ಲಾಕ್‍ಡೌನ್ ಪರಿಣಾಮ ಸಂಕಷ್ಟದ ಜನರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯಬೇಕು: ನಾಗೇಶ ತಳಕೇರಿ

ಇಂಡಿ, ಮೇ.31-ಕರೋನಾ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಕೊಡುಗೈಧಾನಿಗಳು ಒಂದಿಷ್ಟು ಸಹಾಯ ಮಾಡಿ ಮಾನವೀಯತೆಯಿಂದ ಮೆರೆಯಬೇಕು ಎಂದು ಆರ್.ಪಿ.ಆಯ್ ಅಧ್ಯಕ್ಷ ನಾಗೇಶ ತಳಕೇರಿ ಹೇಳಿದರು.
ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಂಗ್ರೇಸ್ ಯುವ ಮುಖಂಡ ಶಿವಾನಂದ ಮೂರಮನ್ ಇವರ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳದೆ ಕೋವಿಡ್ -19 ಹಾಗೂ ಸರಕಾರದ ನಿಯಮಗಳ ಪಾಲನೆಯಂತೆ ಬಡರೋಗಿಗಳಿಗೆ ಹಣ್ಣು-ಹಂಪಲ, ನೀರಿನ ಬಾಟಲ್ ಮತ್ತು ಸ್ಯಾನಿಟೈಜರ್, ಮಾಸ್ಕ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿವರ್ಷ ಹುಟ್ಟು ಹಬ್ಬಗಳು, ಮಧುವೆಗಳು ಸಭೆ ಸಮಾರಂಭಗಳು ಸಾಕಷ್ಟು ಅದ್ದೂರಿಯಾಗಿ ನಡೆಯುತ್ತಿದ್ದವು ಆದರೆ ಕರೋನಾ ಮಹಾಮಾರಿ ಇಡೀ ಮನುಷ್ಯನ ಬದುಕನ್ನೆ ಹಾಳು ಮಾಡಿದೆ.
ಆರ್ಥಿಕವಾಗಿ ದೇಶ ಸಾಕಷ್ಟು ಹಿನ್ನಡೆಯಾಗಿದೆ. ಸರಕಾರ ಜನತೆಯ ಜೀವ ರಕ್ಷಣೆ ಮಾಡಲು ಲಾಕ್‍ಡೌನ್ ಮಾಡಿದೆ. ವೈದ್ಯರು, ನರ್ಸ್‍ಗಳು, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು ಎಲ್ಲಾ ಕರೋನಾ ವಾರಿಯರ್ಸಗಳು ಜನತೆಯ ಜೀವ ಕಾಪಾಡಲು ಶ್ರಮಿಸುತ್ತಿದ್ದಾರೆ ಇವರ ಕಾರ್ಯ ಶ್ಲ್ಯಾಗನೀಯವಾಗಿದೆ. ಸದ್ಯದ ಪರಸ್ಥಿತಿಯಲ್ಲಿ ಅನೇಕ ಬಡವರು ಕಷ್ಟದಲ್ಲಿದ್ದಾರೆ ಇಂತಹ ಸಂರ್ಭದಲ್ಲಿ ಕಾಂಗ್ರೇಸ್ ಯುವ ಮುಖಂಡ ಶಿವಾನಂದ ಮೂರಮನ್ ಇವರು ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳದೆ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು -ಹಂಪಲ ಇತರೆ ವಸ್ತುಗಳು ನೀಡಿ ಹೃದಯಶ್ರೀಮಂತಿಕೆಯಿಂದ ಮೆರೆಯುತ್ತಿರುವುದು ಅವರ ದೊಡ್ಡಗುಣ ಇಂತಹ ಮಾನವೀಯ ಬದುಕು ಪ್ರತಿಯೋಬ್ಬರು ಅಳವಡಿಸಿಕೊಂಡು ಕಷ್ಟದಲ್ಲಿದ್ದವರಿಗೆ ಕೈಲಾದಮಟ್ಟಿಗೆ ಸಹಾಯ ಸಹಕಾರ ಮಾಡಬೇಕೆಂದರು.
