ಲಸಿಕೆ ಪಡೆಯಲು ನಟಿ ಕಂಗನಾ ಮನವಿ

ಮುಂಬೈ,ಏ.೨೯- ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ ೧ರಿಂದ ಯುವ ಸಮುದಾಯಕ್ಕೆ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದ್ದು ಹೆಚ್ಚಿನ ಜನ ನೋಂದಾಯಿಸಿಕೊಂಡು ಲಸಿಕೆ ಪಡೆಯಿರಿ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿಮಾನಿಗಳಿಗೆ ಹಾಗು ಯುವ ಜನತೆಗೆ ಮನವಿ ಮಾಡಿದ್ದಾರೆ.
ಲಸಿಕೆ ಪಡೆಯಲು ನೋಂದಣಿ ಮಾಡಿಸಿಕೊಳ್ಳಿ ಜೊತೆಗೆ ಲಸಿಕೆ ಪಡೆದು ಕೊರೊನಾ ಸೋಂಕು ಬರದಂತೆ ತಡೆಗಟ್ಟಿ ಎಂದು ಅವರು ಮನವಿ ಮಾಡಿದ್ದಾರೆ.
ನೀವೂ ಲಸಿಕೆ ಪಡೆಯುವ ಜೊತೆಗೆ ಕುಟುಂಬದ ಹಿರಿಯರಿಗೂ ಲಸಿಕೆ ಹಾಕಿಸಿ ಮಾರಣಾಂತಿಕ ರೋಗದಿಂದ ಮುಕ್ತಿ ಪಡೆಯಲು ಸಹಕಾರ ನೀಡಿ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿರುವ ಅವರು, ಅನೇಕ ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.ಹೀಗಾಗಿ ಅಂತಹ ಯಾವುದೇ ಆಲೋಚನೆ ಬಿಡಿ ಲಸಿಕೆ ಪಡೆಯಿರಿ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕು ವಿರುದ್ದ ನಾವೆಲ್ಲಾ ಹೋರಾಟ ಮಾಡಬೇಕಾಗಿದೆ,ಹೀಗಾಗಿ ಎರಡನೇ ಆಲೋಚನೆ ಮಾಡದೆ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ ಎಂದಿ ಮನವಿ ಮಾಡಿದ್ದಾರೆ.
ಪದೇವ ಪದೇ ಒಂದಿಲ್ಲೊಂದು ಕಾರಣಕ್ಕೆ ವಿವಾದದ ಕಿಡಿ ಹೊತ್ತಿರುವ ಜೊತೆಗೆ ವಿವಾದವನ್ನು ಮೈಮೈಲೆ ಎಳೆದುಕೊಳ್ಳುವ ನಟಿ ಕಂಗನಾ ರಣಾವತ್, ಲಸಿಕೆ ಪಡೆಯಿರಿ ಎನ್ನುವ ಮೂಲಕ ಯುವಜನರನ್ನು ಪ್ರೇರೇಪಿಸಲು ಮುಂದಾಗಿದ್ದಾರೆ.
ಕೊರೊನಾ ಸೋಂಕಿಗೆ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳು ಮತ್ತು ಸೇವೆ ಮಾಡುತ್ತಿರುವ ವೈದ್ಯರ ಕೆಲಸ ಶ್ಲಾಘನೀಯ ಎಂದು ಅವರು ತಿಳಿಸಿದ್ದಾರೆ