ಲಾಕ್‌ಡೌನ್ ಭೀತಿ: ಅಗತ್ಯ ವಸ್ತುಗಳ ಖರೀದಿ ಜೋರು

ದಾವಣಗೆರೆ,ಏ.27: ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ, ದಿನೇ ಹೆಚ್ಚಾಗುತ್ತಿರುವುದರಿಂದ ಇಂದು ರಾತ್ರಿಯಿಂದ 14 ದಿನಗಳ ಕಾಲ ಲಾಕ್‌ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿಂದು ಅಗತ್ಯ ವಸ್ತುಗಳ ಖರೀದಿ ಜೋರಿಗಿಯೇ ನಡೆಯಿತು.
ಲಾಕ್‌ಡೌನ್ ಜಾರಿಯಾದರೆ ಜೀವನ ನಡೆಸಲು ಬೇಕಾದ ದಿನ ಬಳಕೆಯ ಅಗತ್ಯ ವಸ್ತುಗಳು ನಾಳೆಯಿಂದ ಸಿಗುತ್ತೋ. ಇಲ್ಲವೋ ಎಂಬ ಆತಂಕದ ಹಿನ್ನೆಲೆಯಲ್ಲಿ ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವೆಡೆ ಅಗತ್ಯ ವಸ್ತುಗಳ ಖರೀದಿಗಾಗಿ ಜನತೆ ಮುಗಿ ಬಿದ್ದಿದ್ದರು. ಹೀಗಾಗಿ ಮಾರುಕಟ್ಟೆಯಲ್ಲಿ ಕಾಲಿಡಲು ಸಹ ಜಾಗ ಇರಲಿಲ್ಲ.
ದಿನಸಿ, ತರಕಾರಿ, ಹಣ್ಣು, ಮಾಂಸ, ಮೀನು, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್ ಎಂದಿನAತೆ ತೆರೆದಿದ್ದವು. ಇನ್ನುಳಿದಂತೆ ಬಟ್ಟೆ, ಚಿನ್ನಾಭರಣ, ಪಾತ್ರೆ, ಫ್ಯಾನ್ಸಿ ಸ್ಟೋರ್, ಸಿನಿಮಾ ಮಂದಿರ ಮುಚ್ಚಲ್ಗಪಟ್ಟಿದ್ದವು. ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಮುಗಿಬಿದ್ದಿದ್ದರು.
ಮಾರುಕಟ್ಟೆ ಪ್ರದೇಶಗಳಲ್ಲಿ ವಾಹನ ಸಂಚಾರವೂ ದಟ್ಟವಾಗಿತ್ತು. ಕೆಲವೆಡೆ ವಾಹನ ನಿಲುಗಡೆಗೆ ಸಹ ಸ್ಥಳಾವಕಾಶ ಇಲ್ಲದಿರುವುದು ಕಂಡು ಬಂತು.
ಇನ್ನೂ ಮುಚ್ಚಲ್ಪಟ್ಟಿದ್ದ ಬಟ್ಟೆ, ಚಿನ್ನಾಭರಣ ಅಂಗಡಿಗಳ ಮುಂದೆಯು ಜನರು ನಿಂತಿದ್ದರು. ಹೀಗೆ ನಿಂತಿದ್ದ ಗ್ರಾಹಕರನ್ನು ಅಂಗಡಿಗಳ ಮಾಲೀಕರು ಅರ್ಧ ಬಾಗಿಲು ತರೆದು, ಹಿಂಬಾಗಿಲ ಮೂಲಕ ಒಬ್ಬೊಬ್ಬರನ್ನೇ ಅಂಗಡಿಗಳ ಒಳಗೆ ಕಳುಹಿಸಿ, ಕಳ್ಳ ವ್ಯಾಪಾರ ನಡೆಸುತ್ತಿದ್ದ ದೃಶ್ಯವೂ ಅಲ್ಲಲ್ಲಿ ಕಂಡು ಬಂತು.