ಲಾಕ್ಡೌನ್ ತರಕಾರಿ ಕಿಟ್ ವಿತರಣೆ.

ಕೂಡ್ಲಿಗಿ.ಮೇ.21:- ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರವು ಲಾಕ್ ಡೌನ್ ಮಾಡಿರುವ ಈ ಸಂದರ್ಭದಲ್ಲಿ ದಿನಕೂಲಿ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದವರ ಬದುಕು ಕಷ್ಟಕರವಾಗಿದ್ದು ಇಂತಹ ಸಂತ್ರಸ್ತರನ್ನ ಗುರುತಿಸಿದ ಪಟ್ಟಣದ ಐದನೇ ವಾರ್ಡ್ ನ ಆಜಾದ್ ನಗರದಲ್ಲಿರುವ ರೆಹಮಾನಿಯಾ ಮಸೀದಿ ಕಡೆಯಿಂದ ಇಂದು ತರಕಾರಿ ಕಿಟ್ ವಿತರಣೆ ಮಾಡಲಾಯಿತು.
ಈರುಳ್ಳಿ ,ಹಸಿಮೆಣಸಿನಕಾಯಿ ,ಬೆಳ್ಳುಳ್ಳಿ ,ನೆಲ ಕೋಸು ,ಟೊಮೆಟೊ ,ಜವಳೆಕಾಯಿ ಇತರೆ ತರಕಾರಿಯನ್ನು ಧರ್ಮಾತೀತವಾಗಿ ಸಂತ್ರಸ್ತರನ್ನು ಗುರುತಿಸಿ ಕಿಟ್ ವಿತರಿಸಲಾಯಿತು.
ಮಹಾಮಾರಿ ಕೊರೋನಾ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಹಾಕಿ ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಆತಂಕದ ಪರಿಸ್ಥಿತಿ ಯಲ್ಲಿದ್ದಾರೆ . ಇದನ್ನು ತಡೆಯಲು ಜಿಲ್ಲಾಡಳಿತ ತಾಲೂಕಾಡಳಿತ ಪಟ್ಟಣ ಪಂಚಾಯತಿ ಕಟ್ಟುನಿಟ್ಟಿನ ಕ್ರಮ ಜಾರಿಗೆಗೊಳಿಸಿ ಕೋರೋನಾ ಕಟ್ಟಿಹಾಕಲು ಲಾಕ್ಡೌನ್ ಜಾರಿಗೆಗೊಳಿಸಿ ಜನರ ಸಾವನ್ನು ತಡೆಯಲು ಆಡಳಿತ ವರ್ಗ ಕ್ರಮ ಜರುಗಿಸಿದ್ದು ಇದರ ಮಧ್ಯೆ ಬಡವರು ನಿರ್ಗತಿಕರು ಕೆಲಸವಿಲ್ಲದೆ ತಮ್ಮ ಕುಟುಂಬ ನಿರ್ವಹಿಸಲು ಆತಂಕದಲ್ಲಿದ್ದಾರೆ ಅಂತಹ ಕುಟುಂಬಗಳಿಗೆ ನೆರವಾಗಲೆಂದು ಕೂಡ್ಲಿಗಿ ಪಟ್ಟಣದ 5ನೇ ವಾರ್ಡಿನ ಅಜಾದ್ ನಗರದ ಮುಸ್ಲಿಂ ಬಾಂಧವರ ಸಹಾಯ ಮಾಡಬೇಕು ಎಂಬ ಆಲೋಚನೆಯಲ್ಲಿ ತಮ್ಮ ಸಮುದಾಯಕ್ಕೆ ಒಂದೇ ಅಲ್ಲದೆ ಪ್ರತಿಯೊಬ್ಬ ಸಮುದಾಯದ ನಿರ್ಗತಿಕ ಕುಟುಂಬಗಳಿಗೆ ತಮ್ಮಿಂದ ಸಾಧ್ಯವಾದಷ್ಟು ಅಲ್ಪಪ್ರಮಾಣದ ಸಹಾಯವನ್ನು ನಿತ್ಯದ ಬದುಕಿಗೆ ಬೇಕಾಗುವ ತರಕಾರಿಗಳನ್ನು ನೀಡಲು ಮುಂದಾಗಿರುವುದು ಈ ಪರಿಸ್ಥಿತಿಯಲ್ಲಿ ಅವಶ್ಯಕವಾದ ಕಾರ್ಯ ಎಂದು ಭಾವಿಸುತ್ತಾ ಸಂತ್ರಸ್ತರಿಗೆ ಉಪಯೋಗವಾಗಲೆಂದು ತರಕಾರಿ ಕಿಟ್ ನೀಡಲು ಮುಂದಾದರು.
ಕಿಟ್ ವಿತರಣೆಯಲ್ಲಿ ತೊಡಗಿಕೊಂಡವರು : ಮಕ್ಬೂಲ್ ಮೌಲಾನಾ ಮಸೀದಿಯ ಗುರುಗಳು ,ಮಸೀದಿಯ ಮುಖಂಡರು ಮೆಡಿಕಲ್ ಮನ್ನಾನ್ ,ರಾಯಲ್ ಶಫಿ , ರಹೀಮ್ ಸಾಬ್ ,ಯಾಕೂಬ್ ಸಾಬ್ ,ಬುಡೇನ್ ಸಾಬ್ ,ಅಬ್ದುಲ್ಲಾ ಎನ್. ಕೆ ,ಜಾವೇದ್, ಮಲಿಕ್,ಹಾಲಾಡಿ ಖಾಲಿಕ್, ಶಫಿ ,ಆರಿಫ್ ,ಸಲ್ಮಾನ್ ,ಸಲೀಮ್ , ಪತ್ರಕರ್ತ ಟಿ.ಇಬ್ರಾಹೀಂ ಖಲೀಲ್,ಮಸೀದಿಯ ಮುತಾವಲ್ಲಿ ಎ. ಎಂ.ಭಾಷಾ ಸಾಬ್ ಇನ್ನಿತರರು ಭಾಗಿಯಾಗಿದ್ದರು.
ಈ ಸಾಮಾಜಿಕ ಕಳಕಳಿಯ ಕೆಲಸವನ್ನು ಪುಣ್ಯದ ಕೆಲಸವೆಂದು ಭಾವಿಸಿ ಧರ್ಮಾತೀತವಾಗಿ ಕಡುಬಡ ಕುಟುಂಬಕ್ಕೆ ತರಕಾರಿ ಕಿಟ್ ಮುಟ್ಟಿಸುವ ವ್ಯವಸ್ಥೆ ಮಾಡಿ ಆ ದೇವರಲ್ಲಿ ಮಹಾಮಾರಿ ಕೊರೋನಾದಿಂದ ಮುಕ್ತಿಯಾಗಲೆಂದು ಪ್ರಾರ್ಥನೆ ಸಹ ಮಾಡುವಲ್ಲಿ ಮಸೀದಿಯ ಮೌಲಾಲಿ ಹಾಗೂ ಮುಖಂಡರೂ ಮುಂದಾಗಿದ್ದರೆಂದು ಮುಸ್ಲಿಂ ಬಾಂಧವರ ಯುವ ಮುಖಂಡ ಹಾಗೂ ಪತ್ರಕರ್ತ ಇಬ್ರಾಹಿಂ ಕಲೀಲ್ ಪತ್ರಿಕೆಗೆ ತಿಳಿಸಿದರು.