ಲಾಕ್ಡೌನ್‍ದಿಂದಾಗಿ ಎಲ್ಲಾ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಒಳಗಾಗಿರುವುದು ಸತ್ಯಸಂಗತಿಃ ಭಾರತಿ ಟಂಕಸಾಲಿ

ವಿಜಯಪುರ, ಜೂ.8-ದೇಶದಲ್ಲೆಡೆ ಕರೋನಾ ಎರಡನೇ ಅಲೆಯ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹಾಗೂ ಲಾಕ್ಡೌನ್‍ದಿಂದಾಗಿ ಎಲ್ಲಾ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಒಳಗಾಗಿರುವುದು ಸತ್ಯಸಂಗತಿ.
ಕಳೆದ ಕೆಲವು ದಿನಗಳಿಂದ ಕರೋನ ಬಗ್ಗೆ ಜಾಗೃತಿ ಮೂಡಿಸುವ ಅದಲ್ಲದೆ, ಬಡವರಿಗೆ, ಪೌರಕಾರ್ಮಿಕರಿಗೆ, ಅಂಗವಿಕಲರಿಗೆ ಈ ಎಲ್ಲ ವರ್ಗಗಳಿಗೆ ಸಹಾಯ ಮಾಡುವುದು ಮಾನವೀಯ ಕಾರ್ಯವಾವೆಂದು ಬಹಳಷ್ಟು ಕುಟುಂಬಗಳಿಗೆ ಈಗಾಗಲೇ ಸಹಾಯ ಮಾಡಿದ್ದಾರೆ.
ಅದರಂತೆ ನಿನ್ನೆ ಮಾಧ್ಯಮಗಳಲ್ಲಿ ಕೆಲಸ ಮಾಡುವ ಸಹಾಯಕರಿಗೆ ಸರ್ಕಾರದಿಂದ ಯಾವುದೇ ಸವಲತ್ತು ಇಲ್ಲದಂತಾಗಿ ಸಂಕಷ್ಟಕ್ಕೆ ಒಳಗಾಗಿದ್ದನ್ನು ಮನಗಂಡು, ತಮ್ಮ ಸ್ವಗೃಹದಲ್ಲಿ ಆಹಾರದ ಕಿಟ್ ವಿತರಿಸಿದರು.
ಹಾಗೂ ಸಾರ್ವಜನಿಕರಿಗೆ ಕರೊನದ ಬಗ್ಗೆ ಜಾಗೃತಿ ಮೂಡಿಸಿ, ವಿಜಯಪುರದ ವಿಶ್ವಕರ್ಮ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷ ಭಾರತಿ ಟಂಕಸಾಲಿ ಮಾತನಾಡಿ ಈ ಮಹಾಮಾರಿ ತೊಲಗಿ, ಜನಜೀವನ ಸಾಮಾನ್ಯ ಸ್ಥಿತಿಗೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.