ಲಸಿಕೆ ಬಗ್ಗೆ ಅಲ್ಪಸಂಖ್ಯಾತರಲ್ಲಿ ಭಯ ಬೇಡಃ ಮಹ್ಮದ್‍ರಫೀಕ

ವಿಜಯಪುರ, ಮೇ.01-ಸರ್ವಧರ್ಮ ಭಾವೈಕ್ಯತಾ ಮಂಚದ ಹಾಗೂ ಆಮಜಮಾತ ಮುಸ್ಲಿಂ ಕಬರಸ್ತಾನ ಕಮಿಟಿ ವತಿಯಿಂದ ಕಮಿಟಿಯ ಕಾರ್ಯಾಲಯದಲ್ಲಿ ಕೋವಿಡ್ 19 ಲಸಿಕೆಯನ್ನು ನೀಡುವ ಕಾರ್ಯ ಪ್ರಾರಂಭಿಸಲಾಯಿತು.
ನಗರದ ದರ್ಗಾ ಕ್ರಾಸ್ ಸೋಲಾಪುರ ನಾಕಾದಲ್ಲಿ ಮುಳ್ಳಗಸಿ ಓಣಿ ಗ್ಯಾಂಗಬಾವಡಿ ಪ್ರದೇಶದ ಬಹುತೇಕ ಅಲ್ಪಸಂಖ್ಯಾತ ಸಮುದಾಯವಿದ್ದು ಅವರಲ್ಲಿ ಲಸಿಕೆ ಬಗ್ಗೆ ಭಯ ಹಾಗೂ ಮೂಡನಂಬಿಕೆಯಿಂದ ಲಸಿಕೆ ಪಡೆಯಲು ಹಿಂಜರುಗಿರುವುದರಿಂದ ಸಮಾಜದ ಮುಖಂಡರಾದ ಮಹ್ಮದರಫೀಕ ಟಪಾಲ ಇಂಜಿನಿಯರ್ ಇವರು ಸಮುದಾಯದವರೊಂದಿಗೆ ಚರ್ಚಿಸಿ ಇದರ ಬಗ್ಗೆ ಭಯಪಡಬಾರದು ಲಸಿಕೆ ಪಡೆದರೆ ಕೊರೊನಾ ಸೊಂಕು ಬುರುವುದಿಲ್ಲ ಎಂಬ ಬಗ್ಗೆ ಜಾಗೃತಿ ಮೂಡಿಸಿದರು. ಇದರ ಪ್ರಯುಕ್ತ ಹೆಚ್ಚಿನ ಜನ ಲಸಿಕೆ ಪಡೆಯಲು ಅನುವು ಮಾಡಿಸಿ ಆರೋಗ್ಯ ಇಲಾಖೆಯ ಮೂಲಕ ಲಸಿಕೆ ಅಭಿಯಾನ ಪ್ರಾರಂಭಿಸಿ ಲಸಿಕೆ ಬಗ್ಗೆ ಭಯ ಬೇಡ ಎಂದು ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ರಫೀಕ ಟಪಾಲ ಇಂಜಿನಿಯರ ತಿಳಿಸಿದರು.
ಈಗಾಗಲೇ ನಗರದ ಅಲ್ಪಸಂಖ್ಯಾತರಲ್ಲಿ ಬಹುತೇಕ ಗಣ್ಯ ವ್ಯಕ್ತಿಗಳು ಲಸಿಕೆ ಪಡೆದಿದ್ದಾರೆ. ಕಾರಣ ಅಲ್ಪಸಂಖ್ಯಾತರು ಭಯಪಡದೆ ಲಸಿಕೆ ಪಡೆದು ಕೊರೊನಾ ಸೊಂಕಿನಿಂದ ದೂರವಿರಲು ರಫೀಕ ಟಪಾಲ ಇಂಜಿನಿಯರ ಕರೆ ನೀಡಿದರು.
ವಿಶೇಷವಾಗಿ ಧಾರ್ಮಿಕ ಮುಖಂಡರಾದ ಮೌಲಾನಾ ತನ್ವೀರ ಹಾಸ್ಮಿ ಹಾಸಿಂಪೀರ ಹಾಗೂ ಡಾ.ಮಹಾಲದಾರ, ಡಾ ಹಬಿಬುಲ್ಲಾ ಅತ್ತಾರ, ಡಾ.ಸಲಿಂ ಗುಂದಸಿ, ಡಾ ಜಾವೀದ ಮುಧೋಳ, ಮುಖಂಡರಾದ ಹಮೀದ ಮುಶ್ರೀಫ್, ಮಾಜಿ ಮೇಯರ್ ಸಜ್ಜಾದೆ ಮುಶ್ರೀಫ್ ಇವರೆಲ್ಲರು ಈಗಾಗಲೇ ಲಸಿಕೆಯನ್ನು ಪಡೆದಿರುತ್ತಾರೆ ಎಂದು ಉಲ್ಲೇಖಿಸಿದರು. ಲಸಿಕಾ ಅಭಿಯಾನದಲ್ಲಿ ಚೇರ್‍ಮನ್‍ರಾದ ಸುಲೆಮಾನ ಮುಜಾವರ, ಆರ್.ಕೆ. ಸುರಪುರ, ಡಾಜಿ.ಡಿ. ಕೊಟ್ನಾಳ, ಕೆ.ವಿ.ಜಿ. ಬ್ಯಾಂಕಿನ ಮ್ಯಾನೇಜರ್ ಶಿವಾಜಿ ಇನಾಮದಾರ, ವಡಿಗೇರಿಯವರು, ಎ.ಬಿ. ಮುಲ್ಲಾ, ಶ್ರೀಮತಿ ಎಸ್.ಎಮ್. ಕಲಾದಗಿ ಮಾಜಿ ನಗರಸಭೆ ಉಪಾಧ್ಯಕ್ಷ, ಆಯ್.ಜಿ. ಕೊಟ್ನಾಳ, ಇಕ್ಬಾಲ್‍ಅಹ್ಮದ್ ಟಪಾಲ ನಿವೃತ್ತ ಸೈನಿಕ, ಯಲ್ಲಾಲಿಂಗ ಹೂಗಾರ ಇವತ್ತಿನ ಸಭೆಯಲ್ಲಿ ಲಸಿಕೆ ಪಡೆದರು.
ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಜಯಶ್ರೀ ಕಬಾಡೆ, ಮಲ್ಲನಗೌಡ ಬಿರಾದಾರ, ವಾಣಿಶ್ರೀ ಸಾವಳಗಿ ಮತ್ತು ಆಶಾ ಕಾರ್ಯಕರ್ತಿಯರಾದ ನೀಲಮ್ಮ ಗೌಳಿ, ಕಮಲಾ ನಾಯಕ ಲಸಿಕೆ ನೀಡಿದರು. ಸುಮಾರು ನೂರಕ್ಕು ಹೆಚ್ಚು ಜನರು ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆದರು.