ಲಾಕ್ ಡೌನ್ : ಕೂಡ್ಲಿಗಿ ಜೆಸಿಐನಿಂದ ನಿರಾಶ್ರಿತರಿಗೆ ಊಟದ ಪಾಕೆಟ್ ವಿತರಣೆ.

ಕೂಡ್ಲಿಗಿ.ಏ.30:- ಮಹಾಮಾರಿ ಕೊರೋನಾದ ಅಟ್ಟಹಾಸವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿದ ಅರ್ಧ ತಿಂಗಳ ಲಾಕ್ ಡೌನ್ ನಿಂದ ಅಲ್ಲಿ ಇಲ್ಲಿ ಊಟ ಇಸ್ಕೊಂಡು ಜೀವನ ಸಾಗಿಸುತ್ತಿದ್ದ ನಿರಾಶ್ರಿತರಿಗೆ ಊಟ ಇಲ್ಲದೆ ಪರದಾಡುವುದನ್ನು ಕಂಡ ಜೆಸಿಐ ಕೂಡ್ಲಿಗಿ ಗೋಲ್ಡನ್ ಸಂಸ್ಥೆ ಕೂಡ್ಲಿಗಿ ಪಟ್ಟಣ ಪಂಚಾಯತಿ ಜೊತೆಗೂಡಿ ಕಳೆದ ರಾತ್ರಿ ನಿರಾಶ್ರಿತರನ್ನು ಗುರುತಿಸಿ ಊಟದ ಪಾಕೆಟ್ ನ್ನು ವಿತರಣೆ ಮಾಡಿದರು. ಜೆಸಿಐ ಕೂಡ್ಲಿಗಿ ಗೋಲ್ಡನ್ ಸಂಸ್ಥೆ ಯ ಅಧ್ಯಕ್ಷ ಅಬೂಬಕರ್ ಮಾತನಾಡಿ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ನಿಯಮ ಉತ್ತಮವಾಗಿದ್ದು ಅದಕ್ಕೆ ಸಹಕಾರ ನೀಡುವ ಜೊತೆಗೆ ಪಟ್ಟಣದಲ್ಲಿ ಕಳೆದೆರಡು ದಿನದಿಂದ ಲಾಕ್ ಡೌನ್ ಪ್ರಭಾವದಿಂದ ಅಲ್ಲಲ್ಲಿ ಕೇಳಿ ಇಸ್ಕೊಂಡು ದಿನನಿತ್ಯ ಜೀವನ ಸಾಗಿಸುತ್ತಿದ್ದ ನಿರಾಶ್ರಿತರು, ಬುದ್ದಿಮಾಂದ್ಯರು ಹಾಗೂ ಊರಿಗೆ ಹೋಗುವವರು ವಾಹನಗಳಿಲ್ಲದೆ ಪರದಾಡಿ ಕುಳಿತ ಕೆಲವರನ್ನು ಕಳೆದ ರಾತ್ರಿ ಗುರುತಿಸಿ ಅವರಿರುವ ಸ್ಥಳಕ್ಕೆ ಹೋಗಿ ಊಟದ ಪಾಕೆಟ್ ನ್ನು ಜೆಸಿಐ ಸಂಸ್ಥೆ ವತಿಯಿಂದ ನೀಡಿದ್ದೇವೆ ಇದು ನಮ್ಮ ಸಂಸ್ಥೆವತಿಯಿಂದ ಸಾಮಾಜಿಕ ಕಳಕಳಿಯಲ್ಲಿ ಈ ಸೇವೆ ಮಾಡಿರುವುದಾಗಿ ಹಾಗೂ ಈ ಸಮಾಜಸೇವೆಗೆ ಕೂಡ್ಲಿಗಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಸಹ ಸಹಕಾರ ನೀಡಿದ್ದು ಅವರಿಗೆ ಸಂಸ್ಥೆವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ಕೂಡ್ಲಿಗಿ ಪಟ್ಟಣಪಂಚಾಯತಿ ಮುಖ್ಯಾಧಿಕಾರಿ ಫಕ್ರುದ್ದೀನ್ ಮಾತನಾಡಿ ಪಟ್ಟಣದಲ್ಲಿ ಇಂತಹ ಸಂದರ್ಭದಲ್ಲಿ ನಿರಾಶ್ರಿತರನ್ನು ಗುರುತಿಸಿ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಿದ ಜೆಸಿಐ ಸಂಸ್ಥೆಯ ಉತ್ತಮ ಬೆಳವಣಿಗೆಗಳಲ್ಲಿ ಒಂದಾಗಿದೆ ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಸಹ ಅನೇಕ ಬಡಕುಟುಂಬ ಕೂಲಿ ಕಾರ್ಮಿಕರನ್ನು ಗುರುತಿಸಿ ಅಂತಹ ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿದ್ದನ್ನು ಈ ಸಂದರ್ಭದಲ್ಲಿ ಜೆಸಿಐ ಕೂಡ್ಲಿಗಿ ಗೋಲ್ಡನ್ ಸಂಸ್ಥೆಯ ಸಾಮಾಜಿಕ ಸೇವೆಯನ್ನು ಸ್ಮರಿಸಿದರು ಹಾಗೂ ಜೆಸಿಐ ಸಂಸ್ಥೆ ಜೊತೆಗೆ ನಿರಾಶ್ರಿತರಿಗೆ ಊಟದ ಪಾಕೆಟ್ ಸಹ ಮುಖ್ಯಾಧಿಕಾರಿ ವಿತರಿಸಿದರು.
ಈ ಸಂದರ್ಭದಲ್ಲಿ ಜೆಸಿಐ ಸಂಸ್ಥೆಯ ಪದಾಧಿಕಾರಿಗಳಾದ ಇಂಜಿನಿಯರ್ ಜಿಲಾನ್, ಐಲಿ ರವಿಕುಮಾರ್ ಹಾಗೂ ಇತರರು ಇದ್ದರು.