ದೇಶದಲ್ಲಿ ಅನೇಕ ಜನರು ಶ್ರೀಮಂತರು ಇದ್ದಾರೆ ಆದರೆ ಸಾರ್ವಜನಿಕರ ಹಿತ ಹಾಗೂ ಧಾನ, ಧರ್ಮ ಮಾಡುವ ಗುಣ ಹೃದಯ ಶ್ರೀಮಂತಿಕೆ ಇರುವುದು ವಿರಳ .ಶಿವಾನಂದ ಮೂರಮನ್ ತಮ್ಮ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳದೆ ಬಡವರ, ರೋಗಿಗಳ ಸಹಾಯಕ್ಕೆ ನಿಂತಿರುವ ಕಾರ್ಯ ಶ್ಲ್ಯಾಗನೀಯ.ಕರೋನಾ ರೋಗದಿಂದ ನಾವು ಸಾಕಷ್ಟು ಕಲಿಯಬೇಕಾಗಿದೆ ಇದೊಂದು ಮಾನವ ಕುಲಕೋಟಿಗೆ ಪಾಠಕಲಿಸಿದಂತಾಗಿದೆ ನಾವು ಗಳಿಸಿದ ಆಸ್ತಿ. ಸಂಪತ್ತು ನಮ್ಮ ಸಂಗಡ ಬರುವದಿಲ್ಲಾ ಪರೋಪಕಾರ ಇದಂ ಶರೀರ ಉಳ್ಳವರು ಇಲ್ಲದವರಿಗೆ ಸಹಾಯ ಮಾಡಿ ಭಗವಂತ ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಕರುಣಿಸುತ್ತಾನೆ ಎಂದು ಸಿ.ಪಿ.ಆಯ್ ಭೀಮನಗೌಡ ಬಿರಾದಾರ ಹಾರೈಸಿದರು.
ಕಾಂಗ್ರೇಸ್ ಯುವ ಮುಖಂಡ ಶಿವಾನಂದ ಮೂರಮನ್, ಆರ್.ಪಿ.ಆಯ್ ಅಧ್ಯಕ್ಷ ನಾಗೇಶ ತಳಕೇರಿ, ಡಿ.ಎಸ್.ಎಸ್ ಮುಖಂಡ ವಿನಾಯಕ ಗುಣಸಾಗರ, ಹುಚ್ಚಪ್ಪ ತಳವಾರ, ಶಿವಾನಂದ ತೆನ್ನೆಳ್ಳಿ, ಅಂಬೇಡ್ಕರ, ಡಾ. ರಾಜಶೇಖರ ಕೊಳೆಕರ್, ಡಾ. ರಮೇಶ ರಾಠೋಡ, ಡಾ. ಅನೀಲ ವಾಲಿ, ಡಾ. ಪ್ರೀತಿ ಕೊಳೆಕರ್, ಡಾ. ಜಗದೀಶ ಬಿರಾದಾರ, ಪ್ರವೀಣ ರಾಠೋಡ, ಅಮೀತ ಕೊಳೆಕರ್, ಸಶ್ರೋಷಕಿಯರಾದ ಶ್ರೀಮತಿ ವಿಜಯಲಕ್ಮಿ ಹಾದಿಮನಿ, ಶ್ರೀಮತಿ ಪೋಳ, ರವಿ ಹಾದಿಮನಿ, ವಿಜಯಕುಮಾರ ಪೋಳ, ಅಕ್ಷಯ ಬಳಬಟ್ಟಿ ಸೇರಿದಂತೆ ಅನೇಕ ಸಿಬ್ಬಂದಿಗಳು ಉಪಸ್ಥಿತರಿದ್ದರು.