ಲಾಕ್ ಡೌನ್:ಸಂಪೂರ್ಣ ವಿಪಲ-ಸ್ಥಳೀಯರ ಆಕ್ರೋಶ

ಲಿಂಗಸುಗೂರು.ಏ.೨೯-ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರದ ರಸ್ತೆಗಳಲ್ಲಿ ಬೀದಿಯಲ್ಲಿ ವಿವಿಧ ವಾರ್ಡ್ ಗಳಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ವಿಫಲವಾಗಿದೆ ಕೊರೋನಾ ನಿಯಮ ಎರಡನೇ ಹಂತದ ಮಾಹಮಾರಿ ರೋಗಗಳ ನಿಯಂತ್ರಣ ಮಾಡಲು ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ಸಾರ್ವಜನಿಕ ಜೀವನದಲ್ಲಿ ಅಧಿಕಾರಿಗಳು ಕಾಟಾಚಾ
ರದ ಕೇಲಸವಾಗಿದೆ ಎಂದು ಸಾರ್ವಜನಿಕರು ಪುರಸಭೆಯ ಅಧಿಕಾರಿಗಳ ವಿರುದ್ಧ ಕೇಂಡಾಮಂಲ್‌ವಾಗಿದ್ದಾರೆ.
ಇಂದು ಬೆಳಗ್ಗೆ ತರಕಾರಿ ಮಾರುಕಟ್ಟೆಗೆ ಪುರಸಭೆ ಅಧ್ಯಕ್ಷ ಗದ್ದೆಮ್ಮ ಭೋವಿಯವರು ಸ್ಥಳೀಯ ಕಾಲೇಜಿನ ಆವರಣದಲ್ಲಿ ಸಂತೆ ವ್ಯಾಪಾರ ವಹಿವಾಟು ಮಾಡುವ ಸಂತೆಯಲ್ಲಿ ದೀಡಿರ್ ಭೇಟಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ತರಾಟೆ ತೆಗೆದುಕೊಂಡರು.
ಈ ವೆಳಯಲ್ಲಿ ಪುರಸಭೆ ಯಾವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನಿಡದೆ. ಇರುವುದು ಗುರುವಾರ ಬೆಳಗ್ಗೆ ಕಂಡು ಬಂದಿದೆ. ಅದಕ್ಕಾಗಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಗದ್ದೆಮ್ಮ ಭೋವಿ ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಾದ ಗಡಿಯಾರ ಗೋಪುರ ಮೇನ್ ಬಜಾರ ಹೊಸ ಬಸ್ ನಿಲ್ದಾಣದ
ಪ್ರದೇಶ ಬಸವಸಾಗರ ಕ್ರಾಸ್ ಹಳೆ ಬಸ್ ನಿಲ್ದಾಣ ಮತ್ತು ಪಿಯು ಕಾಲೇಜಿನ ಮುಂಭಾಗದಲ್ಲಿ. ಸದಾಜನ ಜಂಗೂಳಿಯಿಂದ ತುಂಬಿದ ರಸ್ತೆಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸಂಕಟ ಬಂದಿದೆ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು .
ಅನಗತ್ಯವಾಗಿ ವಾಹನ ಸಂಚಾರ ಮಾಡುವ ಸವಾರರಿಗೆ ಕಡಿವಾಣ ಹಾಕುವುದು ಯಕ್ಷ ಪ್ರಶ್ನೆಯಾಗಿದೆ ಲಿಂಗಸುಗೂರು ಪಟ್ಟಣದಲ್ಲಿ ದಿನ ದಿಂದದಿನ ನಿತ್ಯ ಕೊರೋನಾ ಸಂಖ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಪುರಸಭೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ವರ್ಷ ಈ ಇಂದೆ ಪುರಸಭೆ ಮುಖ್ಯಾಧಿಕಾರಿ
ಸರ್ಕಾರದ ನಿಯಮ ಪ್ರಕಾರ ಪ್ರತಿಯೊಂದು ವಾರ್ಡ್ ವಾರು ಭೇಟಿ ನಿಡಿ ಸಾಮಾಜಿಕ ಕಳಕಳಿಯಿಂದ ಕೊವಿಡ್ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಮೂಲಕ ತಮ್ಮ ಅಧಿಕಾರ ಅವಧಿಯಲ್ಲಿ ಕೊರೋನಾ ಹೆಚ್ಚಾಗದಂತೆ.
ನೊಡಿ ಕೊಂಡು ತಮ್ಮತಮ್ಮ ವಾರ್ಡ್‌ಗಳ ಸದಸ್ಯರ ಜೊತೆ ಸೇರಿ ಕೊವಿಡ್ ತಡೆಗಟ್ಟಲು ಪುರಸಭೆ ಸಿಬ್ಬಂದಿಗಳ ಸಹಕಾರದಿಂದ ಶ್ರಮವಹಿಸಿದ ಘಟನೆ ಸಾರ್ವಜನಿಕರು ತಮ್ಮಾ ತಮ್ಮಲ್ಲಿ ಮಾತನಾಡಿದ ಪ್ರಸಂಗ ಇಂದು ನಡೆದಿದೆ.
ಆದರೆ ಇಂದಿನ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿರವರು ಇಬ್ಬಗೆ ನಿತಿ ಹಾಗೂ ಸಿಬ್ಬಂದಿಗಳ ಸಮನ್ವಯತೆ ಕೊರತೆಯಿಂದಾಗಿ ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲ. ವಿಫಲವಾಗಿದ್ದಾರೆ. ಇಂದಿನ ಮುಖ್ಯಾಧಿಕಾರಿಗಳು
ತೇರಿಗೆ ಸಂಗ್ರಹ ಮತ್ತು ದಂಡ ವಸೂಲಿಗೆ ಸಿಮಿತವಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿಯುತ್ತದೆ.
ಇದೆ ರೀತಿ ಮುಂದುವರೆದರೆ ಕೊವಿಡ ೧೯ ಎರಡನೇ ಹಂತದ ಮಾಹಮಾರಿ ರೋಗಗಳ ಸಂಖ್ಯೆ ಹೆಚ್ಚಾಗು
ವದರಲ್ಲಿ ಯಾವುದೇ ಸಂದೇಹವಿಲ್ಲ .
ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ತಮ್ಮ ನಿಲುವನ್ನು ಬದಲಾಯಿಸಿ ಕೊರೋನಾ ಹೆಚ್ಚಾಗದಂತೆ. ಸರ್ಕಾರದ ನಿಯಮ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೆಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.