ಲಾಕ್ ಡೌನ್ ಜಾರಿ ಕೆಎಸ್ ಅರ್ ಟಿಸಿಗೆ 560 ಕೋಟಿ ರೂ ನಷ್ಟ

ಬೆಂಗಳೂರು, ಜೂ 7-ಕೊರೊನಾ ಸೋಂಕು ತಡೆಗೆ ರಾಜ್ಯದಲ್ಲಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ಸಾರಿಗೆ ನಿಗಮಗಳಿಗೆ 560 ಕೋಟಿ ರೂ ನಷ್ಟವಾಗಿದೆ.
ಈ ಕುರಿತು ಸಾರಿಗೆ ಇಲಾಖೆ ಮಾಹಿತಿ ನೀಡಿದ್ದು, ನೌಕರರಿಗೆ ಸಂಬಳ ನೀಡಲು ನಿಗಮದಲ್ಲಿ ಹಣವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಕ್ ಡೌನ್‌ ಜಾರಿಯಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ನಾಲ್ಕು ನಿಗಮಗಳಿಗೆ 560 ಕೋಟಿ ರೂ. ನಷ್ಟ ಉಂಟಾಗಿದೆ. ಈ ಮೊದಲು ಸಾರಿಗೆ ನೌಕರರು ಮುಷ್ಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಜರದ‌ ಹಾದಿ ಹಿಡಿದಿದ್ದರಿಂದ ಭಾರೀ ನಷ್ಟ ಅನುಭವಿಸಿತ್ತು. ಇದರಿಂದ ಇನ್ನೇನು ಹೊರಬರುವಷ್ಟರಲ್ಲಿ ಲಾಕ್ ಡೌನ್ ಜಾರಿ ಇಲಾಖೆಯನ್ನು ಮತ್ತಷ್ಟು ಸಂಕಷ್ಷಕ್ಕೆ ತಳ್ಳಿದೆ ಎಂದು ಹೇಳಿದೆ.
ಮತ್ತೊಂದೆಡೆ ಬಿಎಂಟಿಸಿಯು ನಷ್ಟ ಅನುಭವಿಸಿದೆ. ಬಿಎಂಟಿಸಿ ಪ್ರತಿದಿನ‌ ಮೂರು ಕೋಟಿ ರೂ ಸಂಗ್ರಹವಾಗುತ್ತಿತ್ತು. 40 ದಿನಗಳಿಂದ ಲಾಕ್ ಡೌನ್ ಜಾರಿಯಿಂದಾಗಿ ಬಿಎಂಟಿಸಿಗೆ 120 ಕೋಟಿ ರೂ ನಷ್ಷ ಉಂಟಾಗಿದೆ.