ಲಸಿಕೆ ಹಾಕಿಸದಿದ್ದರೆ ಅಪಾಯ ಸಾಧ್ಯ; ಶಾಸಕ ಲಿಂಗಣ್ಣ

ದಾವಣಗೆರೆ.ಏ.೨೯; ಎರಡನೇ ಅಲೆಯ ಕೊರೊನಾ ವೈರಸ್ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು.ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರೂಪಾಂತರಿ ವೈರಸ್ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ನನ್ನ ಕ್ಷೇತ್ರದಲ್ಲಿ ಕೊವಿಡ್ ನಿಂದಾಗಿ ಇಬ್ಬರು ಮರಣಿಸಿದ್ದಾರೆ.ಈಗಾಗಲೇ ಮೊದಲ ಅಲೆ ಸಾಕಷ್ಟು ಅನಾಹುತವುಂಟುಮಾಡಿದೆ.ಹಾಗಾಗಿ ಜನರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು.ಮೊದಲ ಹಂತದ ಲಸಿಕೆ ಪಡೆದವರು ಎರಡನೇ ಡೋಸ್ ಪಡೆಯಬೇಕು. ಲಸಿಕೆ ಪಡೆಯದಿದ್ದರೆ ಅಪಾಯವಿದೆ.ಜೀವವಿದ್ದರೆ ಜೀವನ ಆದ್ದರಿಂದ ಲಸಿಕೆ ಹಾಕಿಸಿಕೊಳ್ಳಿ ಎಂದು ಸಲಹೆ ನೀಡಿದರು.ಕ್ಷೇತ್ರದಲ್ಲಿ ಮಾತ್ರವಲ್ಲದೆ ಜಿಲ್ಲೆಯಲ್ಲಿ ಎಲ್ಲೇ ಸಮಸ್ಯೆ ಕಂಡುಬಂದರೂ ಗಮನಕ್ಕೆ ತಂದರೆ ಪರಿಹರಿಸಲಾಗುವುದು.ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ದೇವೇಂದ್ರಪ್ಪ ಶ್ಯಾಗಲೆ,ಅಶೋಕ್ ಗೋಪನಾಳ್,ಕೃಷ್ಣಕುಮಾರ್ ಇದ್ದರು.