ಲಾಕ್‌ಡೌನ್ ನೆಪದಲ್ಲಿ ಪೊಲೀಸರಿಂದ ಕಿರುಕುಳ-ಆರೋಪ

ಕೋಲಾರ,ಮೇ.೪: ರಾಜ್ಯ ಸರಕಾರದ ಲಾಕ್‌ಡೌನ್ ಜಾರಿಯ ಘೋಷಣೆ ಹೆಸರಲ್ಲಿ ಸವಿತಾ ಸಮಾಜದ ಅಮಾಯಕರನ್ನು ವಿನಾಕಾರಣ ಪೊಲೀಸ್ ಠಾಣೆಗೆ ಕರೆ ತಂದು ಕೂಡಿ ಹಾಕುತ್ತಿರುವುದು ಸರಿ ಬರುವುದಿಲ್ಲ ಎಂದು ಕೆಪಿಸಿಸಿ ಒಬಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಎಸ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ ಮಾತನಾಡಿ, ಈ ರೀತಿಯ ಅಮಾನವೀಯ ಘಟನೆಗಳು ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದ್ದಾರೆ.ಸರಕಾರ ಲಾಕ್ ಡೌನ್ ನಲ್ಲಿ ಬೆಳಗ್ಗೆ ೬ ರಿಂದ ೧೦ರ ವರೆಗೂ ಅವಕಾಶ ನೀಡಿರುವ ನಿಟ್ಟಿನಲ್ಲಿ ಕ್ಷೌರಿಕರಿಗೆ ಮತ್ತು ಬಟ್ಟೆ ಐರನ್ ಮಾಡುವ ಅಂಗಡಿಗಳಿಗೂ ಸಹಕಾರಿಯಾಗಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರ ನೊಂದವರಿಗೆ ಸ್ಪಂದಿಸುವಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು, ಮದ್ಯ ದ ಅಂಗಡಿಗಳಿಗೆ ಹಾಗೂ ಹೋಟೆಲ್ ಗಳಿಗೆ ಅವಕಾಶ ಮಾಡಿಕೊಟ್ಟಿರುವ ಮಾದರಿಯಲ್ಲಿ ದಿನ ನಿತ್ಯದ ಕುಟುಂಬ ಪೊ?ಷಣೆಯಲ್ಲಿ ಇರುವ ಕೌರಿಕ ವೃತ್ತಿ ಮಡಿವಾಳ ವೃತ್ತಿ ಇವರಿಗೆ ಅವಕಾಶವನ್ನು ನೀಡದೆ ಇರುವುದು ದುರದೃಷ್ಟಕಾರ ಸಂಗತಿಯ ವಿಚಾರ ವಾಗಿದೆ ಎಂದು ದೂರಿದರು.