ಲಸಿಕೆ ಬಗ್ಗೆ ಅನುಮಾನ: ಕಾಂಗ್ರೆಸ್‌ಗೆ ನಡ್ಡಾ ತಿರುಗೇಟು

ನವದೆಹಲಿ, ಜ.3-ದೇಶದಲ್ಲಿ ಕೊರೋನೊ ಸೋಂಕಿಗೆ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿರುವುದನ್ನು ಸ್ವಾಗತಿಸಿಸುವುದನ್ನು ಬಿಟ್ಟು ಲಸಿಕೆ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿರುವುದು ಖಂಡನಾರ್ಹ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಇತರೆ ವಿರೋದ ಪಕ್ಷಗಳು ವಿನಾಕಾರಣ ರಾಜಕಾರಣಕ್ಕೆ ವಿರೋದ ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ಹೇಳಿದ್ದಾರೆ.
ಈ ಸಂಬಂದ ಟ್ವೀಟ್ ಮಾಡಿರುವ ಅವರು
ವಿರೋದ ಪಕ್ಷಗಳು ವಿರೋದ ಮಾಡಿದಷ್ಟು ಅವರಿಗೆ ತಿರುಗುಬಾಣವಾಗಲಿದೆ. ದೇಶದ ಜನರ ಹಿತದೃಷ್ಟಿಯಿಂದ ಜಾರಿಗೆ ತಂಡ ಯೋಜನಗನ್ನು ವಿರೋದಿಸುತ್ತಿರುವರಿಗೆ ಜನರೇ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಾಗಲೂ ಕಾಂಗ್ರೆಸ್ ಸೇರಿದಂತೆ ವಿರೋದ ಪಕ್ಷಗಳು ಅಗತ್ಯವಾಗಿ ಅಪಪ್ರಚಾರ ಮತ್ತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.
ದೇಶದ ಜನರಿಗೆ ಒಳಿತಾಗುವ ಕೊರೋನೋ ಸೋಂಕಿನ ಲಸಿಕೆಗೆ ಎಲ್ಲರೂ ಸ್ವಾಗತಿಸುವಾಗ ವಿರೀದ ಪಕ್ಷಗಳು ಲಸಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ‌‌. ಇಂತಹ ನಡೆ ಖಂಡನಾರ್ಹ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ವಿನಾಕಾರಣ ಆರೋಪ ಮಾಡುವ ಕೆಲಸ ಮಾಡುತ್ತಿದೆ ಎಂದು ಬೆಳವಣಿಗೆಗೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹರಿಹಾಯ್ದಿದ್ದಾರೆ.
ಲಸಿಕೆಯ ಬಗ್ಗೆ ವಿರೋದ ಪಕ್ಷಗಳು ಅನುಮಾನ ವ್ಯಕ್ತಪಡಿಸುವ ಮುಲಕ ದೇಶದ ಜನರಲ್ಲಿ ಆತಂಕ‌, ಭಯ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ವಿರೋದ ಪಕ್ಷಗಳ ವಿರುದ್ದ ಗುಡುಗಿದ್ದಾರೆ.
ಜನರ ಜೀವ ಮತ್ತು ಜೀವನದ ಜೊತೆ ಯಾವುದೇ ಕಾರಣಕ್ಕೆ ಚೆಲ್ಲಾಟ ಆಡಬೇಡಿ ಎಂದು ವಿರೋದ ಪಕ್ಷಗಳಿಗೆ ನಡ್ಡಾ ಸಲಹೆ ನೀಡಿದ್ದಾರೆ.