ಲಾಕ್‌ಡೌನ್ ವಿಸ್ತರಣೆ ಬಹುತೇಕ ನಿಶ್ಚಿತ

ಬೆಂಗಳೂರು,ಮೇ ೩೧- ರಾಜ್ಯದಲ್ಲಿ ಲಾಕ್‌ಡೌನ್‌ನ್ನು ವಿಸ್ತರಿಸುವುದು ಬಹುತೇಕ ನಿಶ್ಚಿತವಾಗಿದ್ದು, ಜೂ. ೧೩ರವರೆಗೂ ಲಾಕ್‌ಡೌನ್ ವಿಸ್ತರಣೆಯಾಗುವ ಸಾಧ್ಯತೆಗಳಿವೆ.
ಲಾಕ್‌ಡೌನ್ ವಿಸ್ತರಣೆ ಸಂಬಂಧ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಸೇರಿದ್ದು, ವರದಿಯಲ್ಲಿ ಲಾಕ್‌ಡೌನ್ ವಿಸ್ತರಿಸುವಂತೆ ತಜ್ಞರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸದ್ಯ ಜೂ.೭ರವರೆಗೂ ಲಾಕ್‌ಡೌನ್ ಜಾರಿಯಲ್ಲಿದ್ದು, ೭ರ ನಂತರ ಲಾಕ್‌ಡೌನ್‌ನ್ನು ಕನಿಷ್ಠ ಒಂದು ವಾರಗಳ ಕಾಲ ಅಂದರೆ ಜೂ. ೧೩ರವರೆಗೂ ವಿಸ್ತರಿಸುವುದು ಸೂಕ್ತ. ಇದರಿಂದ ಸೋಂಕನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಸಾಧ್ಯ ಎಂಬುದನ್ನು ತಜ್ಞರು ವರದಿಯಲ್ಲಿ ಹೇಳಿದ್ದಾರೆ.
ಜೂ. ೭ರ ನಂತರ ಏಕಾಏಕಿ ಅನ್‌ಲಾಕ್ ಮಾಡಿದರೆ ಸೋಂಕು ಮತ್ತೆ ಹೆಚ್ಚಳವಾಗಬಹುದು. ಜತೆಗೆ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹಾಗಾಗಿ, ಲಾಕ್‌ಡೌನ್‌ನ್ನು ವಿಸ್ತರಿಸಿ ಎಂದು ತಜ್ಞರು ಸಲಹೆ ಮಾಡಿದ್ದಾರೆ.