ಲಾಕ್ ಡೌನ್ ಅವಧಿಯಲ್ಲಿ 7 ಲಕ್ಷ ರೂ ಮದ್ಯ ವಶ, 76 ಜನರ ಬಂಧನ

ಬಳ್ಳಾರಿ, ಜೂ.08: ಜಿಲ್ಲೆಯ ವಿವಿಧೆಡೆ ಲಾಕ್‌ಡೌನ್ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ದಾಳಿ ನಡೆಸಿ 7,44,545 ರೂ. ಮೌಲ್ಯದ 6796.38 ಲೀಟರ್ ಮದ್ಯವನ್ನು ವಶಕ್ಕೆ ಪಡೆದು, 76 ಜನರನ್ನು ಬಂಧಿಸಿ 66 ಪ್ರಕರಣ ದಾಖಲಿಸಿದೆಂದು ಎಸ್ಪಿ ಅಡಾವತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್‌ಡೌನ್ ವಿಧಿಸಿದೆ. ಆದರೆ, ಈ ಲಾಕ್ ಡೌನ್ ಅವಧಿಯಲ್ಲೇ ಜಿಲ್ಲೆಯಾದ್ಯಂತ ಅಕ್ರಮ ಮದ್ಯ ಮಾರಾಟ ನಡೆದಿದೆ. ಮಾರಾಟದ ಅಡ್ಡೆಗಳ ಮೇಲೆ ಕಳೆದ ಏಪ್ರಿಲ್ 27 ರಿಂದ ಜೂನ್ 2ರವರೆಗೆ ದಾಳಿ ನಡೆಸಿರುವ ಜಿಲ್ಲೆಯ 11 ಪೊಲೀಸ್ ಠಾಣೆಗಳ ಪೊಲೀಸರು ಈ ಕಾರ್ಯ ಮಾಡಿದ್ದಾರೆ.
ಈ ಪೈಕಿ ಬಳ್ಳಾರಿ ಎಪಿಎಂಸಿ ಠಾಣೆಯಲ್ಲಿ 5 ಪ್ರಕರಣ ದಾಖಲಿಸಿ 6 ಆರೋಪಿಗಳ ಬಂಧನ, 2,19,784 ರೂ. ಮೌಲ್ಯದ 521.66 ಲೀಟರ್ ಮದ್ಯ ವಶ, ಅರಸಿಕೆರೆ ಪೊಲೀಸ್ ಠಾಣೆ 2 ಪ್ರಕರಣ, 3 ಆರೋಪಿಗಳ ಬಂಧನ, 7,078 ರೂ. ಮೌಲ್ಯದ 16.74 ಲೀಟರ್ ಮದ್ಯ ವಶ, ಸಿಐಎನ್ ವಿಭಾಗ 2 ಪ್ರಕರಣ, ಇಬ್ಬರ ಬಂಧನ 1,06,198 ಲಕ್ಷ ರೂ. ಮೌಲ್ಯದ 121.89 ಲೀಟರ್ ಮದ್ಯ ವಶ, ಬಳ್ಳಾರಿ ಗ್ರಾಮೀಣ ಠಾಣೆ 6 ಪ್ರಕರಣ 7 ಆರೋಪಿಗಳ ಬಂಧನ, 38686 ರೂ. ಮೌಲ್ಯದ 572,09 ಲೀಟರ್ ಮದ್ಯ ವಶ, ಬ್ರೂಸ್‌ಪೇಟೆ ಠಾಣೆ 8 ಪ್ರಕರಣ 9 ಆರೋಪಿಗಳ ಬಂಧನ, 9387 ರೂ. ಮೌಲ್ಯದ 20.23 ಲೀಟರ ಮದ್ಯ ವರ, ಕೌಲಬಜಾರ್ ಠಾಣೆ 2 ಪ್ರಕರಣ, 3 ಆರೋಪಿಗಳ ಬಂಧನ, 29535 ರೂ. ಮೌಲ್ಯದ 103.9 ಲೀಟರ್ ಮದ್ಯ ವಶ, ಗಾಂಧಿ ನಗರ ಠಾಣೆ 5 ಪ್ರಕರಣ 5 ಆರೋಪಿಗಳ ಬಂಧನ, 2461 ರೂ. ಮೌಲ್ಯದ 5.76 ಲೀಟರ್ ಮದ್ಯ ವಶ, ಹಿರೇಹಡಗಲಿ ಠಾಣೆ 4 ಪ್ರಕರಣ, 4 ಆರೋಪಿಗಳ ಬಂಧನ, 79973 ರೂ. ಮೌಲ್ಯದ 216.23 ಲೀಟರ್ ಮದ್ಯ ವಶ, ಪಿ.ಡಿ.ಹಳ್ಳಿ ಠಾಣೆ 4 ಪ್ರಕರಣ, 4 ಆರೋಪಿಗಳ ಬಂಧನ, 54193 ರೂ. ಮೌಲ್ಯದ 135.24 ಲೀಟರ್ ಮದ್ಯ ವಶ, ಸಂಡೂರು ಠಾಣೆ 4 ಪ್ರಕರಣ, 4 ಆರೋಪಿಗಳ ಬಂಧನ, 23304 ರೂ. ಮೌಲ್ಯದ 43.92 ಲೀಟರ್ ಮದ್ಯ ವಶ, ಶಿರಿಗೇರೆ ಠಾಣೆ 2 ಪ್ರಕರಣ, 5 ಆರೋಪಿಗಳ ಬಂಧನ, 64538 ರೂ. ಮೌಲ್ಯದ 124.65 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.