ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಲು ಶಾಸಕ ಸೂಚನೆ

ಮಾನ್ವಿ:ಏ.೨೭-ತಾಲೂಕಿನಲ್ಲಿ ದಿನೇ ದಿನೇ ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತೀರುವ ಹಿನ್ನಲೆಯಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕರ ನೇತೃತ್ವದಲ್ಲಿ ಇಂದು ತಹಸೀಲ್ ಕಚೇರಿ ಸಭಾಂಗಣದಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು.
ನಂತರ ಅಧಿಕಾರಿಗಳೊಂದಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿ, ಸಿರವಾರ ತಾಲೂಕಿನಲ್ಲಿ ಕೋವಿಡ್-೧೯ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಯಾವೆಲ್ಲ ಕ್ರಮಗಳನ್ನು ಕೈಗೊಂಡಿದ್ದೀರಿ ಮತ್ತು ಪ್ರಸ್ತುತ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎನ್ನುವ ಬಗ್ಗೆ ತಹಸೀಲ್ದಾರ ಮತ್ತು ತಾಲೂಕ ವೈದ್ಯಧಿಕಾರಿಗಳನ್ನು ಕೇಳಿದರು.
ತಹಸೀಲ್ದಾರ್ ಮಹೇಶ ಕುಮಾರ ಮಾತನಾಡಿ ಈಗಾಗಲೇ ಕರ್ಫ್ಯೂ ಜಾರಿ ಹಿನ್ನಕೆಯಲ್ಲೆ ನಿಯಮವಳಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ಅಗತ್ಯ ವಸ್ತುಗಳಿಗೆ ಬೆಳಿಗ್ಗೆಯಿಂದ ಮಧ್ಯಾಹ್ನ ೨ ರ ವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮದುವೆಗೆ ಹೆಚ್ಚು ಜನ ಸೇರುವಂತಿಲ್ಲ. ಕೊರೊನಾ ಕೇರ್ ಸೆಂಟರ್ ತೆರೆಯಲಾಗಿದೆ.
ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ, ಸಾಮಾಜಿಕ ಅಂತರ ಕಾಪಾಡಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಅನವಶ್ಯಕವಾಗಿ ಹೊರಗೆ ಬಂದರೆ ಮಾಸ್ಕ್ ಇಲ್ಲದವರಿಗೆ ದಂಢ ಹಾಕಲಾಗುತ್ತದೆ ಎಂದರು.
ನಂತರ ವೈದ್ಯಧಿಕಾರಿ ಚಂದ್ರಶೇಖರಯ್ಯ ಮಾತನಾಡಿ, ಕಳೆದ ೧೫ ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಲ್ಲಿ ಏ.೧ರಿಂದ ೧೦ರ ವರೆಗೆ ೨೯, ಏ.೧ರಿಂದ ೨೨ರ ವರೆಗೆ ೧೭೮ ಪ್ರಕರಣಗಳು ಕಾಣಿಸಿಕೊಂಡಿದ್ದು, ಇಂದು ಒಂದೇ ದಿನದಲ್ಲಿ ೮೨ ಪ್ರಕರಣಗಳು ಬೆಳಕಿಗೆ ಬಂದಿವೆ. ಅದೇ ರೀತಿಯಾಗಿ ರೆಮ್ ಡಿಸಿವಿರ್ ಔಷಧ ಪೊರೈಕೆ ತಿಳಿಸಲಾಗಿದೆ. ತಾಲೂಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ೪೦೦ ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ತಾಲೂಕಿಮ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ ಎಂದರು.
ನಂತರ ಶಾಸಕರು ಮಾತನಾಡಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಸೇರಿ ತಂಡಗಳನ್ನು ರಚನೆ ಮಾಡಿ ಅಮೂಲಕ ಪ್ರತಿ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಜನರಲ್ಲಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ ಅಲ್ಲದೆ ತಾಲೂಕಿಗೆ ಪ್ರವೇಶ ಮಾಡುವ ಸ್ಥಳದಲ್ಕಿ ಚೇಕ್ ಪೋಸ್ಟ್ ಮಾಡಿ ಅಲ್ಲಿ ಪ್ರತಿಯೊಬ್ಬರನ್ನು ಕೊರೊನಾ ಪರೀಕ್ಷೆ ಮಾಡಿ ಒಳಗೆ ಬಿಡಲು ಸೂಚಿಸಿದರು.
ಅದೇರಿತಿಯಾಗಿ ಪಟ್ಟಣದ ಎಲ್ಲಾ ವಾರ್ಡಗಳ ಚರಂಡಿ ಸ್ವಚ್ಛಗೊಳಿಸಿ ಸ್ಯಾನಿಟೈಜರ್ ಹಾಕಬೇಕು, ಮಾರುಕಟ್ಟೆಗಳನ್ನು ಮೂರು ಬೇರೆ ಬೇರೆ ಸ್ಥಳಗಳಲ್ಲಿ ಸ್ಥಳಾಂತರ ಮಾಡಲು ಪುರಸಭೆ ಅಧಿಕಾರಿಗೆ ತಿಳಿಸಿದರು. ಬಡವರಿಗೆ ಉಚಿತ ಆಹಾರ ಕಿಟ್ ವ್ಯವಸ್ಥೆ ನೀಡಲು ಅವಕಾಶ ವಿದ್ದಲ್ಲಿ ನೀಡುವ ವ್ಯವಸ್ಥೆ ಮಾಡಿ ನನ್ನ ಸಹಕಾರ ಇದೆ ಎಂದು ತಹಸೀಲ್ದಾರರಿಗೆ ಹೇಳಿದರು. ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ತುಂಬ ಜವಬ್ದಾರಿಯಿಂದ ಕೆಲಸ ಮಾಡಿ ಯಾವುದಕ್ಕೆ ಜನರ ಪ್ರಾಣ ಅಪಾಯ ಆಗದಂತೆ ನೋಡಿಕೊಳ್ಳಿ ಕಳೆದ ಬಾರಿ ಎಲ್ಲಾ ಅಧಿಕಾರಿಗಳು ತುಮಬ ಪ್ರಮಾಣಿಕವಾಗಿ ಕೆಲಸಮಾಡಿದ್ದೀರಿ ಈಗಲೂ ಕೂಡ ನಿಮ್ಮ ಕೆಲಸದಿಂದ ಕೊರೊನಾ ೨ನೇ ಅಲೆಯನ್ನು ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಪಿಐ, ಪಿಎಸ್‌ಐ, ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಎಸ್.ಗುಢಾಳ, ಪುರಸಭೆ ಮುಖ್ಯಾಧಿಕಾರಿ ಜಗದೀಶ ಭಂಡಾರಿ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.