ಲಾಕ್‍ಡೌನ್ ಬೇಡ: ಜೈಕರವೇ ಮನವಿ

ಕಲಬುರಗಿ,ಏ.19- ಮಹಾಮಾರಿ ಕೋವಿಡ್ 19 ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್‍ಡೌನ್ ಮಾಡುವ ಚಿಂತನೆಯಲ್ಲಿರುವ ಸರ್ಕಾರ ಇದನ್ನು ಕೈಬಿಡಬೇಕು ಎಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ತಹಶಿಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಾಳೆ ಸರ್ವ ಪಕ್ಷಗಳ ಸಭೆ ಕರೆದಿರುವ ಸರ್ಕಾರ, ಲಾಕ್‍ಡೌನ್ ಮಾಡುವ ಚಿಂತನೆಯನ್ನು ವ್ಯಕ್ತಪಡಿಸಲಿದೆ ಎಂಬ ಮಾಧ್ಯಮದ ಹೇಳಿಕೆಯಿಂದ ಜನಸಾಮಾನ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ನಾಳಿನ ಸಭೆಯಲ್ಲಿ ಲಾಕ್‍ಡೌನ್ ನಿರ್ಧಾರ ಕೈಗೊಳ್ಳಬಾರದು ಎಂದು ಒತ್ತಾಯಿಸಿರುವ ಸಂಘಟನೆ ಒಂದು ವೇಳೆ ಲಾಕ್‍ಡೌನ ಮಾಡುವ ನಿರ್ಧಾರ ಸರ್ಕಾರ ಕೈಗೊಂಡಲ್ಲಿ ರಾಜ್ಯದ ಪ್ರತಿ ಕುಟುಂಬಕ್ಕೆ ಒಂದು ಲಕ್ಷ ರೂ.ಗಳ ಪೋಷಣಾ ನೆರವು ಸಹಾಯದನವನ್ನು ಜಮಾ ಮಾಡಬೇಕು ಎಂಬ ಬೇಡಿಕೆಯ ಮನವಿಯನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಸಚೀನ ಫರತಾಬಾದ, ಸುರೇಶ ಹನಗುಡಿ, ರವಿ ವಳಕೇರಿ, ಸತೀಶ ಫರತಾಬಾದ, ಅಂಬು ಮಸ್ಕಿ, ರಾಹುಲ್ ಫರತಾಬಾದ, ಅರ್ಜುನ ಸಿಂಗೆ, ಸುನಿಲ ಜಾಧವ, ಪ್ರವೀಣ ಸಜ್ಜನ ಸೇರಿದಂತೆ ಹಲವರಿದ್ದರು.