ಲಾಕ್ ಡೌನ್ ಗೆ ಜನ ಸ್ಪಂದನೆ – ಕೂಡ್ಲಿಗಿ ಪಟ್ಟಣವೇ ಸ್ಥಬ್ದ

ಕೂಡ್ಲಿಗಿ.ಮೇ. 1:- ಕೊರೋನಾ ಎರಡನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಡೀ ದೇಶದ ಜನಜೀವನವನ್ನೇ ಭಯದ ಭೀತಿಯಲ್ಲಿ ಮುಳುಗಿಸಿರುವುದನ್ನು ಸಾಮಾಜಿಕ ಜಾಲತಾಣ, ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ನೋಡಿದ ಪಟ್ಟಣದ ಜನತೆ ಸರ್ಕಾರದ ಜನತಾ ಕರ್ಫ್ಯೂಗೆ ಸ್ಪಂದಿಸಿದ್ದು ಇಡೀ ಕೂಡ್ಲಿಗಿ ಪಟ್ಟಣದ ಓಣಿ ಓಣಿಗಳು ಸಹ ಸ್ಥಬ್ಧವಾಗಿದೆ ಎಂದು ಹೇಳಬಹುದು. ಬೆಳಿಗ್ಗೆ 6ಗಂಟೆಯಿಂದ 10ಗಂಟೆವರೆಗೂ ಲಾಕ್ ಡೌನ್ ಸಡಿಲಿಕೆಯಲ್ಲಿ ದಿನಸಿ ಖರೀದಿಸಿ ಮನೆ ಸೇರುತ್ತಿರುವ ಜನತೆ ಆರೋಗ್ಯದ ಕಡೆ ಒತ್ತುಕೊಟ್ಟಿದ್ದರಿಂದ ಇಡೀ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಅತಿಕಡಿಮೆ ಕೊರೋನಾ ಪಾಸಿಟಿವ್ ಪ್ರಕರಣ ಕೂಡ್ಲಿಗಿ ತಾಲೂಕಿನಲ್ಲಿ ಕಂಡುಬರುತ್ತಿವೆ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಹೋಬಳಿವಾರು ಕೋವಿಡ್ ನಿಯಂತ್ರಣ ಸಭೆನಡೆಸಿ ಕೊವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಹಾಗೂ ಕೋವಿಡ್ ಎರಡನೇ ಅಲೆ ಜೋರಾಗಿದ್ದು ಅದರ ನಿಯಂತ್ರಣಕ್ಕೆ ಜನರು ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ ಅಲ್ಲದೆ ತಾಲೂಕು ಆಡಳಿತದ ಕೋವಿಡ್ ಟಾಸ್ಕ್ ಪೋರ್ಸ್ ಸಮಿತಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್ ನಿಯಂತ್ರಣದ ಕ್ರಮಗಳು, ಆರೋಗ್ಯ ಇಲಾಖೆಯ ವಾಟ್ಸಪ್ ಗ್ರೂಪ್ ನ ಮಾಹಿತಿ ಹಾಗೂ ಪಾಸಿಟಿವ್ ಪ್ರಕರಣದವರಿಗೆ ನೀಡುವ ಔಷಧಿ ಉಪಚಾರ ಎಲ್ಲದರಲ್ಲೂ ಜಾಗೃತಿ ಮೂಡಿಸುತ್ತಿದ್ದು ಕೂಡ್ಲಿಗಿ ಪಟ್ಟಣದಲ್ಲಿ ಪಂಚಾಯತಿಯ ಸ್ಯಾನಿಟೈಸರ್ ಸಿಂಪಡಣೆ ಹಾಗೂ ಪೊಲೀಸ್ ಇಲಾಖೆ ಮತ್ತು ಪಟ್ಟಣಪಂಚಾಯತಿಯವರು ಮಾಸ್ಕ್ ಹಾಕದವರಿಗೆ ಹಾಕುವ ದಂಡ ಹಾಗೂ ನಿಯಮ ಪಾಲಿಸದವರಿಗೆ ಪೋಲೀಸರ ಲಾಠಿರುಚಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಕ್ಷಿಯಾಗಿವೆ ಅಷ್ಟೇ ಅಲ್ಲದೆ ಪೊಲೀಸ್ ವಾಹನ ಹಾಗೂ ಪಟ್ಟಣ ಪಂಚಾಯತಿ ವಾಹನದ ದ್ವನಿವರ್ಧಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ಜನರು ತಪ್ಪದೆ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದು ಆಗಾಗ ಸೋಪಿನಿಂದ ಕೈತೊಳಿದುಕೊಳ್ಳಿ ಎಂದು ಎಚ್ಚರಿಸುವ ಎಚ್ಚರಿಕೆ ಗಂಟೆ ಕಿವಿಗೆ ತಲುಪುವ ಮಾಹಿತಿಯಿಂದ ಕೂಡ್ಲಿಗಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣದಲ್ಲಿದೆಯೆಂದು ಹೇಳಬಹುದಾಗಿದೆ. ಇಂತಹ ಬಿಗಿ ಕ್ರಮದಲ್ಲೂ ಇತ್ತೀಚಿಗೆ ಕೋವಿಡ್ ನಿಂದ ಮೃತಪಟ್ಟ ಪಟ್ಟಣದ ಶಿಕ್ಷಕ ಯಲ್ಲಪ್ಪ ಹಾಗೂ ಇತರರ ಸಾವು ಪಟ್ಟಣದ ಹಾಗೂ ಗ್ರಾಮೀಣ ಮಟ್ಟದ ಜನತೆಯನ್ನು ಬೆಚ್ಚಿಬೀಳಿಸಿದೆ ಎಂದು ಹೇಳಬಹುದಾಗಿದೆ. ಸರ್ಕಾರದ ಲಾಕ್ ಡೌನ್ ಕೂಡ್ಲಿಗಿ ಪಟ್ಟಣದಲ್ಲಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಆಸ್ಪತ್ರೆಗೆ ಹೋಗುವ ರೋಗಿಗಳು, ಹೊಲಕ್ಕೆ ಹೋಗುವ ರೈತರು ಬಿಟ್ಟರೆ ಮತ್ತಾರು ಕಾಣಿಸುವುದಿಲ್ಲ ಮದಕರಿ ವೃತ್ತದಿಂದ ಹೈವೇ ಕೂಡು ರಸ್ತೆವರೆಗೆ ಮತ್ತು ಬಳ್ಳಾರಿ ರಸ್ತೆ ಬೆಂಗಳೂರು ರಸ್ತೆಗಳು ಹೊಸಪೇಟೆ ರಸ್ತೆಗಳು ಪೊಲೀಸ್ ಸಿಬ್ಬಂದಿ ಬಿಟ್ಟರೆ ಜನರಿಲ್ಲದೆ ಬಿಕೋ ಎನ್ನುತ್ತಿವೆ.