ಲಾಕ್‍ಡೌನ್:ಮಾರುಕಟ್ಟೆಗೆ ಬಂದ ಜನಸಾಗರ

ಹೊಸಪೇಟೆ ಮೇ 19: ಹೊಸಪೇಟೆ ನಗರ ಸೇರಿದಂತೆ ವಿಜಯನಗರ ಜಿಲ್ಲೆಯಾದ್ಯಂತ ಮೇ 24ರ ವರೆಗೂ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಹಿಂದೆದೂ ಕಾಣದ ಜನ ಜಂಗುಳಿ ನಗರದ ಬಹುತೇಕ ರಸ್ತೆಗಳಲ್ಲಿ ಜನಸಾಗರದಂತೆ ಕಂಡುಬಂತು.
ಕರೋನಾ ವ್ಯಾಪಕವಾಗುತ್ತೀದೆ ಎಂಬ ಕಾರಣದಿಂದಲೇ ಲಾಕ್‍ಡೌನ್ ಮಾಡಲಾಗಿದೆಯಾದರೂ ಇವು ಯಾವುದರೂಗಳ ಪರಿವಿಲ್ಲದಂತೆ ಮುಖ್ಯಬೀದಿ, ಹಳೆ ಬಸ್‍ನಿಲ್ದಾಣ, ಸಂತೆ ಮಾರುಕಟ್ಟೆ, ಚಿಕನ್ ಮಾರ್ಕೆಟ್, ಹಣ್ಣು ತರಕಾರಿ ಮಾರುಕಟ್ಟೆ, ಮೂರಂಗಡಿ ವೃತ್ತ ಸೇರಿದಂತೆ ಎಲ್ಲಡೆಗಳಲ್ಲಿಯೂ ಜನ ಸಾಮಾಜಿಕ ಅಂತರ ಕರೋನಾ ಬೀತಿಗಳನ್ನು ಮರೆತು ಮುಗಿಬಿದ್ದು ಹಣ್ಣು, ತರಕಾರಿ, ದಿನಸಿ ಪೆಟ್ರೋಲ್ ಅಷ್ಟೇ ಏಕೇ..ಮಧ್ಯ ಖರೀದಿ ಮಾಡಿದ್ದು ಕಂಡುಬಂತು.
ಎಪಿಎಂಸಿಗಳಲ್ಲಿ ತರಕಾರಿ ಖರೀದಿಸಿ ನಗರದ ವಿವಿಧ ಪ್ರದೇಶಗಳಲ್ಲಿ ತಳ್ಳುಗಾಡಿಗಳಲ್ಲಿ ಮಾರಲಾಗುತ್ತದೆ ಎಂದು ತಿಳಿಸಿದ್ದರೂ ಜನ ನಾಳೆ ಏನು ಎಂತೋ ಎಂದು ತರಕಾರಿ, ಹಣ್ಣು ಹಂಪಲಗಳನ್ನು ಸಿಗುತ್ತೋ ಇಲ್ಲವೋ ಎಂಬಂತೆ ಖರೀದಿಗೆ ನಗರದ ಹಂಪಿ ರಸ್ತೆ, ಬಳ್ಳಾರಿ ರಸ್ತೆ, ಮುಖ್ಯರಸ್ತೆ, ಮೂರಂಗಡಿ ವೃತ್ತ, ಹಳೇ ಬಸ್ ನಿಲ್ದಾಣ, ಡ್ಯಾಂ ರಸ್ತೆಯಲ್ಲಿ ಹಿಂದೆದೂ ಕಾಣದ ಜನಜಂಗುಳಿ ವಾಹನ ದಟ್ಟಣೆ ಇಂದು ಕಂಡುಬಂತು.
ಇನ್ನೂ ಮಧ್ಯದಂಗಡಿಗಳ ಮುಂದೆ ಎಲ್ಲಾ ಕರೋನಾ ನಿಯಮಗಳನ್ನು ಪಾಲನೆ ಮಾಡಿ ಮುಂದಿನ ಐದು ದಿನಗಳಿಗೆ ಬೇಕಾಗುವಷ್ಟು ಮಧ್ಯಖರೀದಿಗೆ ಮುಂದಾಗಿರುವುದು ಕಂಡು ಬಂತು.