ಲಸಿಕೆ ಪಡೆಯಲು ಗ್ರಾಮಸ್ಥರು ಅಲರ್ಟ ! ಕೊವಿಡ್ ಮುಕ್ತದತ್ತ ಕನ್ನಾಳ ಗ್ರಾಮ !

ವಿಜಯಪುರ, ಜೂ.9-ತಾಲೂಕಿನ ಗುಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕನ್ನಾಳ ಗ್ರಾಮದಲ್ಲಿನ ಭಾಗಶಃ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆಗೆ ಉತ್ತಮ ಸ್ಪಂದನೆ ದೊರೆತಿದ್ದು ಕೋವಿಡ್ 19 ರೋಗ ನಿಯಂತ್ರಣಕ್ಕಾಗಿ ಸರಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಪಾಲಿಸಿ ಜನತೆಗೆ ಲಸಿಕೆ ನೀಡುವ ಕಾರ್ಯವನ್ನು ಇಲ್ಲಿ ಯಶಸ್ವಿಯಾಗಿ ಅನುಷ್ಟಾನ ಗೊಳಿಸಿ ನಿರ್ವಹಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯೆ ಶ್ರೀಮತಿ ಅರ್ಚನಾ ಮೋಹನ ಚವ್ಹಾಣ ತಿಳಿಸಿದರು.
ಕನ್ನಾಳ ಗ್ರಾಮದ ಜೈ ಹನುಮಾನ್ ಪ್ರೌಢಶಾಲೆಯಲ್ಲಿ ನಡೆದ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು,45 ವರ್ಷ ಮೇಲ್ಪಟ್ಟ ಎಲ್ಲ ವರ್ಗದ ಫಲಾನುಭವಿ ಜನರಿಗೆ ಕೋವಿಡ್ ನಿಯಂತ್ರಣ ಸಾಧಿಸಲು ಉಚಿತ ಲಸಿಕೆ ನೀಡಲಾಗುತ್ತಿದೆ ಎಂದರು.
ಕನ್ನಾಳ ಗ್ರಾಮದಲ್ಲಿ ಲಸಿಕಾಕರಣ ವ್ಯವಸ್ಥೆ ವ್ಯವಸ್ಥಿತವಾಗಿ ಸಾಗುತ್ತಿದ್ದು ಅದು ಪ್ರಗತಿ ಹಂತದಲ್ಲಿದೆ. ಎಲ್ಲರ ಸಹಕಾರದಿಂದ ಕೋವಿಡ್ ವ್ಯಾಕ್ಸಿನೇಷನ್ ಲಸಿಕಾಕರಣ ಯದ್ದೋಪಾದಿಯಲ್ಲಿ ನಡೆಯುತ್ತಿದೆ. ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಗ್ರಾಮಸ್ಥರಲ್ಲಿದ್ದ ಉದಾಸೀನತೆ, ಭಯ, ತಪ್ಪು ಕಲ್ಪನೆ ಮಾಹಿತಿಯನ್ನು ಮೊದಲು ತೋಡೆದು ಹಾಕಿ ಯಾವುದೇ ಕಾರಣಕ್ಕೂ ಲಸಿಕೆ ಕುರಿತು ಆತಂಕ ನಿಮ್ಮಲ್ಲಿ ಬೇಡವೇ ಬೇಡ. ಭಯ ತೊರೆದು ಧೈರ್ಯದಿಂದ ಲಸಿಕೆ ಹಾಕಿಸಿಕೊಳ್ಳಿ. ಮುನ್ನೆಚ್ಚರಿಕೆಯಿಂದ ಈಗಿಂದಲೇ ಆಲರ್ಟ ಅಗಿ ಜೀವ ರಕ್ಷಣಾ ಕ್ರಮಗಳನ್ನು ಅನುಸರಿಸಿ ಎಂದು ವ್ಯಾಪಕವಾಗಿ ಮನವರಿಕೆಯುತ್ ಜಾಗೃತಿ ಮೂಡಿಸಿ ಗ್ರಾಮಸ್ಥರನ್ನು ಎಚ್ಚರಿಸಿ ವಿಶ್ವಾಸಕ್ಕೆ ತಗೆದುಕೊಳ್ಳಲಾಗಿತ್ತು.
ಇದರಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ, ಕರೋನಾ ವಾರಿಯರ್ಸ್‍ಗಳ ಪಾತ್ರ ಪ್ರಮುಖವಾಗಿತ್ತು. ಗ್ರಾಪಂ ಅಧ್ಯಕ್ಷರ, ಕಾರ್ಯದರ್ಶಿಗಳ, ಸರ್ವಸದಸ್ಯರ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಇಲಾಖೆಗಳ ಸಿಬ್ಬಂದಿಗಳ, ಜನಪ್ರತಿನಿಧಿಗಳ, ಗ್ರಾಮದ ಪ್ರಮುಖರ ಮುತುವರ್ಜಿಯಿಂದ ಲಸಿಕಾ ಹಾಕಿಸಿಕೊಳ್ಳುವ ಕುರಿತು ಪದೇಪದೇ ಮನವರಿಕೆ, ಜನಜಾಗೃತಿ ಮೂಡಿಸಲಾಗಿದ್ದ ಹಿನ್ನೆಲೆಯಲ್ಲಿ ಲಸಿಕಾ ಹಾಕುವ ಕಾರ್ಯದಲ್ಲಿ ಭಾಗಶಃ ಮುನ್ನಣೆ ಹೊಂದಲಾಗಿದೆ. ಇನ್ನೂ ಲಸಿಕೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ನೂರರಷ್ಟು ಗುರಿ ಸಾಧನೆಯೊಂದಿಗೆ ತಮ್ಮ ಕನ್ನಾಳ ಗ್ರಾಮ ಲಸಿಕೆ ಮುಕ್ತ ಗ್ರಾಮವನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಈಗಾಗಲೇ ಶೇ, 80 ಕ್ಕೂ ಹೆಚ್ಚು ಜನತೆಗೆ ಲಸಿಕೆ ಹಾಕಲಾಗಿದೆ. ಗ್ರಾಮಸ್ಥರು ಈಗ ಲಸಿಕೆ ಕೇಂದ್ರದ ಕಡೆಗೆ ಸ್ವಯಂ ಬಂದು ಲಸಿಕೆ ಪಡೆಯುವಲ್ಲಿ ಆಸಕ್ತರಾಗಿದ್ದಾರೆ. ಲಸಿಕೆ ಹಾಕಿಸಿಕೊಂಡರೆ ಸುರಕ್ಷಿತವಾಗಿರಬಹುದು. ಕೋವಿಡ್ ಪಾಸಿಟಿವ್ ಬಂದು ಸೋಂಕು ತಗಲಿದರು ಸಹ ಲಸಿಕೆಯ ರೋಗ ನಿರೋಧಕ ಶಕ್ತಿಯಿಂದ ಅದನ್ನು ತಡೆಗಟ್ಟಬಹುದು ಎಂಬ ತಿಳುವಳಿಕೆ ನೀಡಲಾಗಿತ್ತು. ಹೀಗಾಗಿ ಈ ಮಹಾಮಾರಿ ಕೋವಿಡ್ ರೋಗದಿಂದ ಮುಕ್ತವಾಗಿ ಬಚಾವ್ ಅಗಲು ಗ್ರಾಮಸ್ಥರು ಮನಸ್ಸು ತೋರಿರುವ ಈ ಸಾಮಾಜಿಕ ಬೆಳವಣಿಗೆ ಉತ್ತಮ ಸಂದೇಶ ಸಾರುವಂತಿದೆ ಎಂದು ಗ್ರಾಪಂ ಸದಸ್ಯೆ ಅರ್ಚನಾ ಮೋಹನ ಚವ್ಹಾಣ ಹೇಳಿದರು.
ಗ್ರಾಪಂ ಅಧ್ಯಕ್ಷೆ ಭಾಗಶ್ರೀ ರಾಠೋಡ, ಪಿಡಿಓ ಉತ್ತಮ ಬನಸೋಡೆ, ಕಾರ್ಯದರ್ಶಿ ಮಾಲಾಶ್ರೀ ಅಮ್ಮನವರ, ಸಮುದಾಯ ಆರೋಗ್ಯಾಧಿಕಾರಿ ಸಂತೋಷ ಹತ್ತಿಕಾಳ, ಸಿಎಚ್‍ಓ ಕುಮಾರ ಜಾಧವ, ಆರೋಗ್ಯ ಸಹಾಯಕ ಸಿ.ಆರ್.ಮಾನ್ವಿ, ಗ್ರಾಪಂ ಸದಸ್ಯ ಪ್ರಕಾಶ ಚವ್ಹಾಣ, ಹುಸೇನಿ ಹೊಸಮನಿ, ಅಶೋಕ ಹತ್ತಳ್ಳಿ, ಸವಿತಾ ಜಂಬಗಿ, ತಾಯವ್ವ ಬಿರಾದಾರ, ಸಂತೋಷ ದೊಡಮನಿ, ಕಾಶೀರಾಯಗೌಡ ಪಾಟೀಲ್, ಮಹಿಳಾ ಆರೋಗ್ಯ ಸಹಾಯಕಿ ಬಿಸ್ಮಿಲ್ಲಾ ಅವಟಿ, ಸಂಗೀತಾ ರಾಠೋಡ ಗುತ್ತಿಗೆದಾರ ಮೋಹನ ಚವ್ಹಾಣ, ಆಶಾ ಕಾರ್ಯಕರ್ತೆ ಸುನೀತಾ ಚವ್ಹಾಣ, ಅಂಗನವಾಡಿ ಕಾರ್ಯಕರ್ತೆ ತಾರಾಬಾಯಿ ನಾಯಕ, ಗ್ರಾಮದ ಕ್ರಿಯಾಶೀಲ ಮನಸ್ಸಿನ ಯುವ ಕಾರ್ಯಪಡೆ ತಂಡ ಸೇರಿದಂತೆ ಇತರರು ಜೀವದ ಹಂಗ ತೊರೆದು ಹಗಲಿರುಳು ಶ್ರಮಿಸಿದ ಪರಿಣಾಮ ಗ್ರಾಮಸ್ಥರಿಗೆ ಲಸಿಕೆ ನೀಡುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಾಗಿದೆ ಎಂದು ಅವರು ತಿಳಿಸಿದರು.