ಲಾಕ್ ಡೌನ್ ಎಫೆಕ್ಟ್ ವಾರಪೂರ ಬಡ ಜನತೆಗೆ ಆಹಾರ ಕಿಟ್ ವಿತರಣೆ

ಕೂಡ್ಲಿಗಿ.ಜೂ.5:- ತಾಲೂಕಿನ ಬಡೇಲಡಕು ಜಿ.ಪಂ.ಕ್ಷೇತ್ರ ವ್ಯಾಪ್ತಿಯ 6ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಬಡಜನತೆಗೆ ವಾರಪೂರ ಆಹಾರ ಪಾಕೇಟ್ ನೀಡುವಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷೆ ದೀನಾ ಮಂಜುನಾಥ ಮುಂದಾಗಿದ್ದು ಆಹಾರ ಹೊತ್ತೊಯ್ಯುವ ವಾಹನಗಳಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ.ಚನ್ನಬಸವನಗೌಡ ಚಾಲನೆ ನೀಡಿದರು.
ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ.ಚನ್ನಬಸವನಗೌಡ ಮಾತನಾಡಿ ದೀನಾ ಮಂಜುನಾಥ ಅವರು ತಮ್ಮ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಆಹಾರ ಪಾಕೇಟ್ ವಿತರಣೆ ಮಾಡುವ ಮೂಲಕ ಲಾಕ್ ಢೌನ್ ಸಮಯದಲ್ಲಿ ಬಡಜನತೆಯ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದ್ದು, ನಮ್ಮ ದೇಶದಲ್ಲಿ ಕೂಲಿಕಾರ್ಮಿಕರೇ ಅಧಿಕ ಇದ್ದು ಅದರಲ್ಲಿ ಅಲೆಮಾರಿಗಳು, ಭಿಕ್ಷುಕರು, ದಾರಿಯಲ್ಲಿ ಸಂಚರಿಸುವವರಿಗೆ ಹಣ ಕೊಟ್ಟರೂ ಊಟ ಸಿಗುತ್ತಿಲ್ಲ ಇಂತಹ ಸಂದರ್ಭದಲ್ಲಿ ದೀನಾ ಮಂಜುನಾಥ ಅವರು ಉಚಿತವಾಗಿ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಳ್ಳಿಗಳ ಬಡಜನತೆಗೆ ಆಹಾರ ಪಾಕೆಟ್ ನೀಡುತ್ತಿರುವುದು ಅವರ ಜನಹಿತ, ಮಾನವೀಯ ಕಾಳಜಿ ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ದೀನಾ ಮಂಜುನಾಥ ಮಾತನಾಡಿ ಲಾಕ್ ಢೌನ್ ನಿಂದ ಹಳ್ಳಿಗಳಲ್ಲೂ ಸಹ ಬಡಜನತೆ, ಅಲೆಮಾರಿಗಳು ಕೆಲಸವಿಲ್ಲದೇ ಊಟಕ್ಕೂ ಕಷ್ಟವಾಗುತ್ತಿದೆ ಅಂತಹ ಜನತೆಗೆ ಏಳು ದಿನಗಳ ಕಾಲ ನಮ್ಮ ಬಡೇಲಡಕು ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿಯ ಪ್ರತೀ ಹಳ್ಳಿಗಳಲ್ಲಿ ಆಹಾರ ಪಾಕೆಟ್ ಗಳನ್ನು ವಿತರಿಸಿ ಅವರ ಋಣ ತೀರಿಸುವ ಭಾಗ್ಯ ಒದಗಿಬಂದಿದೆ ಈ ಉತ್ತಮ ಕಾರ್ಯಕ್ಕೆ ನನಗೆ ಬೆನ್ನು ತಟ್ಟಿ ಆಶಿರ್ವಧಿಸಿ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನಮ್ಮ ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಹಾಗೂ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ.ಚನ್ನಬಸವನಗೌಡ ನೀಡಿದ್ದಾರೆ ನನಗೆ ಪ್ರತಿ ಹಂತದಲ್ಲೂ ಸಲಹೆ, ಸ್ಫೂರ್ತಿ ತುಂಬಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆಹಾರ ಪಾಕೇಟ್ ವಿತರಣೆ ಸೇವೆ ಮಾಡುತ್ತಿದ್ದು ಯಾವುದೇ ಪ್ರಚಾರದ ಉದ್ದೇಶ ಇಟ್ಟುಕೊಂಡು ಈ ಕಾರ್ಯ ಮಾಡುತ್ತಿಲ್ಲ ಎಂದರು.
6 ಗ್ರಾಮ ಪಂಚಾಯ್ತಿಗಳಲ್ಲಿ ಆಹಾರ ಪಾಕೆಟ್ ವಿತರಣೆಃ ಬಡೇಲಡಕು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಡೇಲಡಕು, ಶಿವಪುರ, ಕಕ್ಕುಪ್ಪಿ, ಹಿರೇಹೆಗ್ಡಾಳ್, ಮೊರಬ, ಚೌಡಾಪುರ ಸೇರಿದಂತೆ 6 ಗ್ರಾಮ ಪಂಚಾಯ್ತಿಗಳು ಬರಲಿದ್ದು ಈ ವ್ಯಾಪ್ತಿಯಲ್ಲಿ ವಾಹನಗಳ ಮೂಲಕ ಆಹಾರ ಪಾಕೆಟ್ ಗಳನ್ನು ವಿತರಣೆ ಮಾಡಲಿದ್ದು ಈ ಕಾರ್ಯಕ್ಕಾಗಿ 40ಕ್ಕೂ ಹೆಚ್ಚು ಯುವಕರು ಶ್ರಮಿಸುತ್ತಿದ್ದಾರೆ. ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹನಸಿ ಕ್ರಾಸ್ ಹತ್ತಿರ ಬಯಲು ಪ್ರದೇಶದಲ್ಲಿ ಅಡುಗೆ ತಯಾರಿಸಲಾಗುತ್ತಿದ್ದು ದೀನಾ ಮಂಜುನಾಥ ಅವರೇ ನಿಂತುಕೊಂಡು ಆಹಾರ ಪೊಟ್ಟಣಗಳನ್ನು ತಯಾರಿಸಿ ಹಳ್ಳಿಗಳಿಗೆ ವಿತರಣೆ ಮಾಡಲು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ಕೆ.ಎಚ್.ವೀರನಗೌಡ್ರು, ಟಿ.ಜಿ.ಮಲ್ಲಿಕಾರ್ಜುನಗೌಡ, ಶಾಸಕರ ಆಪ್ತಸಹಾಯಕ ಶ್ರೀಕಾಂತ್ ಸೇರಿದಂತೆ ಹಲವಾರು ಯುವ ಮುಖಂಡರು, ಅಡುಗೆ ತಯಾರಿಸುವ, ವಿತರಿಸುವ ಯುವಕರು ಹಾಜರಿದ್ದರು.