ಲಸಿಕೆ ಪಡೆಯಲು ಮುಗಿಬಿದ್ದ ಜನತೆಕ್ಷಣಮಾತ್ರದಲ್ಲಿ ಖಾಲಿಯಾದ ಕೊವಿಡ್ ಶೀಲ್ಡ್ ವಾಕ್ಸಿನ್

ದಾವಣಗೆರೆ. ಏ.೩೦; ನಗರದ ನಾಲ್ಕು ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಜನರು ಮುಗಿಬಿದ್ದಿದ್ದಾರೆ. ಇದರಿಂದಾಗಿ ಸಾಜಿಕ ಅಂತರ ಪಾಲನೆಯಾಗದೇ ಜನಜಂಗುಳಿ ಏರ್ಪಟ್ಟಿತ್ತು.ಅದರಲ್ಲೂ ನಗರದ ಮೋತಿವೀರಪ್ಪ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ಜನರು  ಲಸಿಕೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ದಾವಣಗೆರೆ ಜಿಲ್ಲೆಗೆ ೮ ಸಾವಿರ ಕೊವಿಡ್ ಶೀಲ್ಡ್ ಲಸಿಕೆ ಬಂದಿದೆ.ಇದರಲ್ಲಿ ಚನ್ನಗಿರಿಗೆ ೧೫೦೦,ಹೊನ್ನಾಳಿಗೆ ೧೫೦೦, ಹರಿಹರ ಹಾಗೂ ಜಗಳೂರಿಗೆ ತಲಾ ೮೦೦ ಹಾಗೂ ದಾವಣಗೆರೆಗೆ ೩ ಸಾವಿರ ಲಸಿಕೆ ನೀಡಲಾಗಿದೆ ಎಂದು ಆರ್ ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ತಿಳಿಸಿದರು.ಕೊವಿಡ್ ಲಸಿಕೆ ನೀಡಲು ನಗರದಲ್ಲಿ ನಾಲ್ಕು ಕೇಂದ್ರಗಳನ್ನು ತೆರೆಯಲಾಗಿದೆ.ವಿನೋಬನಗರದ ಪ್ರಾಥಮಿಕ ಆರೋಗ್ಯ ಕೇಂದ್ರ,ಭರತ್ ಕಾಲೋನಿಯ ಕೇಂದ್ರ, ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಲಸಿಕೆ ಹಾಕಲಾಗುತ್ತಿದೆ.ಕಳೆದೆರಡು ದಿನದ ಹಿಂದೆ ಜಿಲ್ಲೆಗೆ ೬ ಸಾವಿರ ಲಸಿಕೆ ಬಂದಿತ್ತು ಅಂದೂ ಸಹ ಮಧ್ಯಾಹ್ನದ ವೇಳೆಗೆ ಖಾಲಿಯಾಗಿತ್ತು.ನಿನ್ನೆ ಲಸಿಕೆ ಇಲ್ಲದ ಕಾರಣ ಇಂದು ಹೆಚ್ಚು ಜನ ಆಗಮಿಸಿದ್ದಾರೆ.ಆದರೆ ಇಂದೂ ಸಹ ಲಸಿಕೆ ಕ್ಷಣಮಾತ್ರದಲ್ಲಿ ಖಾಲಿಯಾಗಿದೆ.ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂದು ಬೆಳಗ್ಗೆ ೬ ಗಂಟೆಯಿಂದಲೇ ಸರತಿಯಲ್ಲಿ ನಿಂತಿದ್ದೇವೆ ಬೆಳಗ್ಗೆ ೧೦ ಗಂಟೆಯಿಂದ ಲಸಿಕೆ ನೀಡಲು ಪ್ರಾರಂಭಿಸಿದ್ದಾರೆ ಮಧ್ಯಾಹ್ನಕ್ಕೆ ಲಸಿಕೆ ಮುಗಿದಿದೆ ಎಂದು ಹೇಳುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ೪೫ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಸಾಧ್ಯವಾಗುತ್ತಿಲ್ಲ.ಇನ್ನು  ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಸವಾಲಿನ ಕೆಲಸ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಬಾಕ್ಸ್ದಾವಣಗೆರೆ ಜಿಲ್ಲೆಗೆ ೮ ಸಾವಿರ ಲಸಿಕೆ ಬಂದಿದೆ.ಎಲ್ಲಾ ತಾಲ್ಲೂಕುಗಳಿಗೂ ಹಂಚಿಕೆ ಮಾಡಲಾಗಿದೆ.ಪ್ರಸ್ತುತ ಕೋವಿಡ್ ಶೀಲ್ಡ್ ಲಸಿಕೆ ಮಾತ್ರ ಬರುತ್ತಿದೆ.ಕೊವ್ಯಾಕ್ಸಿನ್ ಲಸಿಕೆ ಬರುವುದು ಒಂದು ವಾರ ತಡವಾಗುತ್ತದೆ.- ಡಾ.ಮೀನಾಕ್ಷಿಆರ್ ಸಿಹೆಚ್ ಅಧಿಕಾರಿ