ಲಾಕ್‌ಡೌನ್ ಬಿಗಿ : ಅನಾವಶ್ಯಕ ತಿರುಗಾಟಕ್ಕೆ ಬ್ರೇಕ್ ಹಾಕಲು ಚೆಕ್ ಪೋಸ್ಟ್

ಲಿಂಗಸುಗೂರು.ಮೇ.೧೫-೧೬ರಿಂದ ೧೮ರವರಿಗೆ ಸಂಪೂರ್ಣ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಅನಗತ್ಯ ತಿರುಗಾಟಕ್ಕೆ ಬ್ರೇಕ್ ಹಾಕಲು ಮೂರು ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ.
ಪಟ್ಟಣದ ಬಸ್ ನಿಲ್ದಾಣ ವೃತ್ತದ ಬಳಿ, ಗಡಿಯಾರ ವೃತ್ತ, ಬಸವಸಾಗರ ಕ್ರಾಸ್ ಬಳಿ ಚೆಕ್‌ಪೋಸ್ಟ್ ಮಾಡಲಾಗಿದೆ. ಅನಗತ್ಯ ತಿರುಗಾಡುವರಿಗೆ ದಂಡ ವಿಧಿಸಲು ಪೋಲಿಸ್‌ರೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ನಿಯೋಜಿಸಲಾಗಿದೆ.
ಕೋರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ರೋಗ ನಿಯಂತ್ರಣಕ್ಕಾಗಿ ಮುಂಜಾಗೃತ ಕ್ರಮವಾಗಿ ಕೋವಿಡ್ ಸೊಂಕು ದೃಡಪಟ್ಟ ರೋಗಿಗಳು ಕೋವಿಡ್ ಸೆಂಟರ್‌ಗೆ ದಾಖಲಾಗದೇ ಹೋಂ ಐಸೋಲೇಷನ್‌ಗೆ ಪ್ರತ್ಯೇಕ ವ್ಯವಸ್ಥೆ ಇರುವುದಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ಇಚ್ಛಿಸಿದ್ದಲ್ಲಿ ಈ ಬಗ್ಗೆ ದೃಡಿಕರಣ ನೀಡಬೇಕಾಗಿದೆ. ಇದಕ್ಕಾಗಿ ಐದು ವಾರ್ಡಗಳಿಗೆ ಇಬ್ಬರು ಪುರಸಭೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಸೊಂಕಿತರ ಮನೆಗೆ ತೆರಳಿ ಮನೆಯಲ್ಲಿ ಮೂಲಭೂತ ಸೌಕರ್ಯ ಮತ್ತು ಪ್ರತ್ಯೇಕ ವ್ಯವಸ್ಥೆ ಇರುವ ಬಗ್ಗೆ ಪರಿಶೀಲನೆ ನಡೆಸಿ ಅಂತಹ ಪ್ರತ್ಯೇಕ ಸೌಕರ್ಯಗಳು ಇಲ್ಲದಿದ್ದಲ್ಲಿ ಸೊಂಕಿತರನ್ನು ಕಡ್ಡಾಯವಾಗಿ ಕೋವಿಡ್ ಸೆಂಟರ್ ಸೇರಿಸಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಈಗಾಗಲೇ ೨೩ ಸೊಂಕಿತರನ್ನು ಕೋವಿಡ್ ಸೆಂಟರ್‌ಗೆ ಸೇರಿಸಲಾಗಿದೆ.