ಲಾಕ್‍ಡೌನ್ ಸಂಕಷ್ಟ ಕಳೆಯಲು ಏಕ್ವಸ್ ಫೌಂಡೇಷನ್‍ನಿಂದ ಬೇಸಿಗೆ ಶಿಬಿರ

ಕಲಬುರಗಿ :ಮೇ.30: ಲಾಕ್‍ಡೌನ್‍ನಿಂದ ತಮ್ಮ ಮನೆಗಳಲ್ಲಿ ಸಿಲುಕಿಕೊಂಡು ಆಟ ಹಾಗೂ ಶಾಲೆ ತಪ್ಪಿಸಿಕೊಂಡಿರುವ ರಾಜ್ಯದ ಅಸಂಖ್ಯ ಮಕ್ಕಳು ಅವರ ಒಳಾಂಗಣದ ಸಮಯವನ್ನು ಕಲಿಕೆಯೊಂದಿಗೆ ಆಟದಲ್ಲಿ ಕಳೆಯುತ್ತಿದ್ದಾರೆ. ಅದಕ್ಕೆ ಅನಸೂಯ ಮೆಳ್ಳಿಗೇರಿ ವಿಜ್ಞಾನ ಕೇಂದ್ರದ ಹೆಸರಿನಲ್ಲಿ ಏಕ್ವಸ್ ಫೌಂಡೇಷನ್ ಅಗಸ್ತ್ಯ ಇಂಟರ್‍ನ್ಯಾಷನಲ್ ಫೌಂಡೇಷನ್ ಸಹಯೋಗದಲ್ಲಿ ನಡೆಸುತ್ತಿರುವ ಕ್ಯೂರಿಯಸ್ ಮೈಂಡ್ಸ್ ಬೇಸಿಗೆ ಶಿಬಿರಗಳು ಕಾರಣವಾಗಿವೆ.

6ರಿಂದ 9ನೇ ತರಗತಿಯ ಮಕ್ಕಳು ಕ್ಯೂರಿಯಸ್ ಮೈಂಡ್ಸ್ ತರಗತಿಗಳಿಗೆ ತಮ್ಮ ಪೋಷಕರ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‍ಗಳ ಮೂಲಕ ಲಾಗಿನ್ ಆಗಿ 90 ನಿಮಿಷಗಳ ದಿನಕ್ಕೆ ಎರಡು ತರಗತಿಗಳಲ್ಲಿ ಭಾಗವಹಿಸುತ್ತಿದ್ದು ಸುಲಭವಾಗಿ ನಿರ್ವಹಿಸಬಲ್ಲ ಚಟುವಟಿಕೆಗಳನ್ನು ಕಲಿಯುತ್ತಿದ್ದಾರೆ. ಈ ಕಾರ್ಯಕ್ರಮವು `ಕೆಲಸದ ಮೂಲಕ ಕಲಿ’ಯಲು ಗಮನ ನೀಡಿದೆ.

ಸಾಮಾನ್ಯ ತರಗತಿಯ ಕಾರ್ಯಕ್ರಮವಾಗಿದ್ದ ಇದು ಈಗ ಸಾಂಕ್ರಾಮಿಕದಿಂದಾಗಿ ಆನ್‍ಲೈನ್ ಆಗಿದ್ದು ಹುಬ್ಬಳ್ಳಿ ಮತ್ತು ಬೆಂಗಳೂರುಗಳಲ್ಲಿ 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು ಅಪಾರವಾದ ಸಕಾರಾತ್ಮಕ ಪರಿಣಾಮ ಹೊಂದಿದೆ. ಗೂಗಲ್ ಮೀಟ್ ತರಗತಿಗಳಲ್ಲದೆ ಅವರು 50ಕ್ಕೂ ಹೆಚ್ಚು ವಾಟ್ಸಾಪ್ ಗ್ರೂಪ್‍ಗಳ ಮೂಲಕ ಶಿಕ್ಷಕರೊಂದಿಗೆ ಸಂಪರ್ಕದಲ್ಲಿರುತ್ತಾರೆ.

