ಲಾಕ್ಡೌನ್ ಉಲ್ಲಂಘನೆ ಹಿನ್ನೆಲೆ ಬಬಲಾದ ಗ್ರಾಮದಲ್ಲಿರುವ ಸದಾಶಿವ ಮುತ್ಯಾನ ಮಠಕ್ಕೆ ಸೂಕ್ತ ಬಂದೋ ಬಸ್ತ

ವಿಜಯಪುರ, ಜೂ.9-ಬಬಲೇಶ್ವರ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿರುವ ಸದಾಶಿವ ಮುತ್ಯಾನ ಮಠದ ಹೊರಗಿನ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ, ಕೋವಿಡ್19 ರ ನಿಯಂತ್ರಣಕ್ಕಾಗಿ ಸರ್ಕಾರವು ವಿಧಿಸಿದ ಲಾಕ್‍ಡೌನ್ ಜಾರಿಯಲ್ಲಿದ್ದ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಈ ಕುರಿತು ಬಬಲೇಶ್ವರ ತಾಲ್ಲೂಕಿನ ತಹಸೀಲ್ದಾರರು ಪರಿಶೀಲಿಸಿ ಈ ಕೆಳಗಿನಂತೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಬಬಲಾದ ಗ್ರಾಮದಲ್ಲಿರುವ ಸದಾಶಿವ ಮುತ್ಯಾನ ಮಠದ ಹೊರಗಿನ ಆವರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭಕ್ತಾಧಿಗಳು ಬಿದರಿ ಮತ್ತು ಬಬಲಾದ ಗ್ರಾಮಗಳ ನಡುವೆ ಇರುವ ಹಳ್ಳದ ಮೂಲಕ ನೀರನ್ನು ಲೆಕ್ಕಿಸದೇ ಆಗಮಿಸಿ ಕೋವಿಡ್19 ರ ನಿಯಂತ್ರಣಕ್ಕಾಗಿ ಸರ್ಕಾರವು ವಿಧಿಸಿದ ಲಾಕ್‍ಡೌನ್ ಜಾರಿಯಲ್ಲಿದ್ದ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಹಲವು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರ ಪ್ರಯುಕ್ತ ತಹಶೀಲದಾರ ಬಬಲೇಶ್ವರ ಇವರು
ಬಬಲಾದ ಗ್ರಾಮದ ಸದಾಶಿವ ಮಠಕ್ಕೆ ಭೇಟಿ ನೀಡಿ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿರುತ್ತಾರೆ.
ಬಬಲೇಶ್ವರ ತಾಲೂಕಿನ ಬಬಲಾದ ಗ್ರಾಮದಲ್ಲಿರುವ ಸದಾಶಿವ ಮುತ್ಯಾನ ಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಸರಕಾರವು ಲಾಕ್‍ಡೌನ್ ವಿಧಿಸಿದ ದಿನದಿಂದಲೇ ಮಠದ ದ್ವಾರದ ಬಾಗಿಲಿಗೆ ಬೀಗ ಹಾಕಲಾಗಿದ್ದು, ಆದರೆ ದಿನಾಂಕ:07-06-2921 ರಂದು ಸಾಯಂಕಾಲ ಸುಮಾರು 7-00 ಗಂಟೆಗೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭಕ್ತಾಧಿಗಳು ಮಠದ ಹೊರಗಿನ ಆವರಣಕ್ಕೆ ಬಿದರಿ ಮತ್ತು ಬಬಲಾದ ಗ್ರಾಮಗಳ ನಡುವೆ ಇರುವ ಹಳ್ಳದ ಮೂಲಕ ಆಗಮಿಸಿ ಕೈ ಮುಗಿದು ಹೋಗುತ್ತಿರುವುದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಈ ಕುರಿತು ಈ ಮಠದ ಗುರುಗಳು ಲಾಕ್‍ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಭಕ್ತಾಧಿಗಳು ಯಾರು ಮಠಕ್ಕೆ ಆಗಮಿಸದೇ ತಮ್ಮ ತಮ್ಮ
