ಲಸಿಕೆ ಪಡೆದು ಕೋವಿಡ್ ಮುಕ್ತ ವಿಜಯಪುರಕ್ಕೆ ಕೈ ಜೋಡಿಸಿಃಯತ್ನಾಳ

ವಿಜಯಪುರ, ಮೇ.01- ನಗರ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳರವರು ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು ಅದರಂತೆ ಇಂದು ವಾರ್ಡ ನಂ-03 ರ ಗ್ಯಾಂಗಬಾವಡಿ ಸರ್ಕಾರಿ ಶಾಲೆ ನಂ.10 ರಲ್ಲಿ ಹಾಗೂ ತೊರವಿ ಗ್ರಾಮದ ಲಕ್ಷ್ಮೀ ಗುಡಿ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಜಿಲ್ಲಾಧಿಕಾರಿಗಳೊಂದಿಗೆ ಶ್ರೀ ಸಿದ್ಧೇಶ್ವರ ಸಂಸ್ಥೆ, ಜೈನ್ ಫೌಂಡೇಶನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಭಾಗಿತ್ವದಲ್ಲಿ ಆಕ್ಷಿಜನ್ ಹಾಗೂ ಸಾಮಾನ್ಯ ಬೆಡ್‍ಗಳನ್ನು ಹೊಂದಿದ ನಗರದ ಸೋಲಾಪೂರ ರಸ್ತೆಯ ಜೈನ್ ಕಾಲೇಜ ಕಟ್ಟಡದಲ್ಲಿ ತೆರೆಯಲಾದ ಕೋವಿಡ್ ಕೇರ್ ಸೆಂಟರ್ (ಕೋವಿಡ್ ಆರೈಕೆ ಕೇಂದ್ರ) ಪ್ರಾರಂಭಕ್ಕೆ ಚಾಲನೆ.
ಶ್ರೀ ಸಿದ್ಧೇಶ್ವರ ಗುಡಿ ಹತ್ತಿರದ ಕೃಷ್ಣಾ ಕಾಂಪ್ಲೇಕ್ಷ್‍ನಲ್ಲಿಯ ಶ್ರೀ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಕೇಂದ್ರದಲ್ಲಿ ಪ್ರತ್ಯೇಕ 27 ಬೆಡ್‍ಗಳ ಸೆಂಟ್ರಲೈಸ್ಡ್ ಆಕ್ಷಿಜನ್, ಎನ್.ಆಯ್.ವಿ ವೆಂಟಿಲೇಟರ್ ಹೊಂದಿದ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.
ಇವತ್ತು ಶ್ರೀ ಸಿದ್ಧೇಶ್ವರ ಸಂಸ್ಥೆ, ಜೈನ್ ಫೌಂಡೇಶನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಭಾಗಿತ್ವದಲ್ಲಿ ಆಕ್ಷಿಜನ್ ಹಾಗೂ ಸಾಮಾನ್ಯ ಬೆಡ್‍ಗಳನ್ನು ಹೊಂದಿದ ನಗರದ ಸೋಲಾಪೂರ ರಸ್ತೆಯ ಜೈನ್ ಕಾಲೇಜ ಕಟ್ಟಡದಲ್ಲಿ 100 ಬೆಡ್‍ಗಳನ್ನು ಹೊಂದಿದ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು ಇಲ್ಲಿ ಬರುವಂತಹ ರೋಗಿಗಳಿಗೆ ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ಉಚಿತವಾಗಿ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ ಊಟ ಸಾಯಂಕಾಲ ಅಲ್ಪೋಪಹಾರ ಮತ್ತು ರಾತ್ರಿ ಹೊತ್ತಿನ ಊಟ, ಬಿಸಿ ನೀರು, ಹಣ್ಣು ಹಂಪಲ ಕೊಡುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿದ್ಧೇಶ್ವರ ಸಂಸ್ಥೆಯ ಶಾಲಾ ಬಸ್‍ಗಳನ್ನು ಹಾಗೂ ಸಿಬ್ಬಂದಿಗಳನ್ನು ಅಲ್ಲಿ ನೇಮಿಸಲಾಗಿದೆ ಎಂದರು.
