್ನೊಬ್ಬರು ಭೇಟಿ ಯಾಗದೇ ಬೇರೆ ಬೇರೆ ಮನೆಯಲ್ಲಿದ್ದರೂ ರೋಮಾನ್ಸ್ ಮಾಡ್ತಾರೆ, ಅದು ಲಾಕ್ ಡೌನ್ ಸಮಯದಲ್ಲಿ ಹೇಗೆ ಎಲ್ಲಿಗೆ ಬಂತು ಎನ್ನುವ ತಿರುಳನ್ನಿಟ್ಟುಕೊಂಡು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ.

ಚಿತ್ರದಲ್ಲಿ ನಾಯಕರಾಗಿ ರಾಕೇಶ್ ಮಯ್ಯ ಮತ್ತು ನಾಯಕಿಯಾಗಿ ಶೃತಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಜಮುನಾ ಸೀಗೆ ಚಿತ್ರಕ್ಕೆ ಬಂಡವಾಳ‌ ಹಾಕುವ ಮೂಲಕ ಸಹೋದರನ ಪ್ರಯತ್ನ ಬೆನ್ನೆಲುಬಾಗಿ ನಿಂತಿದ್ದಾರೆ.

ಹೀಗಾಗಲೇ ಚಿತ್ರ‌ ಶೇ. 90 ರಷ್ಟು ಚಿತ್ರೀಕರಣ ಮುಗಿದಿದೆ.ಅಳಿದುಳಿದ ಭಾಗದ ಚಿತ್ರೀಕರಣ ಬಾಕಿ ಇದೆ. ಲಾಕ್ ಡೌನ್ ಬಂದು ಸದ್ಯಕ್ಕೆ ನಿಂತಿದೆ. ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಜಯಂತ್ , ಲಾಕ್ ಡೌನ್ ಸಮಯದಲ್ಲಿ ನಡೆಯುವ ಕಥೆ.ಕಳೆದ ವರ್ಷ ಮಾರ್ಚ್ – ಏಪ್ರಿಲ್ ನಲ್ಲಿ ನಡೆಯವ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗುತ್ತಿದೆ.ಡಿಸೆಂಬರ್, ಏಪ್ರಿಲ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಇದೊಂದು ರೋಮಾಂಟಿಕ್ ಕಾಮಿಡಿ,‌ ಕಾಲೇಜು ಸಮಯದಲ್ಲಿ ಸಂಪರ್ಕ ಕಡಿತ ಮಾಡಿಕೊಂಡಿದ್ದ ನಾಯಕ ,ನಾಯಕಿ ಲಾಕ್ ಡೌನ್ ಸಮಯದಲ್ಲಿ ಸಿಕ್ಕಾಗ ನಡೆಯುವ ಕಥೆ. ಅದು ರೊಮಾನ್ಸ್‌ ತನಕ ಹೋಗುತ್ತದೆ. ಲಾಕ್ ಡೌನ್ ಆರೋಗ್ಯದ ಮೇಲೆ ಹೇಗೆ ಎಪೆಕ್ಟ್ ಆಗಿದೆ.ಕೊನೆ್ಗೆಗೆ ಸೇರ್ತಾರಾ‌ ಎನ್ನುವುದು ಕಥೆ.

ಲಾಕ್ ಡೌನ್ ನಡೆಯುವ ಕಥೆ ಆಗಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಲೊಕೋಷನ್ ನಲ್ಲಿ ಪ್ರತಿ ಪಾತ್ರಕ್ಕೂ ಒಂದೊಂದು ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.ಯಾರೂ ಕೂಡ ಜೊತೆಯಾಗಿ ಕೆಲಸ ಮಾಡಿಲ್ಲ. ಒಳಾಂಗಣ ದಲ್ಲಿ ನಡೆಯುವ ಕಥೆ .ಹಾಡಿನಲ್ಲಿ ಡ್ರೀಮ್ ನಲ್ಲಿ ಹೊರಗಡೆ ಹೋಗಿದ್ದೆವು ಅದರ ಸ್ವಲ್ಪ ಭಾಗ‌ಮತ್ತೆ ಒಳಾಂಗಣದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು

” ಲವ್ ಇನ್ ದಿ ಟೈಮ್ ಆಪ್ ಕಾಲರ” ಪ್ರತಿಷ್ಠಿತ ಪುಸ್ತಕ ಚಿತ್ರಕ್ಕೆ ಬಂದಿದೆ.ಅದುವೇ ಚಿತ್ರದ ಶೀರ್ಷಕೆ ಪ್ರೇರಣೆ‌‌ ಇದೀಗ ಲವ್ ಇನ್‌ದಿ ಡೈಮ್ ಆಫ್ ಕೊವಿಡ್ ಆಗಿದೆ ಎನ್ನುವ ವಿವರ ಅವರದು.

ಚಿತ್ರದಲ್ಲಿ ಅಪೂರ್ವಭಾರದ್ವಾಜ್, ಗೌತಮ್, ಶಂಕರಮೂರ್ತಿ, ಪವನ್‍ವೇಣುಗೋಪಾಲ್, ಶ್ರವಣ್‍ಐತಾಳ್ ಮತ್ತಿತರಿದ್ದಾರೆ. ಚಿತ್ರಕ್ಕೆ ಬಿ.ಜೆ ಭರತ್, ಪ್ರವಣ ಕಾರಂತ್‌,ಸಂಜೀವ ಶಾಸ್ತ್ರಿ ಛಾಯಾಗ್ರಹಣ ಪ್ರದೀಪ್‍ರೆಡ್ಡಿ ಛಾಯಾಗ್ರಹಣವಿದೆ.

ವಿಭಿನ್ನ ಪ್ರಯತ್ನ

“ಸಂಪರ್ಕ ಕಡಿತಗೊಂಡಿದ್ದ ಹುಡುಗ,ಹುಡುಗಿ ಲಾಕ್ ಡೌನ್ ಸಮಯದಲ್ಲಿ ಮತ್ತೆ ಸಂಪರ್ಕಕ್ಕೆ ಬಂದು ಅವರಿಬ್ಬರ‌ ನಡುವೆ ನಡೆಯುವ ರೋಮಾಂಟಿಕ್ ಕಾಮಿಡಿ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲಾಗುತ್ತಿದೆ”

– ಜಯಂತ್ ಸೀಗೆ, ನಿರ್ದೇಶಕ