ಲಾಕ್‌ಡೌನ್ ಭತ್ಯೆ ಒದಗಿಸಲು ಒತ್ತಾಯ

ರಾಯಚೂರು.ಏ.೨೮- ಆಹಾರ ಧಾನ್ಯ ಹೆಚ್ಚಳ, ಲಾಕ್‌ಡೌನ್ ಭತ್ಯೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಳ ಒತ್ತಾಯಿಸಿ ಸ್ಲಂ ನಿವಾಸಿಗಳ ಕ್ರೀಯಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೊರೋನಾ ದೇಶದ್ಯಾಂತ ಭೀಕರ ಪರಿಸ್ಥಿತಿ ಬಂದಿದ್ದು ದಿನದಿಂದ ದಿನಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಕೊರತೆ ತೀವ್ರವಾಗುತ್ತಿದೆ. ತೀವ್ರ ಅನಾರೋಗ್ಯಕ್ಕೆ ಈಡಾದವರು ಸಾವನ್ನಪ್ಪುತ್ತಿದ್ದಾರೆ. ವ್ಯಾಕ್ಸಿನ್ ಸರಬುರಾಜಿನಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಸರ್ಕಾರ ಕೊರೋನಾ ಸಂತ್ರಸ್ತರನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ರಾಯಚೂರು ನಗರ ಕೊಳಚೆ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ, ವ್ಯಾಕ್ಸಿನೇಷನ್ ಹಾಗೂ ಸಾಮಾನ್ಯ ಖಾಯಿಲೆಗಳಿಗೆ ಒಂದೆ ಕಡೆ ಚಿಕಿತ್ಸೆ ನೀಡಲಾಗುತ್ತದೆ. ಪ್ರತ್ಯೆಕ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಎಲ್ಲಾ ಕೊಳಚೆ ಪ್ರದೇಶಗಳಲ್ಲಿ ರ್‍ಯಾಪೀಡ್ ಪರೀಕ್ಷೆ ಮಾಡಿಸಲು ಜಿಲ್ಲಾಡಳಿತಗಳಿಗೆ ಆದೇಶ ನೀಡಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್, ಆಮ್ಲಜನಕ, ಐಸಿಯೂ ಕೊರತೆ ನಿಗೀಸಲು ಸಕಾರ ಪ್ರತಿ ನಗರಗಳಲ್ಲಿ ಸ್ಲಂಗಳ ಕ್ಲಸ್ಟರ್ ಮಟ್ಟದಲ್ಲಿ ಕನಿಷ್ಠ ೫೦೦ ಹಾಸಿಗೆ ಉಳ್ಳ ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಬಸವರಾಜ ಹೊಸೂರು, ವೀರೇಶ, ನರಸಿಂಹಲು ಸೇರಿದಂತೆ ಇತರರು ಉಪಸ್ಥಿತರಿದ್ದರು.