ಲಾಕ್‌ಡೌನ್ ವಿರೋಧಿಸಿ ಪ್ರತಿಭಟನೆ

ಜಿನೆವಾ, ಸೆ.೧೫ : ಇಸ್ರೇಲ್‌ನಲ್ಲಿ ಕೊರೊನಾ ವೈರಸ್‌ನ ತೀವ್ರ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಜನರು ೫೦೦ ಮೀಟರ್‌ನ ಆಚೆ ಬರದಂತೆ ದಿಗ್ಭಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ.
ಯೂರೋಪ್‌ನ ದೇಶಗಳಲ್ಲಿ ಕೊರೊನಾ ೩ ಲಕ್ಷ ದಾಟಿದ ಸಂಖ್ಯೆಯನ್ನು ತಲುಪಿದ್ದು, ಸಾವು ಕೂಡ ಅಪಾರ ಸಂಖ್ಯೆಯಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಮೂರು ವಾರಗಳ ಲಾಕ್‌ಡೌನ್ ಘೋಷಣೆ ಮಾಡಲಾಯಿತು. ಇದರಿಂದ ಕೆರಳಿದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿ ಅಲ್ಲಿನ ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೋವಿಡ್‌ನ ಹಿನ್ನೆಲೆಯಲ್ಲಿ ವಿಶ್ವದ ಅನೇಕ ದೇಶಗಳು ಸಂಕಷ್ಟ ಅನುಭವಿಸುತ್ತಿವೆ. ದಿನವೊಂದಕ್ಕೆ ೩ ಲಕ್ಷಕ್ಕಿಂತ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗುತ್ತವೆ. ಇದು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಬಹಳವೇ ತೊಂದರೆ ಕೊಡುವ ಸಾಧ್ಯತೆಗಳಿವೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಅಂದಾಜು ಮಾಡಿದೆ.
ಕಳೆದ ವರ್ಷ ಚೀನಾದಿಂದ ಹಬ್ಬಿದ ಈ ಮಾರಣಾಂತಿಕ ರೋಗ ಇಡೀ ವಿಶ್ವವನ್ನೇ ಕಾಡುತ್ತಿದೆ. ಎಲ್ಲಾ ನಿಯಂತ್ರಣಗಳನ್ನು ಕೈಗೊಂಡರೂ ಹತ್ತಿಕ್ಕುವುದು ಅಸಾಧ್ಯವಾಗಿದೆ. ದಿನದಿಂದ ದಿನಕ್ಕೆ ಹೊಸ ಪ್ರಕರಣಗಳು ಮತ್ತು ಸಾವುಗಳು ಹೆಚ್ಚಾಗುತ್ತಿರುವುದು ಸಹ ಆತಂಕ ತದ್ದೊಡ್ಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.