ಲಾಕ್‌ಡೌನ್: ವಿನಾಯಿತಿ ಇದ್ದರು, ರೈತ,ಕೂಲಿಕಾರರಿಗೆ ಕಿರುಕುಳ

ರಾಯಚೂರು ಮೇ೩ :- ಲಾಕ್‌ಡೌನ್ ನಿಂದ ಕಟ್ಟಡ ಕಾರ್ಮಿಕರು ಮತ್ತು ಕೃಷಿ ಉತ್ಪನ್ನ ಮಾರಾಟಗಳಿಗೆ ವಿನಾಯಿತಿ ನೀಡಿದ್ದರು ಜಿಲ್ಲೆಯಲ್ಲಿ ಪೊಲೀಸರು ವಿನಃ ಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಸಹಕಾರಿ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ವಿರುಪಾಕ್ಷಪ್ಪ ಪತ್ತೇಪೂರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಲಾಕ್‌ಡೌನ್ ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೂ ಜಿಲ್ಲೆಯಲ್ಲಿ ಪೊಲೀಸರು ಕಟ್ಟಡ ಕಾರ್ಮಿಕರು ಮತ್ತು ರೈತರ ವಾಹನಗಳನ್ನು ಜಪ್ತಿ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕಟ್ಟಡ ಕಾಮಗಾರಿಗಳ ಮಲೆ ತೀವ್ರ ಪರಿಣಾಮ ಭೀರಿದ. ಕೂಲಿ ಕಾರ್ಮಿಕರಿಗೆ ಯಾವುದೆ ಪರಿಹಾರ ನೀಡದೆ, ಇತ್ತ ಕೆಲಸಕ್ಕು ಅವಕಾಶ ನೀಡದಿದ್ದರೆ ಇವರ ಕುಟುಂಬಗಳ ನಿರ್ವಹಣೆ ಗತಿ ಏನು ಎಂದು ಪ್ರಶ್ನಿಸಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕಟ್ಟಡ ಕೆಲಸ ಮತ್ತು ಕೃಷಿ ಉತ್ಪನ್ನ ಮಾರಾಟಕ್ಕೆ ಆಗಮಿಸುವ ರೈತರು ಪೊಲೀಸರ ತೊಂದರೆಗೆ ಭಾರಿ ದಂಡ ಕಟ್ಟುವ ಸ್ಥಿತಿ ಬಂದೊದಗಿದೆ. ಕಟ್ಟ ಕೆಲಸಗಳಿಗೆ ಸಂಬಂಧಿಸಿದ ಸಿಮೆಂಟ್ ಮತ್ತು ಹಾರ್ಡ್‌ವೇರ್ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವುದರಿಂದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ತಕ್ಷಣವೆ ಸೂಕ್ತ ನಿರ್ದೇನ ನೀಡುವಂತೆ ಅವರು ಒತ್ತಾಯಿಸಿದ್ದಾರೆ.