ಲಸಿಕೆ ಪಡೆಯುವುದು ಕಡ್ಡಾಯ ಕಾರ್ಯಕ್ರಮವಾಗಿ ಘೋಷಿಸಲಿ

ಮಂಗಳೂರು, ಜೂ.೪- ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯ ಕಾರ್ಯಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿಕೊಂಡು ಆರೋಗ್ಯ ಇಲಾಖೆಯ ಮೂಲಕ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಬೇಕು ಎಂದು ಎಐಸಿಸಿ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ನಗರದ ಕುದ್ರೋಳಿಯಲ್ಲಿ ಗುರುವಾರ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು. ಉಚಿತ ಲಸಿಕೆ ನೀಡಲು ಇಲಾಖೆಯ ಕ್ರಮ ತೀರ ನಿಧಾನಗತಿಯಲ್ಲಿ ಸಾಗುತ್ತಿದೆ. ಕಾರ್ಮಿಕರು, ಬೀಡಿ ಕಟ್ಟುವವರು ಮತ್ತು ಹಳ್ಳಿಗಳಲ್ಲಿ ಇನ್ನೂ ಈ ಬಗ್ಗೆ ಜಾಗೃತಿ ಮೂಡಿಲ್ಲ. ಕೊರೋನ ಹರಡುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಐವನ್ ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ಅಬೂಬಕರ್ ಕುದ್ರೋಳಿ, ವಿವೇಕ್‌ರಾಜ್ ಪೂಜಾರಿ, ಪದ್ಮನಾಭ ಪನಿಕರ್, ಎಸ್.ಕೆ.ಅಬೂಬಕರ್, ಅಬ್ದುಲ್ ರಹಿಮಾನ್, ಶಂಕರ ಸುವರ್ಣ, ಜಯರಾಜ ಕೋಟ್ಯಾನ್, ಸತೀಶ್ ಪೆಂಗಲ್, ಇಮ್ರಾನ್, ಯೂಸೂಫ್ ಉಚ್ಚಿಲ್, ಆಲಿಸ್ಟನ್ ಡಿಕುನ್ಹಾ, ಶಶಿ, ಬಾಝಿಲ್, ರಫೀಕ್, ಸಲೀಂ, ಹಸನ್ ಡೀಲ್ಸ್, ಹಬೀಬುಲ್ಲ ಕಣ್ಣೂರು ಉಪಸ್ಥಿತರಿದ್ದರು.