ಮನೆಯಲ್ಲಿಯೇ ಇದ್ದು ಪೂಜೆ ಮಾಡಲು ಸಾಕಷ್ಟು ಸಲ ವಿನಂತಿಸಿದರೂ ಕೂಡ, ಮಠದ ಗುರುಗಳ ವಿನಂತಿಯನ್ನು ಲೆಕ್ಕಿಸದೇ ಭಕ್ತಾಧಿಗಳು ಮಠದ ಹೊರಗಿನ ಆವರಣಕ್ಕೆ ಆಗಮಿಸುತ್ತಿರುವ ಬಗ್ಗೆ ಗ್ರಾಮಸ್ಥರ ಹೇಳಿಕೆಯಿಂದ ತಿಳಿದು ಬರುತ್ತದೆ ಹಾಗೂ ಇಂದು ಸಹ ಹಲವು ಭಕ್ತಾಧಿಗಳು ಮಠದ ಹೊರಗಿನ ಆವರಣಕ್ಕೆ ಆಗಮಿಸುತ್ತಿರುವುದು ಕಂಡು ಬಂದ ಪ್ರಯುಕ್ತ ಕೊವಿಡ್-19ರ ನಿಯಂತ್ರಣ ಸಲುವಾಗಿ ಸರಕಾರವು ವಿಧಿಸಿದ ಲಾಕ್‍ಡೌನ್ ಜಾರಿಯಲ್ಲಿದ್ದ ಆದೇಶವನ್ನು ಉಲ್ಲಂಘನೆಯಾಗದಂತೆ ಮಠಕ್ಕೆ ಬರುವ
ಭಕ್ತಾಧಿಗಳನ್ನು ತಡೆದು ಅವರಿಗೆ ಲಾಕ್ಡ್‍ನ ಆದೇಶ ಮತ್ತು ಸರಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಕುರಿತು ತಿಳಿಹೇಳಿ ಮರಳಿ ಅವರವರ ಗ್ರಾಮಗಳಿಗೆ ಕಳುಹಿಸುವ ಕುರಿತು ಸಂಬಂಧಿಸಿದ ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಮಠಕ್ಕೆ ಭಕ್ತಾಧಿಗಳು ಬಾರದಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ ನೇಮಿಸಲು ಆರಕ್ಷಕ ನಿರೀಕ್ಷಕರು ಬಬಲೇಶ್ವರ ಪೆÇಲೀಸ್ ಠಾಣೆ ಇವರಿಗೆ ತಿಳಿಸಲಾಗಿದೆ. ಒಟ್ಟಾರೆಯಾಗಿ ಕೋವಿಡ್-19 ಲೆ ನಿಯಂತ್ರಣ ಸಲುವಾಗಿ ಸರ್ಕಾರವು ವಿಧಿಸಿದ ಲಾಕ್ಡೌನ್ ಜಾರಿಯಲ್ಲಿದ್ದ ಆದೇಶವನ್ನು ಸಾರ್ವಜನಿಕರು ಹಾಗೂ ಭಕ್ತಾದಿಗಳು ಪಾಲಿಸಲು ಮತ್ತು ಕೋವಿಡ -19 ರ ನಿಯಂತ್ರಿಸುವಲ್ಲ ಸಹಕರಿಸಬೇಕೆಂದು ಕೋರಿದೆ.
ವಿಜಯಪುರ ಜಿಲ್ಲಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಇಳಿಮುಖವಾಗುತ್ತಿದ್ದು, ಇಂದು 151 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನು ತಾಲೂಕಾವಾರು ವಿವಿರ ಹೀಗಿದೆ.
ವಿಜಯಪುರ ಗ್ರಾಮೀಣ 13 ವಿಜಯಪುರ ನಗರ 22 ಬಬಲೇಶ್ವರ 12 ತಿಕೋಟಾ 7 ಬಸವನಬಾಗೇವಾಡಿ 17 ನಿಡಗುಂಡಿ 9 ಇಂಡಿ 3 ಮುದ್ದೇಬಿಹಾಳ 31 ತಾಳಿಕೋಟೆ 10 ಸಿಂದಗಿ 16 ದೇವರಹಿಪ್ಪರಗಿ 8 ಬೇರೆ ಜಿಲ್ಲೆಯ 3 ಸೇರಿದಂತೆ 151 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ಲಭ್ಯವಾಗಿದೆ. ಇದೀಗ ಜಿಲ್ಲಾದ್ಯಂತ 34, 686ಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ದಿನದಿಂದ ದಿನಕ್ಕೆ ಕೊರೋನಾ ಭಾರೀ ಇಳಿಕೆ ಆಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಗಳು 50ಕ್ಕಿಂತ ಕಡಿಮೆ ಪ್ರಕರಣಗಳು ದೃಢವಾಗುತ್ತಿವೆ. ಇಂದು ವಿಜಯಪುರ ನಗರದಲ್ಲಿ 22 ಹಾಗೂ ವಿಜಯಪುರ ಗ್ರಾಮೀಣ ಭಾಗದಲ್ಲಿ 13 ಕೊರೋನಾ ವೈರಸ್ ಪತ್ತೆಯಾಗಿವೆ ಎಂದು ವಿಜಯಪುರ ಜಿಲ್ಲಾಡಳಿತದ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ಲಭ್ಯವಾಗಿದೆ. ಇನ್ನು ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲೇ 45ಕೇಸ್ ದೃಢವಾಗಿವೆ. ಅದಕ್ಕಾಗಿ ಜನತೆ ಸಾಮಾಜಿಕ ಅಂತರ್ ಹಾಗೂ ಮಾಸ್ಕ್ ಬಳಿಸಿ ಕೊರೋನಾ ತಡೆಗಟ್ಟುವ ಕೈಜೋಡಿಸಬೇಕಿದೆ.