ಲಸಿಕೆ ಬಳಕೆಗೆ ಅನುಮೋದನೆ; pfizer, ಬಯೋಎನ್ ಟೆಕ್ ಮನವಿ

ವಾಷಿಂಗ್ಟನ್. ನವೆಂಬರ್ ೨೦. Pಜಿizeಡಿ ಮತ್ತು ಬಯೋ ಎನ್ ಟೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಡ್ ೧೯ ಲಸಿಕೆಗಳನ್ನು ತುರ್ತು ಬಳಕೆ ಮಾಡಿಕೊಳ್ಳಲು ಅನುಮೋದನೆ ನೀಡುವಂತೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಮೆರಿಕ ಸರ್ಕಾರ ಮತ್ತು ಬಯೋ ಎನ್ ಟೆಕ್ ಸಹ ಸಂಸ್ಥಾಪಕರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗ ದಂತಹ ತುರ್ತು ಪರಿಸ್ಥಿತಿಯಲ್ಲಿ ಲಸಿಕೆಗಳ ಬಳಕೆಗೆ ಶರತ್ತು ಬದ್ಧ ಅಥವಾ ಷರತ್ತುಗಳು ಅನ್ವಯ ಅನುಮತಿ ನೀಡಬೇಕೆಂದು ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ದಾಖಲಾತಿಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಅನುಮತಿ ನೀಡಲು ಪ್ರಾಧಿಕಾರ ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲವೆಂದು ಹೇಳಲಾಗಿದೆ.

ಬಯೋ ಎನ್ ಟೆಕ್ ಹಾಗೂ ಠಿಜಿizeಡಿ ಅಲ್ಲದೆ ಅಮೆರಿಕದ ಮತ್ತೊಂದು ಕಂಪನಿ ಅಭಿವೃದ್ಧಿಪಡಿಸಿರುವ moಜeಡಿಟಿಚಿ ಲಸಿಕೆಗಳನ್ನು ಕೋವಿಡ್ ನಿಯಂತ್ರಣ ಮಾಡಲಿಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಮೂರು ಸಂಸ್ಥೆಗಳು ಪೈಪೋಟಿ ಮೇಲೆ ಲಸಿಕೆ ಅಭಿವೃದ್ಧಿ ಪಡಿಸಿ ಅದರ ಸಾಧಕ ಬಾಧಕಗಳ ಬಗ್ಗೆ ಈಗಾಗಲೇ ಪ್ರಯೋಗಗಳನ್ನು ನಡೆಸಿ ವೆ.

ಕಳೆದ ವರ್ಷ ಚೀನಾದಲ್ಲಿ ಮೊದಲ ಸೋಂಕು ಪ್ರಕರಣದ ನಂತರ ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸೋಂಕು ಕೋಟ್ಯಂತರ ಜನರ ಮೇಲೆ ದುಷ್ಪರಿಣಾಮ ಬೀರಿದೆ. ಮೋಡರ್ನ್ ಆ ಸಂಸ್ಥೆ ಶೀಘ್ರವೇ ಸರ್ಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆಯೆದು ಹೇಳಲಾಗಿದೆ.