ಲಸಿಕೆ ಲಭ್ಯದ ನಂತರ ಸೋಂಕು ತಡೆಗೆ ಸಮಯ ಅಗತ್ಯ

ನವದೆಹಲಿ, ನ.೧೫- ವಿಶ್ವವನ್ನು ಕಾಡುತ್ತಿರುವ ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾದ ನಂತರವೂ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ೨೦೨೪ರ ಸಮಯಾವಕಾಶ ಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಶ್ರೀಮಂತ ದೇಶಗಳು ಲಸಿಕೆಯನ್ನು ಸಂಗ್ರಹಿಸಿಟ್ಟು ಕೊಂಡರೂ ಸೋಂಕಿನ ವಿರುದ್ಧ ಹೋರಾಟ ೨೦೨೪ರ ತನಕ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಅಮೆರಿಕದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಫಿಫಿಜರ್ ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಬಹುತೇಕ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ವರ್ಷದ ಆರಂಭದಲ್ಲಿ ಲಸಿಕೆ ಸಿಗುವ ಸಾಧ್ಯತೆಗಳಿವೆ.

ಇದಲ್ಲದೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮತ್ತು ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಅಂತಿಮ ಹಂತದಲ್ಲಿವೆ.

ಮುಂದಿನ ವರ್ಷದ ಆರಂಭದಲ್ಲಿ ಲಸಿಕೆಗಳು ಒಂದರ ಹಿಂದೆ ಒಂದರಂತೆ ಲಭ್ಯವಾಗಲಿದ್ದು ಆನಂತರ ಲಸಿಕೆಯನ್ನು ಶೇಖರಣೆ ಮಾಡಿಕೊಂಡ ನಂತರ ದೇಶಗಳು ಕೊರೊನಾ ಸೋಂಕು ನಿಗ್ರಹಕ್ಕೆ ನಾಲ್ಕು ವರ್ಷಗಳ ಕಾಲ ಬೇಕಾಗಬಹುದು ಎಂದು ಹೇಳಲಾಗಿದೆ.

ಲಸಿಕೆ ಸಿದ್ಧವಾದ ನಂತರ ಅದನ್ನ ಅಭಿವೃದ್ಧಿಪಡಿಸಿ ಕೋಟ್ಯಾಂತರ ಲಸಿಕೆಯನ್ನು ಶೇಖರಣೆ ಮಾಡುವ ಅಗತ್ಯವಿರುವುದರಿಂದ ಸಂಪೂರ್ಣ ನಿಗ್ರಹಕ್ಕೆ ನಾಲ್ಕು ವರ್ಷಗಳ ಅಗತ್ಯವಿದೆ ಎನ್ನುವುದನ್ನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ

ಅಮೆರಿಕದಲ್ಲಿ ತನ್ನ ದೇಶದ ಎಲ್ಲ ಜನರಿಗೆ ಲಸಿಕೆಯನ್ನು ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ಕೆನಡಾದಲ್ಲಿ ಅಲ್ಲಿನ ಜನರಿಗೆ ಒಂಬತ್ತು ಬಾರಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಒಂದು ಲಸಿಕೆಯನ್ನು ಒಬ್ಬರಿಗೆ ಮಾತ್ರ ಕೊಡಲು ಸಾಧ್ಯವಾಗಲಿದೆ. ಹೀಗಾಗಿ ಎಲ್ಲರಿಗೂ ಲಸಿಕೆ ಸಿಗಬೇಕಾದರೆ ನಾಲ್ಕು ವರ್ಷಗಳ ಕಾಲ ಕಾಯುವ ಅಗತ್ಯವಿದೆ ಎನ್ನಲಾಗಿದೆ.

ಶ್ರೀಮಂತ ದೇಶಗಳ ಪರಿಸ್ಥಿತಿ ಇದಾದರೆ ಇನ್ನೂ ಬಡ ಮತ್ತು ಮಧ್ಯಮ ಆದಾಯವಿರುವ ಪ್ರದೇಶಗಳ ಸ್ಥಿತಿ ಇನ್ನೂ ಹೇಳತೀರದಾಗಿದೆ ದೇಶದ ಜನರಿಗೆ ಲಸಿಕೆ ನೀಡಲು ನಾಲ್ಕು ವರ್ಷಗಳ ಕಾಲ ಬೇಕಾಗಬಹುದು ಎಂದು ಹೇಳಲಾಗಿದೆ.

ಲಸಿಕೆ ಸಿದ್ಧವಾಗುತ್ತಿರುವ ನಡುವೆಯೇ ವಿಶ್ವದ ಅನೇಕ ದೇಶಗಳು ಈಗಾಗಲೇ ಮುಂಗಡ ಹಣವನ್ನು ನೀಡಿ ತಮ್ಮ ದೇಶಕ್ಕೆ ಇಂತಿಷ್ಟು ಲಸಿಕೆ ಬೇಕು ಎಂದು ಖರೀದಿ ಇನ್ನು ಕೆಲವು ದೇಶಗಳು ಖರೀದಿ ಪ್ರಕ್ರಿಯೆಯಲ್ಲಿ ನಿರತವಾಗಿವೆ