“ಏಕ್ವಸ್ ಫೌಂಡೇಷನ್‍ನ ಸ್ಟೆಮ್(Sಖಿಇಒ) ಕಾರ್ಯಕ್ರಮದ ಉದ್ದೇಶವು ಅನುಭವಪೂರ್ವಕ ಕಲಿಕೆಯ ಮಾದರಿಯ ಮೂಲಕ ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಸುವುದಾಗಿದೆ ಮತ್ತು ಮಕ್ಕಳಲ್ಲಿ ಅರಿವು, ವಿಶ್ವಾಸ ಹೆಚ್ಚಿಸುವುದು, ಕುತೂಹಲ ಮೂಡಿಸುವುದು ಹಾಗು ಸೃಜನಶೀಲತೆ ಪೋಷಿಸುವುದಾಗಿದೆ. ವಿಜ್ಞಾನಕೇಂದ್ರ, ಮೊಬೈಲ್ ಲ್ಯಾಬ್ಸ್, ವಿಜ್ಞಾನ ಮೇಳಗಳು ಮತ್ತು ಶಿಕ್ಷಕರ ತರಬೇತಿ ಕೇಂದ್ರಗಳು ಮುಂತಾದ ಯೋಜನೆಗಳನ್ನು ಈ ಉದ್ದೇಶಕ್ಕಾಗಿ ರೂಪಿಸಲಾಗಿದೆ” ಎಂದು ಏಕ್ವಸ್ ಫೌಂಡೇಷನ್‍ನ ಅಧ್ಯಕ್ಷರಾದ ಶ್ರೀಮತಿ ಮಾಯಿ ಮೆಳ್ಳಿಗೇರಿ ಹೇಳಿದರು.

ಕೆಲವು ಮಕ್ಕಳು ಆಸಕ್ತಿದಾಯಕ ಪರಿಕಲ್ಪನೆಗಳನ್ನು ಆವಿಷ್ಕರಿಸುವುದರಲ್ಲಿ ಈ ಕಾರ್ಯಕ್ರಮದ ಯಶಸ್ಸನ್ನು ಅಳೆಯಬಹುದು. ಉದಾಹರಣೆಗೆ, ಧಾರವಾಡ ಜಿಲ್ಲೆಯ ರಾಮಾಪುರ ಜಿಎಚ್‍ಪಿಎಸ್‍ನ 8ನೇ ತರಗತಿಯ ವಿದ್ಯಾರ್ಥಿ ಅಭಿಷೇಕ್ ಹೆಂದರಗೇರಿ ವಿದ್ಯುಚ್ಛಕ್ತಿ ಉತ್ಪಾದಿಸಲು ಸ್ಪೀಡ್ ಬ್ರೇಕರ್‍ಗಳನ್ನು ಆವಿಷ್ಕರಿಸಿದ್ದಾನೆ. ಅದೇ ರೀತಿಯಲ್ಲಿ ಜಿಎಚ್‍ಪಿಎಸ್‍ನ ಶಿವರಾಜ್ ಮೂಲಿಮನಿ ಧಾರವಾಡಕ್ಕೆ ಸೇರಿದ್ದು ತನ್ನ ರೈತ ತಂದೆಯ ಕೆಲಸ ಸುಲಭಗೊಳಿಸಲು ಈರುಳ್ಳಿ ಸೆಪರೇಟರ್ ರೂಪಿಸಿದ್ದಾನೆ.

ಏಕ್ವಸ್ ಫೌಂಡೇಷನ್-ಅಗಸ್ತ್ಯ ಸಹಯೋಗವು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ 10ನೇ ತರಗತಿಯ 600 ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮದಲ್ಲಿ ಕಲಿಯಲು ವೇಗ ನೀಡುವ ಕೆಲಸ ತೆಗೆದುಕೊಂಡಿದೆ. ಈ ವಿದ್ಯಾರ್ಥಿಗಳು ಲಾಕ್‍ಡೌನ್ ತೆರವಾದ ನಂತರ ಜೂನ್ ತಿಂಗಳಲ್ಲಿ ಅವರ ಅಂತಿಮ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.