ಲಸಿಕೆ ಹಾಕಿಸಿಕೊಂಡು ಮತ್ತೊಬ್ಬರಿಗೆ ಮಾದರಿಯಾದ 95ರ ವೃದ್ದೆ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 30 :- ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಕೆಲ ಹಳ್ಳಿಗಳಲ್ಲಿ ಇನ್ನು ಜನರಿಗೆ ಭಯ, ಹಿಂಜರಿಕೆ ಮಾಡುತ್ತಿರುವ  ಈ ದಿನಗಳಲ್ಲಿ ತಾನೇ  ಬಂದು ನನಗೆ ಕೋವಿಡ್ ಲಸಿಕೆ ಹಾಕಿ ಎಂದು ಹಾಕಿಸಿಕೊಳ್ಳುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ ತಾಲೂಕಿನ 95ರ ವೃದ್ದೆ ತಮ್ಮಯ್ಯನಗುಡ್ಡದ ಪಾಲಮ್ಮ.                                                                                                                        ಹೌದು ಈ ಘಟನೆ ನಡೆದದ್ದು  ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಆರೋಗ್ಯ ಉಪಕೇಂದ್ರ  ವ್ಯಾಪ್ತಿಯಲ್ಲಿ ಬರುವ ತಮ್ಮಯ್ಯನಗುಡ್ಡದಲ್ಲಿ  95ರ ಇಳಿವಯಸ್ಸಿನ ಪಾಲಮ್ಮ ತನ್ನ ಆರೋಗ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಸ್ವಯಂ ಪ್ರೇರಿತಳಾಗಿ  ಕೋವಿಡ್ ಲಸಿಕೆ ಹಾಕಿಸಿಕೊಂಡ  ಮಾದರಿ ಅಜ್ಜಿಯಾಗಿದ್ದಾಳೆ. ಅನೇಕ ಹಳ್ಳಿಗಳಲ್ಲಿ ಕೋವಿಡ್ ಲಸಿಕೆ ಬಗ್ಗೆ ಯುವಕರಿಗೂ  ಆರೋಗ್ಯದ ಅರಿವಿನ ಕೊರತೆಯಿಂದ ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತಂತೆ ಕೈ ಕಾಲುಗಳು ತುಂಬಾ ನೋವಾಗಿ ಸುಸ್ತಾಗಿ ಮಲಗಿಕೊಳ್ಳುತ್ತಾರಂತೆ ಎಂಬಿತ್ಯಾದಿ ಇಲ್ಲಸಲ್ಲದ ಬೇಕಾಬಿಟ್ಟಿ ಚಿಂತನೆಯಲ್ಲಿ ಸರ್ಕಾರದ ಮತ್ತು ವೈದ್ಯರ ಆರೋಗ್ಯದ ಮಾಹಿತಿ ಕೋವಿಡ್ ಲಸಿಕೆಯಿಂದಾಗುವ ಪರಿಣಾಮ ಕುರಿತು ಹೇಳಿದ್ದಾಗ್ಯೂ ಅದರ ಬಗ್ಗೆ ತಿಳಿದುಕೊಳ್ಳದೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತಿದ್ದವರಿಗೆ ತಾನೇ ಬಂದು ಲಸಿಕೆ ಹಾಕಿಸಿಕೊಂಡ ತಮ್ಮಯ್ಯನಗುಡ್ಡದ ಪಾಲಮ್ಮ ಮಾದರಿ ಎಂದೇ  ಹೇಳಬಹುದು. ಸರ್ಕಾರವು ಪ್ರತಿ ಮನೆಮನೆಗೂ, ಹೊಲದಲ್ಲಿರುವ ರೈತರಿಗೂ ಶಾಲಾ, ದೇವಸ್ಥಾನ ಆವರಣಕ್ಕೆ ಬಂದು ಲಸಿಕೆ ಹಾಕಿಸಿಕೊಳ್ಳುವವರಿಗೆ ಲಸಿಕೆ ನೀಡುವಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮೂಲಕ ಕೊರೋನಾ ಮುಕ್ತಗೊಳಿಸಲು ಪಣ ತೊಡುವ ಮೂಲಕ ಬರುವ ಮೂರನೇ ಅಲೆ ಯಾರ ಬಳಿಯೂ ಸುಳಿಯದಂತೆ ಪ್ರತಿಯೊಬ್ಬರಿಗೆ ಕೋವಿಡ್ ಲಸಿಕೆ ಮುಟ್ಟುವಂತೆ ನಿಗಧಿತ ಗುರಿ ನೀಡುವ ಮೂಲಕ  ಆರೋಗ್ಯ ಇಲಾಖೆಗೆ  ಹೆಚ್ಚು ಒತ್ತು ನೀಡಿ ಕೋವಿಡ್ ಲಸಿಕೆ ಪ್ರತಿಯೊಬ್ಬರನ್ನು ಬಿಡದಂತೆ ಲಸಿಕೆ ನೀಡುವಲ್ಲಿ ಸರ್ಕಾರ ಮುಂದಾಗಿದೆ ಈ ಕೋವಿಡ್ ಲಸಿಕೆ ಪಡೆಯುವ ಮೂಲಕ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲವೆಂದು ತಿಳಿದು ಕೋವಿಡ್ ಲಸಿಕೆ ಹಾಕಿಸಿಕೊಂಡು ದೇಶವು ಕೊರೋನಾ ಮುಕ್ತ ದೇಶವನ್ನಾಗಿಸಬೇಕಿದೆ.