ಲಸಿಕೆ ಪಡೆದ ಪ್ರತಿ ಮಗುವಿನ ದಾಖಲೆ ಸಂಗ್ರಹಿಸಿ ಯು-ವಿನ್ ತಂತ್ರಾಂಶದಲ್ಲಿ ಅಳವಡಿಸಿ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೭;  ಇಂದಿನಿಂದ ಸೆ. 12 ರವರೆಗೆ ನಡೆದ 1ನೇ ಸುತ್ತಿನ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಸೆ.11 ರಿಂದ 16 ವರೆಗೆ 2ನೇ ಸುತ್ತಿನ ಲಸಿಕೆ ಅಭಿಯಾನ ಜರುಗಲಿದ್ದು, 768 ಗರ್ಭಿಣಿಯರು, ಎರಡು ವರ್ಷದ ಒಳಗಿನ 2843 ಮಕ್ಕಳು, 2 ರಿಂದ 5 ವರ್ಷ ಒಳಗಿನ 14 ಮಕ್ಕಳು ಸೇರಿ ಒಟ್ಟು 3625 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕೆ ಪಡೆದ ಪ್ರತಿ ಮಗುವಿನ ದಾಖಲೆ ಸಂಗ್ರಹಿಸಿ ಯು-ವಿನ್ ತಂತ್ರಾಂಶದಲ್ಲಿ ತಪ್ಪದೇ ಅಳವಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಜರುಗಿದ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.ಪ್ರತಿ 5 ಮಕ್ಕಳಿಗೆ ಒಂದು ಲಸಿಕಾ ಕಾರ್ಯಕ್ರಮ ನಡೆಸಬೇಕು. ಲಸಿಕಾ ಅಭಿಯಾನ ಯಶಸ್ವಿಯಾಗಲೂ ಪ್ರತಿ ತಾಲ್ಲೂಕು ಮಟ್ಟದಲ್ಲೂ ಕಾರ್ಯಪಡೆ ಸಭೆ ನಡೆಸಬೇಕು. ತಾಲ್ಲೂಕು ನೋಡಲ್ ಅಧಿಕಾರಿಗಳು ಇತರೆ ಇಲಾಖೆಗಳೊಡನೆ ಸಮನ್ವಯ ಸಾಧಿಸಿ ಲಸಿಕೆ ಅಭಿಯಾನದ ಯಶಸ್ವಿಗೆ ಶ್ರಮಿಸಬೇಕು. ತಾಲ್ಲೂಕುಗಳಲ್ಲಿ ಈಗಾಗಲೇ ಸಮೀಕ್ಷೆಯ ಮೂಲಕ ಲಸಿಕೆಯಿಂದ ವಂಚಿತರಾದ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ರೂಪಿಸಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳನ್ನು ಲಸಿಕಾಕರಣಕ್ಕೆ ಕರೆತರಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಹೇಳಿದರು.
520 ಸ್ಥಾನಿಕ ಹಾಗೂ 126 ಸಂಚಾರಿ ಸೇರಿ ಒಟ್ಟು 646 ಲಸಿಕಾಕರಣ ನಡೆಸಲು ಉದ್ದೇಶಿಸಲಾಗಿದೆ. ಕಳೆದ ಬಾರಿ ಲಸಿಕಾಕರಣದಿಂದ ಉಳಿದ ಮಕ್ಕಳು ಈ ಬಾರಿಯ ಬಿಟ್ಟು ಹೋಗಬಾರದು. ಪೋಷಕರು ಮಕ್ಕಳನ್ನು ಕರೆದುಕೊಂಡು ಕೆಲಸಕ್ಕೆ ತೆರಳಿರುವುದು, ಮಗು ಆರೋಗ್ಯದಿಂದ ಇಲ್ಲದಿರುವುದು, ಪೋಷಕರಿಗೆ ಲಸಿಕೆ ಮಾಡಿಸಲು ಆಸಕ್ತಿ ಇಲ್ಲದಿರುವುದು ನಿಗದಿತ ಗುರಿ ಸಾಧಿಸಲು ಅಡೆತಡೆಯಾಗಿವೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರತಿ ಮಗುವಿನ ಮನೆಯವರಿಗೂ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿ. ಗ್ರಾಮೀಣ ಭಾಗಗಳಿಂತ ನಗರ ಪ್ರದೇಶದಲ್ಲೇ ಮಕ್ಕಳು ಲಸಿಕೆ ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ನಗರ ಪ್ರದೇಶದ ಮಕ್ಕಳಿಗೆ ಲಸಿಕೆ ನೀಡಲು ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದರು.