ಲಾಕಪ್ ಡೆತ್: ನ್ಯಾಯಬದ್ಧ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ


ದಾವಣಗೆರೆ,07: ಪೊಲೀಸರ ಕಷ್ಟಡಿಯಲ್ಲಿದ್ದ ವ್ಯಕ್ತಿಯ ಸಾವಿನ ಹಿಂದೆ ಹಲವು ಅನುಮಾನಗಳಿದ್ದು, ಈ ಪ್ರಕರಣದ ನ್ಯಾಯಬದ್ಧ ತನಿಖೆ ನಡೆಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಪೀಪಲ್ಸ್ ಲಾರ‍್ಸ್ ಗೀಲ್ಡ್ ವತಿಯಿಂದ ನಗರದ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಗೀಲ್ಡ್ ಜಿಲ್ಲಾಧ್ಯಕ್ಷ ಅನೀಸ್ ಪಾಷ, ಚಿತ್ರದುರ್ಗ ಜಿಲ್ಲೆ ಬಹದ್ದೂರ್ ಘಟ್ಟ ಗ್ರಾಮದ ಕುಮಾರ್ ಎಂಬ ಯುವಕನನ್ನು ವಿಚಾರಣೆಗೆಂದು ದಾವಣಗೆರೆಯ ಸಿಇಎನ್ ವಶಕ್ಕೆ ಪಡೆದು, ಶ್ರೀ ಲಾಡ್ಜ್ನಲ್ಲಿ ವಿಚಾರಣೆ ಸಂದರ್ಭದಲ್ಲಿ ಮೃತ ಹೊಂದಿದ್ದು, ಮೃತನ ಮೈಮೇಲೆ ಗಾಯಗಳು ಕಂಡು ಬಂದಿವೆ ಎಂದು ತಿಳಿದು ಬಂದಿದ್ದು, ಆತನ ಸಾವಿಗೆ ಪೊಲೀಸರ ದೌರ್ಜನ್ಯ
ಮತ್ತು ಚಿತ್ರಹಿಂಸೆಯೇ ಕಾರಣವಾಗಿದೆ ಎಂದು ಆರೋಪಿಸಿದರು.ಬಂಧಿತ ವ್ಯಕ್ತಿಯನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡುವ ಬದಲಿಗೆ ಲಾಡ್ಜ್ನಲ್ಲಿ ಕರೆದೊಯ್ದು ವಿಚಾರಣೆ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಪೊಲೀಸ್ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಬಂಧಿತರಿಗೆ ಹಿಂಸೆ ನೀಡಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಶಿಕ್ಷೆ ನೀಡಲು ನ್ಯಾಯಾಲಯಗಳಿವೆ. ಮೊನ್ನೆ ಕಷ್ಟೋಡಿಯಲ್ ಡೆತ್ ನಡೆದಿರುವುದುಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದರು.ಇತ್ತೀಚೆಗೆ ಪೊಲೀಸರ ದೌರ್ಜನ್ಯ ಮಿತಿ ಮೀರಿದೆ. ಆಗಾಗ ವಿಚಾರಣೆಯ ನೆಪದಲ್ಲಿ ಹಲವರಿಗೆ ಚಿತ್ರಹಿಂಸೆ ನೀಡಿರುವುದು ಸಾಬಿತಾಗಿದೆ. ಸರ್ಕಾರ ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸ್ವತಃ ಗೃಹ ಸಚಿವರೇ ಪೊಲೀಸರ ಅಕ್ರಮ ಮತ್ತು ಭ್ರಷ್ಟಾಚಾರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು, ಬಂಧಿತ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವುದರ ಬದಲು ಲಾಡ್ಜ್ನಲ್ಲಿ ವಿಚಾರಣೆ ನಡೆಸಿರುವುದು ನೋಡಿದರೆ, ಈ ಪ್ರಕರಣದಲ್ಲೂ ಪೊಲೀಸರು ಬಂಧಿತನಿಂದ ಹಣ ಪಡೆಯಲು ಮುಂದಾಗಿದ್ದರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಪ್ರಕರಣದ ನ್ಯಾಯಬದ್ಧ ತನಿಖೆ ನಡೆಸುವ ಮೂಲಕ ಸತ್ಯಾಂಶವನ್ನು ಹೊರ ತರಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗೀಲ್ಡ್ ಕೆ.ಕೆ.ರಂಗನಾಥ್, ನಜೀರ್ ಅಹ್ಮದ್, ಎ.ಎಸ್.ಖಾದ್ರಿ, ಸಿರಾಜುದ್ದೀನ್, ರೇವಣಸಿದ್ದಪ್ಪ, ಖಲೀಲ್, ವಿನಾಯಕ ಎಚ್, ಎನ್.ಗುರುಬಸವರಾಜ್ ಇದ್ದರು.