ಲಸಿಕೆ ಪೂರೈಕೆ ಸಂಸದೀಯ ಸ್ಥಾಯಿ ಸಮಿತಿ ಹೆಗಲಿಗೆ

ನವದೆಹಲಿ,ನ.೨೨- ದೇಶದಲ್ಲಿ ಕೊರೋನಾ ಸೋಂಕಿಗೆ ಲಸಿಕೆ ಲಭ್ಯವಾಗುತ್ತಿದ್ದಂತೆ ಸಂಸದೀಯ ಸ್ಥಾಯಿ ಸಮಿತಿ ಪರಾಮರ್ಶೆ ನಡೆಸಲಿದೆ.
ದೇಶದ ಎಲ್ಲ ಜನರಿಗೆ ಕೊರೋನಾ ಲಸಿಕೆ ಪೂರೈಕೆ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಲಸಿಕೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ವ್ಯಾಪ್ತಿಗೆ ತರಲು ಮುಂದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಾಲಯ ಈಗಾಗಲೇ ಲಸಿಕೆ ಲಭ್ಯವಾದ ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಪಡೆ ರಚಿಸಲು ಮುಂದಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿ ಪರಾಮರ್ಶೆಗೆ ಒಳಪಡಿಸಲು ನಿರ್ಧರಿಸಲಾಗಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸ್ಥಾಯಿ ಸಮಿತಿಯ ಉತ್ಪಾದನೆ ಸಾಮರ್ಥ್ಯ ವಿಷಯಗಳ ಕುರಿತು ಸಮಾಲೋಚನೆ ನಡೆಸಲು ಮುಂದಾಗಿದೆ.
ನಾಳೆ ಈ ಕುರಿತು ಸ್ಥಾಯಿ ಸಮಿತಿ ಮೊದಲ ಸಭೆ ನಡೆಸಲಿದ್ದು ಇಲ್ಲಿಗೆ ಬಂದ ನಂತರ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತಂತೆ ಚರ್ಚೆ ನಡೆಸಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ವರದಿ ನೀಡುವ ನಿರೀಕ್ಷೆ ಇದೆ.
ಕೊರೊನಾ ಲಸಿಕೆ ವಿತರಣೆ ಮತ್ತು ಶೇಖರಣೆಯ ಜವಾಬ್ದಾರಿಯನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಜವಾಬ್ದಾರಿ ಹೊರಲು ಮುಂದಾಗಿದೆ.
ಈಗಾಗಲೇ ದೇಶದ ಹಲವು ಕಂಪನಿಗಳು ಮತ್ತು ಜಗತ್ತಿನ ಹಲವು ಔಷಧ ತಯಾರಿಕಾ ಕಂಪನಿಗಳು ತಾವು ಅಭಿವೃದ್ಧಿಪಡಿಸಿರುವ ಲಸಿಕೆ ಅಂತಿಮ ಹಂತಕ್ಕೆ ಬಂದಿರುವುದಾಗಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಈಗಿಂದೀಗಲೇ ಕ್ರಮ ಕೈಗೊಳ್ಳಲಾಗುತ್ತಿದೆ.
ಲಸಿಕೆ ಭಾರತದಲ್ಲಿ ಲಭ್ಯವಾದ ಬಳಿಕ ಅದರ ಶೇಖರಣೆ ಸಂಸ್ಕರಣೆ ವಿತರಣೆ ಸೇರಿದಂತೆ ಅನೇಕ ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದೆ