ಲಾಕ್ ಡೌನ್ ಅವಧಿ ಸಡಿಲಿಸಲು ಮನವಿ

ದಾವಣಗೆರೆ.ಏ.೩೦: ತರಕಾರಿ ಬೆಳೆ ಅವಲಂಬಿತರಾಗಿರುವ ರೈತರಿಗೆ ಲಾಕ್ ಡೌನ್ ನಿಯಮದ ಪ್ರಕಾರ ರೈತರಿಗೆ ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ತರಕಾರಿ ಮಾರಾಟ ಮಾಡಲು ಹಾಗೂ ಖರೀದಿಸಲು ಬೆಳಗ್ಗೆ 6:00 ರಿಂದ 10:00 ಗಂಟೆಯವರೆಗೆ ಸಮಯ ನಿಗದಿ ಮಾಡಿರುವುದು ಸ್ವಲ್ಪ ಮಟ್ಟಿಗೆ ಅನಾನುಕೂಲವಾಗಿರುತ್ತದೆ ಆದ್ದರಿಂದ ಹೆಚ್ಚಿನ ಸಮಯ ನಿಗಧಿ ಮಾಡಬೇಕು ಎಂದು ಶಾಸಕರುಗಳಾದ ಎಂ.ಪಿ ರೇಣುಕಾಚಾರ್ಯ ಹಾಗೂ ಮಾಡಾಳು ವಿರೂಪಾಕ್ಷಪ್ಪ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶಾಸಕ ರೇಣುಕಾಚಾರ್ಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಅವಳಿ ತಾಲ್ಲೂಕುಗಳಾದ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ರೈತರು ಅತಿ ಹೆಚ್ಚು ತರಕಾರಿ ಬೆಳೆಯುತ್ತಾರೆ.ಬೆಳೆದ ತರಕಾರಿಯನ್ನು ಮಂಗಳೂರು ಉಡುಪಿ ಇನ್ನಿತರೇ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ ಹಾಗೂ ತರಕಾರಿ ಶೇಂಗಾ ಮೆಕ್ಕೆಜೋಳ ಬೆಳೆದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಣೆ ಮಾಡಬೇಕಾಗುತ್ತದೆ.ತರಕಾರಿ ಕಟಾವು ಮಾಡಲು ಹಾಗೂ ಕಟಾವು ಮಾಡಿದ ತರಕಾರಿಯನ್ನು ಲಾರಿಗೆ ತುಂಬಿ ಕಳುಹಿಸಲು ಕೂಲಿ ಕಾರ್ಮಿಕರು ಬೆಳಗ್ಗೆ 8:00 ರಿಂದ 9:00 ಗಂಟೆಗೆ ಆಗಮಿಸುತ್ತಾರೆ ಹಾಗೂ ಮಾರುಕಟ್ಟೆಗೆ ಖರೀದಿದಾರರು ತಡವಾಗಿ ಆಗಮಿಸಿ ಸಮಯದ ಕೊರತೆಯಿಂದ ಕಡಿಮೆ ಬೆಲೆಗೆ ಖರೀದಿಸಲು ಒಪ್ಪಿಸುತ್ತಾರೆ.ಇದರಿಂದಾಗಿ ರೈತರಿಗೆ ಅನಾನುಕೂಲ ಉಂಟಾಗಿದ್ದುಸಮಯದ ಅಭಾವದಿಂದ  ಸರಿಯಾದ ಸಮಯಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಾಗೂ ಇತರೆ ಜಿಲ್ಲೆಗಳಿಗೆ ತರಕಾರಿಯನ್ನು ಸಾಗಿಸಲು ಸಮಯದ ಅಭಾವ ಉಂಟಾಗಿ ಬೆಳೆದ ತರಕಾರಿಗಳು ಸರಿಯಾದ ರೀತಿಯಲ್ಲಿ ಉಪಯೋಗಕ್ಕೆ ಬಾರದೆ ಹಾಗೂ ಸೂಕ್ತ ಬೆಲೆ ದೊರಕದೆ ರೈತರು ಸಂಕಷ್ಟಕ್ಕೆ ಒಳಗಾಗಿರುತ್ತಾರೆ.ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಯಮವನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿರೈತರ ಹಿತದೃಷ್ಟಿಯಿಂದ  ಸಮಯವನ್ನು ವಿಸ್ತರಿಸುವಂತೆ  ಮನವಿ ಮಾಡಿದರು.