ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

ಕೆ.ಆರ್.ಪುರ, ಏ.೧೮- ಕರೋನ ಎರಡನೇ ಅಲೆ ತೀವ್ರಗತಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವ ಮೂಲಕ ಕೊರೊನಾ ಸೋಂಕಿನಿಂದ ಮುಕ್ತರಾಗುವಂತೆ ಶಾಂತಕೃಷ್ಣಮೂರ್ತಿ ಫೌಂಡೇಶನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಎನ್‌ಆರ್‌ಐ ಬಡಾವಣೆ ತಮ್ಮ ಕಚೇರಿಯಲ್ಲಿ ಲಸಿಕೆ ನೀಡುವ ಪ್ರಕಿಯೆಗೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಕೊರೊನಾದಿಂದ ಅನೇಕ ಮಂದಿ ತೊಂದರೆ ಅನುಭವಿಸಿದ್ದು, ಇದಕ್ಕೆಲ್ಲ ಕೊರೊನಾ ಲಸಿಕೆ ಒಂದು ಅತ್ಯುತ್ತಮ ಪರಿಹಾರವಾಗಿದ್ದು ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ತಿಳಿಸಿದರು.
ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಸೇರಿದಂತೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ೪೫ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.
ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಸಾರ್ವಜನಿಕರು ಯಾವುದೇ ರೀತಿಯ ಅಂಜಿಕೆಯಿಲ್ಲದೆ ಲಸಿಕೆ ಪಡೆಯುವಂತೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಸ್ಥಾಪಕ ಸದಸ್ಯ ಕಲ್ಕೆರೆ ಕೃಷ್ಣಮೂರ್ತಿ, ಆರೋಗ್ಯ ಇಲಾಖೆಯ ವೈದ್ಯರು ಆಶಾ ಕಾರ್ಯಕರ್ತೆರು ಉಪಸ್ಥಿತ ಇದ್ದರು.