ಇವತ್ತಿನಿಂದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶ್ರೀ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಕೇಂದ್ರದಲ್ಲಿ 27 ಬೆಡ್‍ಗಳ ವೆಂಟಿಲೇಟರ್, ಆಕ್ಷಿಜನ್ ಒಳಗೊಂಡಂತಹ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಯನ್ನು ತೆರೆದಿದ್ದು ಇಂದಿನಿಂದ ಅದು ಸೇವೆ ಆರಂಭ ಮಾಡಲಿದೆ ಒಂದು ಕಡೆ ಲಸಿಕೆ ಕಾರ್ಯಕ್ರಮ ಮಾಡುತ್ತಿದ್ದು ಇನ್ನೋಂದಡೆ ಕೋವಿಡ್ ರೋಗಿಗಳಿಗಾಗಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವಾರ್ಡ ನಂ-03 ರ ಗ್ಯಾಂಗಬಾವಡಿ ಸರ್ಕಾರಿ ಶಾಲೆ ನಂ.10 ರಲ್ಲಿ ಇಂದು ನಾನು ಎರಡನೇ ಹಂತದ ಲಸಿಕೆ ಪಡೆದುಕೊಂಡಿದ್ದೇನೆ, ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎನ್ನುವುದಕ್ಕೆ ನಾನೇ ಸಾಕ್ಷಿ, 28 ದಿನಗಳ ಹಿಂದೆ ನಾನು ಮೊದಲ ಡೋಸ್ ಲಸಿಕೆ ಪಡೆದುಕೊಂಡ ಸಂದರ್ಭದಲ್ಲಿ ನಗರದಲ್ಲಿ ಕೇವಲ 3% ಲಸಿಕೆ ಹಂಚಿಕೆಯಾಗಿತ್ತು, ಆದರೆ ನಾವು ಲಸಿಕೆ ಅಭಿಯಾನ ಪ್ರಾರಂಭ ಮಾಡಿದಾಗಿನಿಂದ ಇಂದು ನಗರವು ಶೇಖಡಾ 57% ತಲುಪಿದೆ ಇಡೀ ಕರ್ನಾಟಕದಲ್ಲೇ ವಿಜಯಪುರ ನಗರ ನಂ.1 ಇದೆ ಎಂದರು.
18 ವರ್ಷ ಮೇಲ್ಪಟ್ಟ ಯುವಕರಿಗೂ ಸಹ ಸರ್ಕಾರದಿಂದ ಲಸಿಕೆ ಪೂರೈಕೆ ಸೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಸರ್ಕಾದಿಂದ ಪೂರೈಕೆಯಾಗದಿದ್ದರೂ ಸಹ ವಿಜಯಪುರ ನಗರದ 18 ವರ್ಷ ಮೇಲ್ಪಟ್ಟ ಎಲ್ಲ ಯುವಕರಿಗೂ ನನ್ನ ವಯಕ್ತಿಕ ಹಣ ನೀಡಿ ಲಸಿಕೆ ಹಾಕಿಸುತ್ತೇನೆ ಎಂದರು.
ನಗರದ ಎಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿರುವ 45 ವರ್ಷ ಮೇಲ್ಪಟ್ಟ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಲಸಿಕೆ ಪಡೆದ ಎಲ್ಲರೂ ಈ ರೋಗದಿಂದ ಪಾರಾಗಬಹುದಾಗಿದ್ದು, ಲಸಿಕೆ ಪಡೆದಾಗಲೂ ಸಹ ಕೆಲವೊಮ್ಮೆ ರೋಗ ಲಕ್ಷಣ ಕಾಣಬಹುದು ಆದರೆ ಪ್ರಾಣಕ್ಕೆ ಏನು ತೊಂದರೆಯಾಗುವುದಿಲ್ಲ, ತೀರ್ವ ಸ್ವರೂಪದ ಅಪಾಯಗಳಾಗುವದಿಲ್ಲ, ರೋಗದಿಂದ ಆರೋಗ್ಯದಲ್ಲಿ ತೀರ್ವ ತೊಂದರೆಯಾಗುವದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಆದ್ದರಿಂದ ತಪ್ಪದೆ ಸಲಿಕೆ ಪಡೆಯಿರಿ ಎಂದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆ ಚೇರಮನ್, ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷರಾದ ಬಸಯ್ಯ ಹಿರೇಮಠ, ಸಿದ್ಧಸಿರಿ ಸೌಹಾರ್ದ ಸಹಕಾರಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಘವ ಅಣ್ಣಿಗೇರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಎಸ್.ಎಲ್.ಲಕ್ಕಣ್ಣವರ, ಡಾ. ಶರಣ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಜೈನ್ ಫೌಂಡೇಶನ್ ಶಾಂತಿಲಾಲ್ ಓಸ್ವಾಲ್, ಸಿದ್ಧಸಿರಿ ಸೌಹಾರ್ದ ಸಹಕಾರಿ ನಿರ್ದೇಶಕರುಗಳು, ಸಿದ್ಧೇಶ್ವರ ಸಂಸ್ಥೆಯ ಪದಾಧಿಕಾರಿಗಳು, ಜೈನ್ ಫೌಂಡೇಶನ್ ಹಾಗೂ ಜೈನ್ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.