ಲಾಕ್ಡೌನ್ ಬೇಡ ರಾತ್ರಿ ಕರ್ಪ್ಯೂ ಸಾಕು: ಶ್ರೀರಾಮುಲು

ಬಳ್ಳಾರಿ, ಏ.16: ಕರೋನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮತ್ತೆ ಲಾಕ್ಡೌನ್ ಮಾಡಿದರೆ. ಜನರು ಮೂರಪ್ಪೊತ್ತು ಊಟ ಮಾಡೋದು ಕಷ್ಟವಾಗ್ತದೆ. ಹೀಗಾಗಿ ಲಾಕ್ಡೌನ್ ಬೇಡ. ಬೇಕಾದರೆ ರಾತ್ರಿ ಕರ್ಪ್ಯೂ ವಿಧಿಸಿದರೆ ಸಾಕು ಎಂದು ಸಮಾಜ‌ಕಲ್ಯಾಣ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದಲ್ಲಿ ಇಂದು ಪಾಲಿಕೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.
ಈಗಗಾಲೇ ಮೊದಲ ಅಲೆಯಲ್ಲಿ ಲಾಕ್ ಡೌನ್ ಮಾಡಿದಾಗಿನ ಜನರ ಸಂಕಷ್ಟ ನೋಡಿದ್ದೇವೆ ಅದಕ್ಕಾಗಿ ಸಧ್ಯ ಲಾಕ್ ಡೌನ್ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದರು.
ಉಲ್ಲಂಘನೆ: ಚುನಾವಣೆ ಪ್ರಚಾರ ವಿಚಾರದಲ್ಲಿ ಜನರ ಜೊತೆಗೆ ಜನಪ್ರತಿನಿಧಿಗಳು ಕೊರೊನಾ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ.
ಜನರು ಮತ್ತು ಜನ ಪ್ರತಿನಿಧಿಗಳು ಮಾಡೋ ತಪ್ಪುನ್ನು ಸ್ವತಃ ಸಚಿವ ಶ್ರೀರಾಮುಲು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಚುನಾವಣೆ ವೇಳೆ ನೂರಾರು ಜನರು ಏಕಕಾಲಕ್ಕೆ ಬೀದಿಗಿಳಿಯುತ್ತಿದ್ದಾರೆ.ಪ್ರಚಾರದ ವೇಳೆ ಕೆಲವೊಮ್ಮೆ ಜನರು ನಮ್ಮ ಮಾತು ಕೇಳುತ್ತಿಲ್ಲ.
ಪ್ರಚಾರ ಮತ್ತು ಚುನಾವಣೆಗಿಂತ ಜೀವನ ಮುಖ್ಯ ಜನರು ಎಚ್ಚತ್ತುಕೊಳ್ಳಿ ಎಂದು ಅವರು ಮನವಿ ಮಾಡಿದರು.