ಲಾಕ್ ಡೌನ್ ಇದ್ದರು ಬೇಕಾಬಿಟ್ಟಿ ಓಡಾಡುವ ಜನರು ಕಾದಿದೆ ಕೋರೋನ ವೈರಸ್ ನ ಶಾಕ್

ಜಗಳೂರು.ಮೇ.೧೭; ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನ ಎರಡನೆಯ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂದಿನಿಂದ ಮೇ 25 ರವರೆಗೆ ಸಂಪೂರ್ಣ ಲಾಕ್ಡೌನ್ ಪೋಷಣೆ ಮಾಡಿರುವುದರಿಂದ ಬೆಳಗ್ಗೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡುವಂತೆ ನಿರ್ದೇಶನ ನೀಡಿರುವುದರಿಂದ ಇಂದಿನಿಂದ 14 ದಿನಗಳ ಕಾಲ ಲಾಕ್ಡೌನ್ ಆಗಿ ಸಂಪೂರ್ಣ ಸ್ತಬ್ಧ ವಾಗಲಿದೆ ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಿಸಲು ಎರಡು ವಾರಗಳ ಕಾಲ ಲಾಕ್ಡೌನ್ ಘೋಷಣೆ ಮಾಡಿದ್ದು ಪಟ್ಟಣದ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದ್ದಾರೆ ನಂತರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಪಂಡಿತ್ ಮಾತನಾಡಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 10 ಗಂಟೆ ವರೆಗೆ ಮಾತ್ರ ಅವಕಾಶ ನೀಡಲಾಗಿದ್ದು 10 ಗಂಟೆಯ ನಂತರ ಯಾವೊಬ್ಬ ಸಾರ್ವಜನಿಕರು ಮನೆಯಿಂದ ಹೊರ ಬರುವಂತಿಲ್ಲ ನಂತರ  ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ ತಾಲೂಕಿನಲ್ಲಿ ಕೊರೋನ ಎರಡನೇ ಅಲೆಯ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ಬೇಕಾ ಬಿಟ್ಟಿಯಾಗಿ ಮನೆಯಿಂದ ಹೊರ ಬರುವವರು ಲಾಕ್ ಡೌನ್ ನಿಯಮಗಳು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಕೋವಿಡ್ ವಿರುದ್ಧ ಜಯಶಾಲಿಗಳಾಗಿ ಬೇಕೆಂದು ಸರ್ಕಾರವು ಪಣತೊಟ್ಟಿರುವ ದರಿಂದ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಕೊರೋನ ನಿಯಂತ್ರಿಸಲು ಸಹಕಾರನೀಡಬೇಕು ಎಂದಿನಂತೆ ತಮ್ಮ ಹಳೆಯ ಚಾಳಿಯನ್ನು ಸಾರ್ವಜನಿಕರು ಮುಂದುವರೆಸಬಾರದು.ಪೊಲೀಸ್ ಇಲಾಖೆ ಆರಕ್ಷಕ ಉಪ ನಿರೀಕ್ಷಕರು ಸಂತೋಷ್ ಬಾಗೂಜಿ ಮಾತನಾಡಿ ಬೆಳಿಗ್ಗೆ ಗಂಟೆ ವರಗೆ ಹೋಟೆಲ್ ಗಳಲ್ಲಿ ಪಾರ್ಸಲ್ ಗೆ ಅವಕಾಶ ದಿನವಿಡೀ ತಳ್ಳುವ ಗಾಡಿಯಲ್ಲಿ  ತರಕಾರಿ ಹಾಲು ಮಾರಾಟಕ್ಕೆ ಅವಕಾಶ ಬೆಳಗ್ಗೆ 6 ರಿಂದ 10 ರವರೆಗೆ ಕಿರಾಣಿ ತರಕಾರಿ ಹಣ್ಣು ಹಂಪಲು ಮಾಂಸ ಮಾರಾಟ ಮತ್ತು ಹೋಟೆಲ್ ಬಾರ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ ಇನ್ನುಳಿದಂತೆ ಮದುವೆಗಳಲ್ಲಿ 40 ಮಂದಿ ಸೇರಬಹುದು 10 ಗಂಟೆಯ ನಂತರ ಅನಗತ್ಯವಾಗಿಯಾವೊಬ್ಬ ವ್ಯಕ್ತಿ ರಸ್ತೆಗಳಲ್ಲಿ ಓಡಾಡಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು