ಲಾಕ್‌ಡೌನ್ ನಲ್ಲಿ ಶಿಕ್ಷಕಿಯರಾದ ಗೃಹಿಣಿಯರು

ದಾವಣಗೆರೆ-ಜೂ.೭; ನಕಾರಾತ್ಮಕ ಚಿಂತನೆ ಬಿಟ್ಟು ಸಕಾರಾತ್ಮಕ ಚಿಂತನೆಯೊಂದಿಗೆ ನಮ್ಮನ್ನು ನಾವು ಕ್ರಿಯಾಶೀಲತೆಯೊಂದಿಗೆ ಅಂತರಾಳದ ಬದ್ಧತೆಯಿಂದ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಕರೋನಾ ಮರತೇ ಹೋಗುತ್ತದೆ ಎಂಬುದಕ್ಕೆ ದಾವಣಗೆರೆಯ ಕುಂದುವಾಡ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಬಡಾವಣೆಯ ಕಾವೇರಿ ಅಪಾರ್ಟ್ಮೆಂಟ್‌ನ ನಿವಾಸಿಗಳ ಸಂಘಟನೆ “ಕಾವೇರಿ ಸಾಂಸ್ಕೃತಿಕ ವೇದಿಕೆ” ಪ್ರತ್ಯಕ್ಷ ಸಾಕ್ಷಿ.ಕಳೆದ ಒಂದು ತಿಂಗಳಿಂದ ಆಪಾರ್ಟ್ಮೆಂಟ್‌ನಲ್ಲಿರುವ ಮಕ್ಕಳಿಗೆ ಮುಚ್ಚಿರುವ ಶಾಲೆಗಳಿಂದ ಶಿಕ್ಷಣದ ಅರಿವೇ ಮರೆತು ಹೋಗುವ ಹಂತದಲ್ಲಿ ಈ ಸಂಘಟನೆಯ ಅಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈಯವರ ನೇತೃತ್ವದಲ್ಲಿ ಪ್ರತಿನಿತ್ಯ ಮಕ್ಕಳಿಗೆ ಆಟ ಆಡಲು ಒಂದು ಸಮಯ ನಿಗದಿ ಮಾಡಿ ನಂತರ ಮಾಸ್ಕ್ ಧಾರಣೆ, ಸಾಮಾಜಿಕ ಅಂತರದಲ್ಲಿ ಶೈಕ್ಷಣಿಕ ತರಗತಿಗಳನ್ನು ನಡೆಸುತ್ತಾ ಪ್ರತಿನಿತ್ಯ ಕನ್ನಡ, ಗಣಿತ, ವಿಜ್ಞಾನ, ಇಂಗ್ಲೀಷ್, ಹಿಂದಿ, ಸಾಮಾನ್ಯ ಜ್ಞಾನ, ಚಿತ್ರಕಲೆ, ರಾಮಾಯಣ, ಮಹಾಭಾರತ, ಕೌಟುಂಬಿಕ ಸಂಬAಧ, ಜಾಣಗಣಿತ, ಜಾಣ ಒಗಟು, ರಸರಂಜನೆ, ಯೋಗಾಸನ, ರಸಪ್ರಶ್ನೆ, ಆಟೋಟಸ್ಪರ್ಧೆ ಹೀಗೆ ವಿವಿಧ ವಿಷಯಗಳ ತರಗತಿ ನಡೆಸುತ್ತಾ ಮಕ್ಕಳಲ್ಲಿ ಹೊಸ ಹುರುಪು, ಅವರ ಜ್ಞಾನ ಹೆಚ್ಚಿಸುವ ಹಂತದಲ್ಲಿ ಯಶಸ್ವಿಯಾಗಿ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಮಕ್ಕಳ ಪಾಠದ ಸಮಯದಲ್ಲಿ ಕೆಲವು ಹಿರಿಯ ನಾಗರೀಕರು, ಪೋಷಕರು ತರಗತಿಗೆ ಬಂದು ತಮ್ಮ ಜ್ಞಾನ ಭಂಡಾರ ಹೆಚ್ಚಾಗುತ್ತಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಇನ್ನೊಂದು ವಿಶೇಷ ಎಂದರೆ ಆಪಾರ್ಟ್ಮೆಂಟ್‌ನಲ್ಲಿ ವಾಸವಾಗಿರುವ ಕೆಲವು ಗೃಹಿಣಿಯರು ಸ್ವಯಂ ಪ್ರೇರೆಣೆಯಿಂದ ಮಕ್ಕಳಿಗೆ ವಿವಿಧ ವಿಷಯಲ್ಲಿ ಅವರವರ ಮನೆಗಳಲ್ಲಿ ಪಾಠ ಮಾಡುತ್ತಾ ಶಿಕ್ಷಕಿಯಾಗಿ ಪರಿವರ್ತನೆಯಾಗುತ್ತಿರುವುದು ಇತರ ಗೃಹಿಣಿಯರಿಗೆ ಮಾದರಿಯಾಗಿದ್ದಾರೆ