ಲಾಕ್‍ಡೌನ್ ಜಾರಿ: ಖರೀದಿಗೆ ಮುಗಿಬಿದ್ದ ಸಾರ್ವಜನಿಕರು

ಹೊಸಪೇಟೆ ಏ27: ಲಾಕ್‍ಡೌನ್ ಘೋಷಣೆಯಾಗುತ್ತಿದಂತೇ, ಊರಿಗೆ ಹೋಗಬಯಸುವವರು, ದಿನಸಿ ಖರೀದಿಸುವವರು ಸೋಮವಾರ ಮತ್ತು ಇಂದು ಬೆಳೆಗಿನಿಂದಲೇ ಮುಗಿ ಬಿದ್ದರು.
ರಾಜ್ಯಾದ್ಯಾಂತ 14 ದಿನಗಳ ಲಾಕ್‍ಡೌನ್ ಜಾರಿ ಸುದ್ದಿ ತಿಳಿಯುತ್ತಿಂದತೇ, ತಮ್ಮ ಮಕ್ಕಳು, ಮರಿ ಹಾಗೂ ಲಗೇಜ್ ಹಿಡಿಕೊಂಡು ಬಸ್‍ಗಾಗಿ ಕಾದು ಕುಳಿತ ದೃಶ್ಯ ಕಂಡು ಬಂದಿತು.
ಕೆಲವರು ಇಲ್ಲಿಂದ ಜಾಗ ಖಾಲಿ ಮಾಡಿ ತಮ್ಮ ಊರಿನತ್ತ ಪ್ರಯಾಣ ಬೆಳಸಲು ಬಸ್‍ಗಳ ಬರಿವಿಕೆಗಾಗಿ ಕಾಯುತ್ತಿದ್ದರೆ, ಕೆಲವರು ತಮ್ಮ ಊರು ಕಡೆ ಬಂದು ಬಸ್‍ನಲ್ಲಿ ಕೂತು ಪ್ರಯಾಣ ಬೆಳಿಸಿದರು.
ಇನ್ನೇನು ಲಾಕ್‍ಡೌನ್ ಘೋಷಣೆಯಾಗಿದೆ ಮನೆಗೆ ಬೇಕಾಗುವ ಅಗತ್ಯ ವಸ್ತುಗಳ ಖರೀದಿ ಮಾಡಿಕೊಂಡು ಮನೆ ಸೇರಬೇಕು ಎಂಬ ತವಕದಲ್ಲಿ ಕಿರಾಣಿ ಅಂಗಡಿ, ಮದ್ಯದಂಗಡಿ, ಹಾಗೂ ಮದ್ಯ ಖರೀದಿಗೆ ಮುಗಿ ಬಿದ್ದದು ಕಂಡುಬಂತು.