ಲಸಿಕೆ ಪಡೆಯಲು ಮನವಿ

ಕೆ.ಆರ್.ಪುರ, ಏ.೨೪- ಕೋವಿಡ್ ೧೯ ನ ಎರಡನೇ ಅಲೆಗೆ ಮತ್ತೊಮ್ಮೆ ಭಾರತ ನಲುಗುವಂತಾಗಿದ್ದು,ಲಸಿಕೆ ಪಡೆಯುವ ಮೂಲಕ ಕರೋನದಿಂದ ಸುರಕ್ಷಿತ ವಾಗಿರುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ.ವಿ.ಪ್ರಶಾಂತ್ ರೆಡ್ಡಿ ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಾಡುಗೋಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್ ಲಸಿಕೆ ಪಡೆದವರು ಕರೋನ ಸೋಂಕಿನಿಂದ ಮುಕ್ತರಾಗಿರುವುದು ಹಲವು ಸಂಶೋಧನೆಗಳಿಂದ ತಿಳಿದು ಬಂದಿದ್ದು, ಕೋವಿಡ್ ಲಸಿಕೆ ಇರುವುದರಿಂದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿ ಎಂದು ನುಡಿದರು.
ಲಸಿಕೆ ಬಗ್ಗೆ ಯಾವುದೇ ರೀತಿಯ ಅನುಮಾನವಿಲ್ಲದೆ ಲಸಿಕೆ ಪಡೆದು ಆರೋಗ್ಯ ವಾಗಿರುವಂತೆ ಸಲಹೆ ನೀಡಿದರು.